1990 ರ ಗಲಭೆಯ ನಂತರ ಹಿಂದೂಗಳು ಪಲಾಯನ ಮಾಡಿದ ನಂತರದಿಂದ ದೇವಸ್ಥಾನ ಮುಚ್ಚಿತ್ತು
ಬುಲಂದಶಹರ (ಉತ್ತರಪ್ರದೇಶ) – ಬುಲಂದಶಹರ ಜಿಲ್ಲೆಯಲ್ಲಿನ ಖುರ್ಜಾ ನಗರದಲ್ಲಿನ ಮುಸಲ್ಮಾನ ಬಾಹುಳ್ಯ ಸಲಮಾ ಹಕನ ಪ್ರದೇಶದಲ್ಲಿ ಒಂದು ದೇವಸ್ಥಾನ ಪತ್ತೆಯಾಗಿದೆ. ಅದು ಸುಮಾರು ೫೦ ವರ್ಷದಷ್ಟು ಹಳೆಯದೆಂದು ಹೇಳಲಾಗಿದೆ. ಕಳೆದ ೩೦ ವರ್ಷಗಳಿಂದ ಅದು ಮುಚ್ಚಿದೆ. ಈ ದೇವಸ್ಥಾನ ಜಾಟವ ಜನಾಂಗದವರು ಕಟ್ಟಿದ್ದರು. ಅಲ್ಲಿ ಅವರು ಪೂಜೆ ಮಾಡುತ್ತಿದ್ದರು. ೧೯೯೦ ರ ಗಲಭೆಯ ನಂತರ ಜಾಟವ ಜನಾಂಗದವರು ಈ ಪರಿಸರ ತ್ಯಜಿಸಿದರು ಮತ್ತು ದೇವಸ್ಥಾನ ಕೂಡ ಮುಚ್ಚಲಾಯಿತು. ಆ ಸಮಯದಲ್ಲಿ ಸಮಾಜದಲ್ಲಿನ ಒಂದು ಕುಟುಂಬ ದೇವಸ್ಥಾನದಲ್ಲಿನ ಮೂರ್ತಿಯನ್ನು ನದಿಯಲ್ಲಿ ವಿಸರ್ಜಿಸಿತ್ತು.
೧. ಖುರ್ಜನಗರದ ಉಪವಿಭಾಗೀಯ ಅಧಿಕಾರಿ ದುರ್ಗೇಶ ಸಿಂಹ ಇವರು, ಈ ದೇವಸ್ಥಾನ ಸಂಪೂರ್ಣವಾಗಿ ಸುರಕ್ಷಿತವಿದೆ. ಈ ಜಾಗದ ಬಗ್ಗೆ ಯಾವುದೇ ಜನಾಂಗದಿಂದ ವಿವಾದವಿಲ್ಲ. ದೇವಸ್ಥಾನದ ಮೂರ್ತಿಯು ನದಿಯಲ್ಲಿ ವಿಸರ್ಜಿಸಲಾಗಿತ್ತು ಈ ಪ್ರಕರಣದ ತನಿಖೆ ನಡೆಯುತ್ತಿದೆ’, ಎಂದು ಹೇಳಿದರು.
೨. ದೇವಸ್ಥಾನ ಪತ್ತೆಯಾದ ನಂತರ ವಿಶ್ವ ಹಿಂದೂ ಪರಿಷತ್ ಮತ್ತು ಜಾಟವ ವಿಕಾಸ ಮಂಚ ಇವರು ದೇವಸ್ಥಾನದ ಜೀರ್ಣೋದ್ಧಾರ ಮಾಡಲು ಸರಕಾರಕ್ಕೆ ಆಗ್ರಹಿಸಿದ್ದಾರೆ. ಮಂಚ್ ಮತ್ತು ವಿಶ್ವ ಹಿಂದೂ ಪರಿಷತ್ತಿನ ಸದಸ್ಯರು ಸೇರಿ ದೇವಸ್ಥಾನದಲ್ಲಿ ಧಾರ್ಮಿಕ ಉಪಕ್ರಮಗಳನ್ನು ಪುನಃ ಆರಂಭಿಸಲು ಆಗ್ರಹಿಸಿದ್ದಾರೆ.
೩. ವಿಶ್ವ ಹಿಂದೂ ಪರಿಷತ್ತಿನ ಮೆರಠ ರಾಜ್ಯ ಪದಾಧಿಕಾರಿ ಸುನಿಲ್ ಸೋಲಂಕಿ ಇವರು, ದೇವಸ್ಥಾನ ೧೯೯೦ ರಿಂದ ಮುಚ್ಚಿದೆ. ಆ ಸಮಯದಲ್ಲಿ ಈ ಪ್ರದೇಶದಲ್ಲಿ ವಾಸಿಸುವ ಹಿಂದೂ ಕುಟುಂಬಗಳು ಗಲಭೆಯ ಭಯದಿಂದ ಪಲಾಯನ ಮಾಡಿದ್ದರು. ಅವರು ಸರಕಾರಕ್ಕೆ ಮನವಿ ಪ್ರಸ್ತುತಪಡಿಸಿ ದೇವಸ್ಥಾನದ ಸ್ವಚ್ಛತೆ ಮತ್ತು ಅಲಂಕಾರ ಮಾಡಲು ಆಗ್ರಹಿಸಿದೆ, ಇದರಿಂದ ಪೂಜೆಗೆ ಮತ್ತೊಮ್ಮೆ ಆರಂಭವಾಗುವುದು, ಎಂದು ಹೇಳಿದರು.
೪. ಜಾಟವ ವಿಕಾಸ ಮಂಚ್‌ನ ಅಧ್ಯಕ್ಷ ಕೈಲಾಸ ಭಾಗಮಲ ಗೌತಮ್ ಇವರು ಕೂಡ ದೇವಸ್ಥಾನದ ಇತಿಹಾಸದ ಕುರಿತು ಬೆಳಕು ಚೆಲ್ಲಿದರು. ಈ ದೇವಸ್ಥಾನ ಜಾಟವ ಜನಾಂಗದ ಜನರು ಕಟ್ಟಿದ್ದಾರೆ’, ಎಂದು ಅವರು ಹೇಳಿದರು.
ಈ ದೇವಸ್ಥಾನದ ಬಗ್ಗೆ ಸ್ಥಳಿಯರು ಮತ್ತು ಸಂಸ್ಥೆಯ ಅಪೇಕ್ಷೆಗಳು ಹೆಚ್ಚಾಗಿವೆ. ದೇವಸ್ಥಾನದ ಜೀರ್ಣೋದ್ಧಾರ ನಡೆಸಿ ಮತ್ತೆ ಪೂಜೆ ಆರಂಭ ಮಾಡಬಹುದು, ಎಂದು ಅವರ ಅಭಿಪ್ರಾಯವಾಗಿದೆ. ಇದರ ಬಗ್ಗೆ ಸರಕಾರವು ಆದಷ್ಟು ಬೇಗನೆ ನಿರ್ಣಯ ಕೈಗೊಳ್ಳುವುದೆಂದು ಅಪೇಕ್ಷಿತವಾಗಿದೆ. ಎಂದು ಹೇಳಿದರು
A Hindu temple has been found in the Mu$!im-majority area of Bulandshahr (Uttar Pradesh).
The temple had been closed after the Hindus of the area fled during the 1990 riots#ReclaimOurRoots #Temple pic.twitter.com/jVy1SRMyKE
— Sanatan Prabhat (@SanatanPrabhat) December 25, 2024