Hindu Temple : ಅಮೇಠಿಯ ಮುಸಲ್ಮಾನ ಬಹುಸಂಖ್ಯಾತ ಪ್ರದೇಶದಲ್ಲಿ ೨೦ ವರ್ಷಗಳಿಂದ ಮುಸಲ್ಮಾನರ ವಶದಲ್ಲಿರುವ ಶಿವನ ದೇವಸ್ಥಾನ

ಗ್ರಾಮಸ್ಥರ ದೂರಿನ ನಂತರ ಆಡಳಿತದಿಂದ ತನಿಖೆ ಆರಂಭ !

ಅಮೇಠಿ (ಉತ್ತರಪ್ರದೇಶ) – ಆಮೇಠಿ ಜಿಲ್ಲೆಯಲ್ಲಿ ಮುಸಲ್ಮಾನ ಬಾಹುಳ್ಯ ಔರಂಗಾಬಾದ್ ಇಲ್ಲಿಯ ೧೨೦ ವರ್ಷ ಹಳೆಯ ದೇವಸ್ಥಾನವು ಮುಸಲ್ಮಾನರ ವಶದಲ್ಲಿರುವ ಘಟನೆ ಬೆಳಕಿಗೆ ಬಂದಿದೆ. ಇದು ಪಂಚಶಿಖರ ಶಿವನ ದೇವಸ್ಥಾನ ಜೇಠರಾಮ ಹೆಸರಿನ ವ್ಯಕ್ತಿ ಕಟ್ಟಿದ್ದರು. ಅದು ಕಳೆದ ೨೦ ವರ್ಷಗಳಿಂದ ಕೆಲವು ಮುಸಲ್ಮಾನರ ವಶದಲ್ಲಿತ್ತು. ಅಂದಿನಿಂದ ಅಲ್ಲಿ ಪೂಜೆ ನಿಲ್ಲಿಸಲಾಗಿದೆ. ಗ್ರಾಮಸ್ಥರ ದೂರಿನ ನಂತರ ಸರಕಾರ ತನಿಖೆ ಆರಂಭಿಸಿದೆ. ಜಿಲ್ಲಾಧಿಕಾರಿಗಳು ಇದರ ತನಿಖೆಯನ್ನು ಸ್ಥಳೀಯ ತಹಶೀಲದಾರರಿಗೆ ಒಪ್ಪಿಸಿದ್ದಾರೆ. ತನಿಖೆಯ ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಈ ದೇವಸ್ಥಾನದ ಮೇಲ್ವಿಚಾರಣೆ ಅರ್ಚಕ ಗಣೇಶ ತಿವಾರಿ ಮತ್ತು ಅವರ ಕುಟುಂಬದವರು ನೋಡಿಕೊಳ್ಳುತ್ತಿದ್ದರು; ಆದರೆ ಸುಮಾರು ೨ ದಶಕಗಳ ಹಿಂದೆ ಅವರು ವಲಸೆ ಹೋಗಿದ್ದಾರೆ.

ಸಂಪಾದಕೀಯ ನಿಲುವು

ಉತ್ತರಪ್ರದೇಶದಲ್ಲಿ ಈಗ ಸರಕಾರದಿಂದ ಎಲ್ಲಾ ಮುಸಲ್ಮಾನ ಬಹುಸಂಖ್ಯಾತ ಪ್ರದೇಶದಲ್ಲಿ ದೇವಸ್ಥಾನ ಶೋಧ ಅಭಿಯಾನ ನಡೆಸಿ ಅವುಗಳನ್ನು ಮುಕ್ತಗೊಳಿಸುವುದು ಆವಶ್ಯಕವಾಗಿದೆ. ಅವರಿಂದ ಆದರ್ಶ ಪಡೆದು ಸಂಪೂರ್ಣ ದೇಶದಲ್ಲಿ ಈ ಅಭಿಯಾನ ಆರಂಭಿಸಬೇಕು !