ದೇವಸ್ಥಾನಗಳನ್ನು ಸರಕಾರಿಕರಣದಿಂದ ಮುಕ್ತಗೊಳಿಸಲು ವಿಶ್ವ ಹಿಂದೂ ಪರಿಷತ್ ನಿಂದ ಶೀಘ್ರದಲ್ಲೇ ರಾಷ್ಟ್ರೀಯ ಅಭಿಯಾನ ಆರಂಭ !

ನವ ದೆಹಲಿ – ಭಾರತದಲ್ಲಿ ಒಂದೇ ಒಂದು ಮಸೀದಿ ಅಥವಾ ಚರ್ಚ್ ಸರಕಾರದ ಆಧೀನದಲ್ಲಿ ಇಲ್ಲ. ಅಲ್ಪಸಂಖ್ಯಾತ ಮುಸಲ್ಮಾನ ಮತ್ತು ಕ್ರೈಸ್ತರು ತಮ್ಮ ಧಾರ್ಮಿಕ ಸ್ಥಳಗಳನ್ನು ನಿರ್ವಹಿಸಬಹುದಾದರೆ ಹಿಂದುಗಳು ಏಕೆ ಇಲ್ಲ ? ತಮಿಳುನಾಡಿನಲ್ಲಿ ೪೦೦ ಕ್ಕೂ ಹೆಚ್ಚಿನ ದೇವಸ್ಥಾನಗಳು ಸರಕಾರ ಆಧೀನದಲ್ಲಿದೆ. ಇದು ಸಂವಿಧಾನದ ಉಲ್ಲಂಘನೆಯಾಗಿದೆ. ಸರ್ವೋಚ್ಚ ನ್ಯಾಯಾಲಯ ಕೂಡ ‘ದೇವಸ್ಥಾನಗಳ ಆಸ್ತಿಯ ವ್ಯವಹಾರಕ್ಕೆ ಸರಕಾರದ ಯಾವುದೇ ಸಂಬಂಧ ಇರಬಾರದು’, ಎಂದು ಮೂರು ಬಾರಿ ತೀರ್ಪು ನೀಡಿದೆ. ಭಕ್ತರು ಯಾವುದಕ್ಕಾಗಿ ದಾನ ಮಾಡಿಲ್ಲವೋ ಅದಕ್ಕಾಗಿ ದೇವಸ್ಥಾನದ ಸಂಪತ್ತು ಖರ್ಚು ಮಾಡಲಾಗುತ್ತಿದೆ, ಇದಕ್ಕೆ ಸಂಬಂಧಿಸಿದ ಇಂತಹ ಅನೇಕ ಉದಾಹರಣೆಗಳಿವೆ. ಆದ್ದರಿಂದ ವಿಶ್ವ ಹಿಂದೂ ಪರಿಷತ್ ಬೇಗನೆ ಸಂಪೂರ್ಣ ದೇಶದಲ್ಲಿ ದೇವಸ್ಥಾನಗಳನ್ನು ಸರಕಾರಿಕರಣದಿಂದ ಮುಕ್ತಗೊಳಿಸುವುದಕ್ಕಾಗಿ ರಾಷ್ಟ್ರೀಯ ಅಭಯಾನ ನಡೆಸುವುದು, ಎಂದು ವಿಶ್ವ ಹಿಂದೂ ಪರಿಷತ್ತಿನ ಕಾರ್ಯದರ್ಶಿ ಸೂರೆಂದ್ರ ಜೈನ ಇವರು ಪ್ರಸಾರ ಮಾಧ್ಯಮಗಳ ಜೊತೆ ಮಾತನಾಡುವಾಗ ಮಾಹಿತಿ ನೀಡಿದರು.

ಕಾಶಿ ಮತ್ತು ಮಥುರ ಮುಸಲ್ಮಾನರು ಹಿಂತಿರುಗಿಸಿದರೆ, ಹಿಂದುಗಳು ಸುಮ್ಮನಾಗುವರು !

ಮುಸಲ್ಮಾನ ಆಕ್ರಮಕರು ಭಾರತದಲ್ಲಿನ ಲಕ್ಷಾಂತರ ದೇವಸ್ಥಾನಗಳನ್ನು ನೆಲೆಸಮ ಮಾಡಿ ಅಲ್ಲಿ ಮಸೀದಿ ಕಟ್ಟಿದರು. ಇದು ಸಂಪೂರ್ಣ ಜಗತ್ತಿಗೆ ತಿಳಿದಿದೆ. ೧೯೮೪ ರಲ್ಲಿ ಭಾರತದಲ್ಲಿನ ಸಂತರು ಮುಸಲ್ಮಾನರಿಗೆ, ‘ನೀವು ನಮಗೆ ಕೇವಲ ಅಯೋಧ್ಯ, ಮಥುರ ಮತ್ತು ಕಾಶಿ ನೀಡಿ ನಾವು ಇತರ ಲಕ್ಷಾಂತರ ದೇವಸ್ಥಾನಗಳನ್ನು ಮರೆಯುವೆವು’, ಎಂಬ ಪ್ರಸ್ತಾಪ ನಿಡಿದ್ದರು. ಆದರೆ ಅವರು ಇದನ್ನು ಒಪ್ಪದೇ ಇರುವುದರಿಂದ ಇಂದಿನ ಪರಿಸ್ಥಿತಿಗೆ ಮುಸಲ್ಮಾನರ ನೇತೃತ್ವವೇ ಹೊಣೆಯಾಗಿದೆ. ಆ ಸಮಯದಲ್ಲಿ ಮುಸಲ್ಮಾನರು ಒಪ್ಪಿಕೊಂಡಿದ್ದರೆ, ಆಗ ೩ ಸ್ಥಾನಗಳು ನಮ್ಮದಾಗಿರುತ್ತಿತ್ತು ಮತ್ತು ಈಗಿನ ವಿಷಯ ಮುಂದುವರಿಯುತ್ತಿರಲಿಲ್ಲ. ಈಗ ೩ ರಲ್ಲಿ ೨ ಉಳಿದಿವೆ. ನನಗೆ ಅನಿಸುತ್ತದೆ ೨ ಸ್ಥಳಗಳು ನೀಡಿದರೆ, ಆಗ ಸಮಾಜದಲ್ಲಿ ಜಾಗೃತ ವರ್ಗಕ್ಕೆ ‘ಎಲ್ಲೆಡೆ ದೇವಸ್ಥಾನಗಳನ್ನು ಹುಡುಕಬೇಡಿ’, ಎಂದು ತಿಳಿಸಿ ಹೇಳಬಹುದು. ಆದ್ದರಿಂದ ಮಥುರ, ಕಾಶಿ ಹಿಂದುಗಳಿಗೆ ಹಿಂತಿರುಗಿಸಲು ಮುಸಲ್ಮಾನ ಸಮಾಜಕ್ಕೆ ಈಗಲೂ ಕೂಡ ಅವಕಾಶವಿದೆ. ಹಿಂದೂ ಜನಾಂಗ ಒಗ್ಗಟ್ಟಿ ಮತ್ತು ಸೌಹಾರ್ದತೆಗಾಗಿ ನಿಲ್ಲಬಹುದು’, ಎಂದು ಹೇಳಿದರು.