ಗಾಜಿಯಾಬಾದ (ಉತ್ತರಪ್ರದೇಶ) – ‘ದೇಶದಲ್ಲಿ ಒಬ್ಬ ಮುಸಲ್ಮಾನ ಕೂಡಾ ಇರಬಾರದು’, ಎಂದು ಹಿಂದೂಗಳು ಹೇಳುತ್ತಿದ್ದರೆ, ಆತ ಹಿಂದೂ ಅಲ್ಲ. ಹಿಂದೂ ಧರ್ಮದಲ್ಲಿ ಹಸುವನ್ನು ಪವಿತ್ರವೆಂದು ನಂಬುತ್ತಾರೆ; ಆದರೆ ಓರ್ವ ವ್ಯಕ್ತಿ ವಿಶಿಷ್ಟ ಧರ್ಮದವರಾಗಿದ್ದಾರೆಂದು ಅವರ ಮೇಲೆ ಹಲ್ಲೆ ಮಾಡುವುದು, ಸಮೂಹದಿಂದ ದಾಳಿ ಮಾಡುವುದು ಇಂತಹವುಗಳು ಹಿಂದೂ ಧರ್ಮವಿರೋಧಿಯಾಗಿದೆ. ಇಂತಹವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು, ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರಸಂಘಚಾಲಕ ಡಾ. ಮೋಹನ್ ಭಾಗವತ್ ಇವರು ಒತ್ತಾಯಿಸಿದ್ದಾರೆ. ಅವರು ಇಲ್ಲಿಯ ಮೇವಾಡ ಮಹಾವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ ಒಂದು ಪುಸ್ತಕ ಪ್ರಕಾಶನದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ‘ಭಾರತ ಹಿಂದೂ ರಾಷ್ಟ್ರವಾಗಿದೆ; ಆದರೆ ಸಮೂಹವು ದಾಳಿ ಮಾಡುವುದು ಇದು ಅಪರಾಧವಾಗಿದೆ. ನಾವು ಎಂದಿಗೂ ಅವರನ್ನು ಬೆಂಬಲಿಸುವುದಿಲ್ಲ. ‘ತಮ್ಮನ್ನು ಹಿಂದೂ ಅಲ್ಲ, ಆದರೆ ಭಾರತೀಯ ಎಂದು ಹೇಳಿಕೊಳ್ಳಿ’, ಎಂದು ಅವರು ಹೇಳಿದರು.
ಸಾಮೂಹಿಕ ಥಳಿತದಲ್ಲಿ ಭಾಗವಹಿಸುವವರು ಹಿಂದುತ್ವ ವಿರೋಧಿಗಳು: ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್
#RSS https://t.co/lkF1v2S16U— vijaykarnataka (@Vijaykarnataka) July 4, 2021
ಸರಸಂಘಚಾಲಕ ಡಾ. ಭಾಗವತ್ ಇವರು ಮಂಡಿಸಿದ ವಿಚಾರ
೧. ಕೆಲವರು ನನ್ನನ್ನು ಮುಗ್ಧ ಎಂದು ತಿಳಿಯುತ್ತಾರೆ, ಆದರೆ ನಾನು ಸತ್ಯವನ್ನೇ ಹೇಳುವೆ, ಹಿಂದೂ ಹಾಗೂ ಮುಸಲ್ಮಾನರು ನೂರಾರು ವರ್ಷಗಳಿಂದ ಒಳ್ಳೆಯ ರೀತಿಯಿಂದ ಇರುತ್ತಿರುವುದರಿಂದ ಇಬ್ಬರ ‘ಡಿಎನ್‍ಎ’ ಒಂದೇ ಆಗಿದೆ. ನನ್ನ ಈ ಹೇಳಿಕೆಯಿಂದ ಅನೇಕ ಜನರಿಗೆ ಆಶ್ಚರ್ಯವಾಗಬಹುದು; ಆದರೆ ವಿಚಾರವಂತ ಹಿಂದೂಗಳು ನನ್ನ ಅಭಿಪ್ರಾಯವನ್ನು ಒಪ್ಪಿಕೊಳ್ಳುವರು.
