ಶ್ರೀನಗರ (ಜಮ್ಮು-ಕಾಶ್ಮೀರ) – ಜಮ್ಮು-ಕಾಶ್ಮೀರ ಮತ್ತು ಲಡಾಖ್ ಉಚ್ಚನ್ಯಾಯಾಲಯದ ಶ್ರೀನಗರ ವಿಭಾಗೀಯಪೀಠಕ್ಕೆ ಓರ್ವ ಮುಸ್ಲಿಂ ವಕೀಲೆ ಬುರ್ಖಾ ಧರಿಸಿ ಯುಕ್ತಿವಾದ ಮಂಡಿಸಲು ಬಂದಿದ್ದರು. ಉಚ್ಚನ್ಯಾಯಾಲಯವು ಇದನ್ನು ಆಕ್ಷೇಪಿಸಿ ಅವಳಿಗೆ ಅವಳ ಮುಖದ ಮೇಲಿನ ಬುರ್ಖಾ ತೆಗೆಯುವಂತೆ ಹೇಳಿದರು; ಆದರೆ ವಕೀಲೆ ನಿರಾಕರಿಸಿದಳು. ‘ಇಂತಹ ವೇಶದಲ್ಲಿ ನ್ಯಾಯಾಲಯಕ್ಕೆ ಹಾಜರಾಗುವುದು ನನ್ನ ಮೂಲಭೂತ ಹಕ್ಕು’, ಎಂದು ವಾದಿಸಿದಳು. ವಕೀಲೆಯ ಈ ನಿಲುವಿನ ಕುರಿತು, ಉಚ್ಚನ್ಯಾಯಲಯವು ರಿಜಿಸ್ಟ್ರಾರ್ ಜನರಲ್ ಅವರಿಂದ ವಕೀಲರ ಉಡುಗೆಗೆ ಸಂಬಂಧಿಸಿದ ಕಾನೂನು ಮತ್ತು ನಿಯಮಗಳ ಬಗ್ಗೆ ಮಾಹಿತಿ ತರಿಸಿಕೊಂಡಿತು. ಅದರಲ್ಲಿ, ನ್ಯಾಯವಾದಿಗಳಿಗೆ `ಬಾರ್ ಕೌನ್ಸಿಲ್ ಆಫ್ ಇಂಡಿಯಾ’ದ ನಿಯಮಗಳಲ್ಲಿ ಅಂತಹ ಉಡುಗೆ ಅನುಮತಿಸುವುದಿಲ್ಲ ಎಂದು ಕಂಡುಬಂದಿತು. ತದನಂತರ ಉಚ್ಚನ್ಯಾಯಾಲಯವು ವಕೀಲೆಗೆ ನ್ಯಾಯಾಲಯದಲ್ಲಿ ಶಿಷ್ಟಾಚಾರ ಮತ್ತು ವೃತ್ತಿಪರ ಗುರುತನ್ನು ಪಾಲಿಸುವಂತೆ ಸೂಚಿಸಿತು.
ಸಂಪಾದಕೀಯ ನಿಲುವುನಿಯಮಗಳನ್ನು ಉಲ್ಲಂಘಿಸುವವರ ಪದವಿಯನ್ನು ಹಿಂಪಡೆಯಲು ಕಾನೂನು ರೂಪಿಸಬೇಕು ! |