ಪಾಕಿಸ್ತಾನಕ್ಕೆ ಪ್ರತ್ಯುತ್ತರ ನೀಡಲು ೧೫ ಸಾವಿರ ತಾಲಿಬಾನಿ ಸೈನಿಕರು ಪಾಕಿಸ್ತಾನದ ಗಡಿಯ ಕಡೆಗೆ ಪಯಣ

ಇಸ್ಲಾಮಾಬಾದ್ (ಪಾಕಿಸ್ತಾನ) – ಪಾಕಿಸ್ತಾನವು ಡಿಸೆಂಬರ್ ೨೪ ರಂದು ರಾತ್ರಿ ಅಪಘಾನಿಸ್ತಾನದ ಪಕ್ತಿಕ ಮತ್ತು ಖೋಸ್ತ ಪ್ರಾಂತ್ಯದಲ್ಲಿ ನಡೆಸಿದ ವೈಮಾನಿಕ ದಾಳಿಯಲ್ಲಿ ಇಲ್ಲಿಯವರೆಗೆ ೪೬ ಜನರು ಸಾವನ್ನಪ್ಪಿದ್ದಾರೆ ಹಾಗೂ ಸುಮಾರು ೧೫೦ ಜನರು ಗಾಯಗೊಂಡಿದ್ದಾರೆ. ಪಾಕಿಸ್ತಾನದ ಯುದ್ಧ ವಿಮಾನವು ಮುರಘಾ ಮತ್ತು ಲಮಾನ ಪ್ರದೇಶದಲ್ಲಿನ ತಹರಿಕ್-ಏ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ಯ ಭಯೋತ್ಪಾದಕ ಸಂಘಟನೆಯ ಸ್ಥಳದಲ್ಲಿ ಬಾಂಬ್ ಎಸೆದರು. ‘ಪಾಕಿಸ್ತಾನದ ಈ ಹೇಡಿ ಕೃತ್ಯಕ್ಕೆ ಪ್ರತ್ಯುತ್ತರ ನೀಡಲಾಗುವುದು’, ಎಂದು ಅಪಘಾನ್ ತಾಲಿಬಾನದ ವಕ್ತಾರ ಜೈಬುಲ್ಲ ಮುಜಾಹಿದ್ ಇವರು ಹೇಳಿದ್ದಾರೆ.

ಮೂಲದ ಮಾಹಿತಿ ಪ್ರಕಾರ ಅಪಘಾನ್ ತಾಲಿಬಾನದ ಸುಮಾರು ೧೫ ಸಾವಿರ ಸೈನಿಕರು ಕಾಬುಲ್, ಕಂದಹಾರ ಮತ್ತು ಹೇರಾತ್ ಇಲ್ಲಿಂದ ಪಾಕಿಸ್ತಾನದ ಖೈಬರ್ ಪಖ್ಟುನಕ್ವದ ಮೀರ ಅಲಿ ಗಡಿಗೆ ತಲ್ಲಪಲು ಆರಂಭಿಸಿದ್ದಾರೆ. ಇದರಿಂದ ಪಾಕಿಸ್ತಾನವು ಕೂಡ ಸೈನ್ಯ ಸಿದ್ಧತೆಯಲ್ಲಿ ಇರಿಸಿದೆ.