೨. ಭಾರತ ಒಂದು ರಾಷ್ಟ್ರವಾಗಿದ್ದು ಇಲ್ಲಿ ಎಲ್ಲ ಧರ್ಮದವರಾಗಿದ್ದಾರೆ. ಆದ್ದರಿಂದ ಮುಸಲ್ಮಾನರ ಬೇರೆ ಗುರುತನ್ನು ಮುಗಿಸಲು ಅಥವಾ ನಾಶ ಮಾಡಲು ಯಾವುದೇ ಅವಶ್ಯಕತೆ ಇಲ್ಲ. ಹಿಂದೂ ಮತ್ತು ಮುಸಲ್ಮಾನ ಐಕ್ಯತೆಯು ತಪ್ಪು ಕಲ್ಪನೆಯಾಗಿದೆ; ಕಾರಣ ಮುಸಲ್ಮಾನ ಮತ್ತು ಹಿಂದೂಗಳು ಎಂದೂ ಬೇರೆ ಬೇರೆ ಅಲ್ಲ.
೩. ನಮ್ಮದು ಯಾವುದೇ ಧರ್ಮ ಇರಲಿ, ಆದರೆ ನಾವು ಭಾರತೀಯರು. ಆದ್ದರಿಂದ ಹಿಂದೂಗಳು ತಮ್ಮ ಪರಿಚಯವನ್ನು ‘ಭಾರತೀಯ’ ಎಂದು ನೀಡಬೇಕು.
೪. ಹಿಂದೂ ಮತ್ತು ಮುಸಲ್ಮಾನ ನಾವಿಬ್ಬರೂ ಒಟ್ಟಿಗೆ ಮುಂದೆ ಸಾಗುತ್ತಿದ್ದೇವು, ಸಾಗುತ್ತಿದ್ದೇವೆ ಮತ್ತು ಭವಿಷ್ಯದಲ್ಲಿಯೂ ಒಟ್ಟಿಗೆ ಸಾಗುವೆವು.
೫. ತಮ್ಮನ್ನು ಯಾವುದೇ ಧರ್ಮಕ್ಕೆ ಸೀಮಿತವಾಗಿರಿಸದೇ ರಾಷ್ಟ್ರೀಯತೆಯ ಭಾವನೆಯಿಂದ ಎಲ್ಲರು ಒಟ್ಟಾಗಬೇಕು. ಪರಸ್ಪರರ ಮೇಲೆ ದಾಳಿ ಮಾಡುವುದು. ಪರಸ್ಪರರಲ್ಲಿ ಯಾವುದಾದರೂ ಕಾರಣದಿಂದ ಗುಂಪಾಗಿ ನಡೆಯುವುದು, ಇದು ಭಾರತೀಯ ಸಂಸ್ಕೃತಿಯೊಂದಿಗೆ ಹೊಂದುವುದಿಲ್ಲ ಮತ್ತು ಇದನ್ನು ತಕ್ಷಣ ನಿಲ್ಲಬೇಕು ಹಾಗೂ ಇಂತಹವುಗಳ ಮೇಲೆ ನಿಷೇಧ ಹೇರಬೇಕು.
೬. ಭಾಷೆ, ಪ್ರದೇಶ ಮತ್ತು ಇತರ ವೈಷಮ್ಯಗಳನ್ನು ಬಿಟ್ಟು ಈಗ ಭಾರತೀಯರು ಒಟ್ಟಾಗುವುದು ಮತ್ತು ಭಾರತವನ್ನು ವಿಶ್ವಗುರುವನ್ನಾಗಿಸುವ ಸಮಯ ಬಂದಿದೆ. ಭಾರತ ವಿಶ್ವಗುರು ಆದ ಮೇಲೆಯೇ ಜಗತ್ತು ಸುರಕ್ಷಿತವಾಗಲಿದೆ.
೭. ‘ಹಿಂದೂಗಳು ಮುಗಿಸಿ ಬಿಡುತ್ತಾರೆ’, ಎಂದು ಅಲ್ಪಸಂಖ್ಯಾತರಲ್ಲಿ ಬಿಂಬಿಸಲಾಗುತ್ತದೆ; ಆದರೆ ಯಾವ ಅಲ್ಪಸಂಖ್ಯಾತರ ಮೇಲೆ ಅನ್ಯಾಯವಾಗುತ್ತದೆಯೋ, ಆಗ ಧ್ವನಿ ಎತ್ತುವವರು ಬಹುಸಂಖ್ಯಾತರಾಗಿರುತ್ತಾರೆ.