ಗೌರಿ ಲಂಕೇಶ್ ಹತ್ಯೆ ಪ್ರಕರಣಸರ್ವೋಚ್ಚ ನ್ಯಾಯಾಲಯದಿಂದ ಕರ್ನಾಟಕ ಉಚ್ಚ ನ್ಯಾಯಾಲಯಕ್ಕೆ ಆದೇಶ ! |
ನವ ದೆಹಲಿ – ಬೆಂಗಳೂರಿನಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆಯ ಪ್ರಕರಣಕ್ಕೆ ಸಂಬಂಧಿಸಿದ ೬ ನೇ ಆರೋಪಿ ಮೋಹನ್ ನಾಯಕ್ ಇವರ ಮೇಲಿನ ‘ಕೊಕಾ’ ಅಪರಾಧವನ್ನು ರದ್ದುಗೊಳಿಸುವಂತೆ ಕರ್ನಾಟಕ ಉಚ್ಚ ನ್ಯಾಯಾಲಯ ಆದೇಶಿಸಿತ್ತು. ಅದಕ್ಕೆ ಗೌರಿ ಲಂಕೇಶ್ ಅವರ ಸಹೋದರಿ ಕವಿತಾ ಲಂಕೇಶ್ ಇವರು ಸವೋಚ್ಚ ನ್ಯಾಯಾಲಯಕ್ಕೆ ಮೊರೆ ಹೋಗಿದ್ದರು. ಸರ್ವೋಚ್ಚ ನ್ಯಾಯಾಲಯವು ನಾಯಕ ಅವರ ಜಾಮೀನಿನ ಮೇಲೆ ಅಪರಾಧವನ್ನು ರದ್ದು ಪಡಿಸಿದ ತೀರ್ಪಿನಿಂದ ಪ್ರಭಾವಕ್ಕೊಳಗಾಗದೇ ಇತ್ಯರ್ಥ ಪಡಿಸುವಂತೆ ಕರ್ನಾಟಕ ಉಚ್ಚ ನ್ಯಾಯಾಲಯಕ್ಕೆ ಆದೇಶ ನೀಡಿದೆ. ಅದೇ ರೀತಿ ಈ ಅರ್ಜಿಯ ಬಗ್ಗೆ ಉತ್ತರ ನೀಡುವಂತೆ ಕರ್ನಾಟಕ ಸರಕಾರಕ್ಕೆ ಆದೇಶ ನೀಡಿದೆ. ಮೋಹನ್ ನಾಯಕ್ ಇವರ ಮೇಲೆ ಹೊರಿಸಿದ್ದ ಎಲ್ಲಾ ಆರೋಪವನ್ನು ಎಪ್ರಿಲ್ ೨೨ ರಂದು ನಡೆದ ಆಲಿಕೆಯ ಸಮಯದಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯವು ವಜಾಗೊಳಿಸಿತ್ತು. ಆದ್ದರಿಂದ ನಾಯಕ ಇವರು ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು.
ಗೌರಿ ಲಂಕೇಶ್ ಹತ್ಯೆ ಕೇಸ್: ಯಾವುದೇ ಪ್ರಭಾವಕ್ಕೊಳಗಾಗದೆ ಜಾಮೀನಿನ ಕುರಿತು ನಿರ್ಧರಿಸಿ-ಸುಪ್ರೀಂ ಕೋರ್ಟ್ https://t.co/th7PMTbSEc via @KannadaPrabha #GauriLankeshmurder #bailplea #SupremeCourt
— kannadaprabha (@KannadaPrabha) July 3, 2021