ಸಂಸ್ಕೃತ ಭಾಷೆಯ ಏಕೈಕ ದಿನಪತ್ರಿಕೆ ‘ಸುಧರ್ಮಾ’ದ ಸಂಪಾದಕ ಕೆ.ವಿ. ಸಂಪತ್ ಕುಮಾರ್ ನಿಧನ

ಪ್ರಧಾನಿ ನರೇಂದ್ರ ಮೋದಿ ಅವರು ದುಃಖ ವ್ಯಕ್ತಪಡಿಸಿದ್ದಾರೆ !

ಸಂಸ್ಕೃತ ದಿನಪತ್ರಿಕೆ ‘ಸುಧರ್ಮ’ದ ಸಂಪಾದಕ ಕೆ.ವಿ. ಸಂಪತ್ ಕುಮಾರ್

ಮೈಸುರು – ಭಾರತದ ಏಕೈಕ ಸಂಸ್ಕೃತ ದಿನಪತ್ರಿಕೆ ‘ಸುಧರ್ಮಾ’ದ ಸಂಪಾದಕ ಕೆ.ವಿ. ಸಂಪತ್ ಕುಮಾರ್ ಜೂನ್ ೩೦ ರಂದು ಹೃದಯಾಘಾತದಿಂದ ನಿಧನರಾದರು. ೨೦೨೦ ರಲ್ಲಿ ಅವರು ಮತ್ತು ಅವರ ಪತ್ನಿ ಎಸ್. ಜಯಲಕ್ಷ್ಮಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾಹ ಸಂತಾಪ ಸೂಚಿಸಿದ್ದಾರೆ.

. ಪ್ರಧಾನಿ ಮೋದಿ ಅವರು ಟ್ವೀಟ್ ಮಾಡುತ್ತಾ, ಕೆ.ವಿ. ಸಂಪತ್ ಕುಮಾರ್ ಸ್ಪೂರ್ತಿದಾಯಕ ವ್ಯಕ್ತಿಮತ್ವರಾಗಿದ್ದರು. ಅವರು ಯುವಕರಲ್ಲಿ ಸಂಸ್ಕೃತ ಭಾಷೆಯನ್ನು ಜನಪ್ರಿಯಗೊಳಿಸಲು ದಣಿವರಿಯಿಲ್ಲದೆ ಶ್ರಮಿಸಿದರು. ಅವರ ದೃಢ ನಿಶ್ಚಯ ಸ್ಪೂರ್ತಿದಾಯಕವಾಗಿತ್ತು.

. ಮೈಸೂರಿನಿಂದ ದಿನಪತ್ರಿಕೆ `ಸುಧರ್ಮಾ’ ಪ್ರಕಟವಾಗುತ್ತದೆ. ಇದರಲ್ಲಿ ವೇದ, ಯೋಗ ಮತ್ತು ಧಾರ್ಮಿಕ ವಿಷಯಗಳಿಗೆ ಸಂಬಂಧಿಸಿದ ಲೇಖನಗಳನ್ನು ಪ್ರಕಟಿಸುತ್ತದೆ. ಅದೇರೀತಿ ಸಾಂಸ್ಕೃತಿಕ ವಾರ್ತೆಗಳನ್ನೂ ಪ್ರಕಟಿಸಲಾಗುತ್ತದೆ. ಈ ದಿನಪತ್ರಿಕೆಯನ್ನು ಜುಲೈ ೧೫, ೧೯೭೦ ರಂದು ಸಂಸ್ಕೃತ ವಿದ್ವಾಂಸ ಪಂಡಿತ್ ವರದರಾಜ ಅಯ್ಯಂಗರ್ ಪ್ರಾರಂಭಿಸಿದ್ದರು. ಕೆ.ವಿ. ಸಂಪತ್ ಕುಮಾರ್ ಅವರ ಮಗ ಆಗಿದ್ದರು.