ಭಾರತದಕ್ಕಿಂತಲೂ ಅಮೆರಿಕಾಗೆ ೧೦ ಪಟ್ಟು ಸಾಲ !
ನವ ದೆಹಲಿ – ಭಾರತದಲ್ಲಿ ಜಗತ್ತಿನಲ್ಲಿನ ಒಟ್ಟು ಶೇ. ೩.೨ ರಷ್ಟು ಸಾಲ ಇದೆ. ಜಗತ್ತಿನ ಬಹುತೇಕ ದೇಶಗಳ ಮೇಲೆ ಹೆಚ್ಚು ಕಡಿಮೆ ಪ್ರಮಾಣದಲ್ಲಿ ಸಾಲವಿದೆ. ಜಗತ್ತಿನ ಎಲ್ಲಾ ದೇಶಗಳ ಸೇರಿ ೧೦೨ ಟ್ರಿಲಿಯನ್ ಡಾಲರ್ (೮ ಸಾವಿರದ ೭೧೦ ಲಕ್ಷ ಕೋಟಿ ರೂಪಾಯಿಗಿಂತಲೂ ಹೆಚ್ಚಿನ) ಸಾಲ ಇರುವುದು. ಅಂತರಾಷ್ಟ್ರೀಯ ಮಹಾ ಅಧಿಕಾರ ಇರುವ ಅಮೆರಿಕಾ ಜಗತ್ತಿನಲ್ಲಿನ ಎಲ್ಲಕ್ಕಿಂತ ಹೆಚ್ಚು ಎಂದರೆ ೩೬ ಟ್ರಿಲಿಯನ್ ಡಾಲರ್ (೨ ಸಾವಿರದ ೭೫೪ ಲಕ್ಷ ಕೋಟಿ ರೂಪಾಯಿಗಿಂತಲೂ ಹೆಚ್ಚು) ರಷ್ಟು ಸಾಲ ಇರುವುದು ವಿಶೇಷವಾಗಿದೆ. ಈ ಪ್ರಮಾಣ ಜಗತ್ತಿನ ಶೇಕಡ ೩೫ ರಷ್ಟು ಇದೆ. ಅಮೇರಿಕಾದ ನಂತರ ಚೀನಾ ಮತ್ತು ಜಪಾನ್ ಕ್ರಮವಾಗಿ ಸ್ಥಾನ ಪಡೆದಿದೆ. ಈ ಪಟ್ಟಿಯಲ್ಲಿ ಭಾರತ ೭ ನೇ ಸ್ಥಾನದಲ್ಲಿದೆ. ‘ವರ್ಲ್ಡ್ ಆಫ್ ಸ್ಟ್ಯಾಟಿಸ್ಟಿಕ್’ ಯಿಂದ ಅಂತರಾಷ್ಟ್ರೀಯ ಹಣಕಾಸು ನಿಧಿಯ ಸಾಲಗಾರ ದೇಶದ ಪಟ್ಟಿ ಪ್ರಸಾರ ಮಾಡಿದೆ. ಅದರಲ್ಲಿ ಈ ಮಾಹಿತಿ ನೀಡಲಾಗಿದೆ.
೧. ಜಗತ್ತಿನಲ್ಲಿನ ಎರಡನೆ ಎಲ್ಲಕ್ಕಿಂತ ದೊಡ್ಡ ಸಾಲುಗಾರ ದೇಶ ಚೀನಾ ಆಗಿದೆ. ಚೀನಾಗೆ ೧೪.೬೯ ಟ್ರಿಲಿಯನ್ ಡಾಲರ್ (೧ ಸಾವಿರದ ೧೨೩ ಲಕ್ಷ ಕೋಟಿ ರೂಪಾಯಿಗಿಂತಲೂ ಹೆಚ್ಚು) ರಷ್ಟು ಸಾಲ ಇದೆ. ಇದು ಸಂಪೂರ್ಣ ಜಗತ್ತಿನ ಸಾಲದ ಶೇ. ೧೬.೧ ರಷ್ಟು ಇದೆ.
೨. ಮೂರನೆಯ ಸ್ಥಾನದಲ್ಲಿ ಜಪಾನ್ ಇದೆ, ಜಗತ್ತಿನ ಒಟ್ಟು ಸಾಲಗಳಲ್ಲಿ ಶೇ. ೧೦ ರಷ್ಟು ಸಾಲ ಜಪಾನ್ ಮೇಲೆ ಇದೆ. ಅದು ಸುಮಾರು ೧೦.೮ ಟ್ರಿಲಿಯನ್ ಡಾಲರ್ಸ್ ವರೆಗೆ ಹೆಚ್ಚಾಗಿದೆ.
೩. ಇದರ ನಂತರ ಬ್ರಿಟನ್. ಅದರ ಮೇಲೆ ಶೇ. ೩.೬ ರಷ್ಟು ಸಾಲ ಇರುವುದು. ಫ್ರಾನ್ಸಿನ ಪಾಲು ಶೇ. ೩.೫ ಮತ್ತು ಇಟಲಿಯ ಶೇ. ೩.೨ ರಷ್ಟು ಇದೆ.
೪. ಸಾಲದಲ್ಲಿ ಭಾರತ ೭ ನೇ ಸ್ಥಾನದಲ್ಲಿ ಇದೆ. ಇದರ ನಂತರ ಜರ್ಮನಿ (ಶೇಕಡ ೨.೯), ಕೆನಡಾ (ಶೇ. ೨.೩) ಮತ್ತು ಬ್ರಾಝಿಲ್ (ಶೇಕಡ ೧.೯) ಇವುಗಳ ಸಮಾವೇಶ ಇದೆ.