Khalistani Terrorist Threaten Mahakumbh Mela : ಮಹಾಕುಂಭ ಮೇಳಕ್ಕೆ ಬರುವ ಧೈರ್ಯ ಮಾಡಿದರೆ, ಹೊಡೆದೋಡಿಸುತ್ತೇವೆ !

  • ಅಖಾಡಾ ಪರಿಷತ್ತಿನಿಂದ ಅಮೇರಿಕಾ ಬೆಂಬಲಿತ ಖಲಿಸ್ತಾನಿ ಭಯೋತ್ಪಾದಕ ಗುರುಪತ್ವಂತ್ ಸಿಂಗ್ ಪನ್ನುಗೆ  ಎಚ್ಚರಿಕೆ

  • ಖಲಿಸ್ತಾನಿ ಭಯೋತ್ಪಾದಕರನ್ನು ಕೊಂದಿದ್ದಕ್ಕೆ ಮಹಾಕುಂಭ ಮೇಳದಲ್ಲಿ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಪನ್ನುವಿನಿಂದ ಬೆದರಿಕೆ !

ಪ್ರಯಾಗರಾಜ (ಉತ್ತರ ಪ್ರದೇಶ) – ಅಮೇರಿಕಾ ಬೆಂಬಲಿತ ಖಲಿಸ್ತಾನಿ ಭಯೋತ್ಪಾದಕ ಗುರುಪತ್ವಂತ್ ಸಿಂಗ್ ಪನ್ನು ಇತ್ತೀಚೆಗೆ ಒಂದು ವೀಡಿಯೊವನ್ನು ಪ್ರಸಾರ ಮಾಡಿ ‘ಮಹಾಕುಂಭ ಮೇಳ’ದಲ್ಲಿ ಪುಣ್ಯಸ್ನಾನದ ದಿನದಂದು ಪಿಲಿಭಿತ್‌ನಲ್ಲಿ ಕೊಲ್ಲಲ್ಪಟ್ಟ ಖಲಿಸ್ತಾನಿಯ ಸಾವಿಗೆ ಪ್ರತೀಕಾರ ತೀರಿಸಿಕೊಳ್ಳಲಾಗುವುದು’, ಎಂದು ಬೆದರಿಕೆ ಹಾಕಿದ್ದಾನೆ. ಇದಕ್ಕೆ ಅಖಿಲ ಭಾರತೀಯ ಅಖಾಡಾ ಪರಿಷತ್ತಿನ ಅಧ್ಯಕ್ಷ ಮಹಂತ್ ರವೀಂದ್ರ ಪುರಿ ಅವರು ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ಇಂತಹ ಹುಚ್ಚರನ್ನು ನಾವು ಗಂಭೀರವಾಗಿ ಪರಿಗಣಿಸುವುದಿಲ್ಲ. ಒಂದು ವೇಳೆ ಪನ್ನು ಎಂಬ ವ್ಯಕ್ತಿ ನಮ್ಮ ಮಹಾಕುಂಭವನ್ನು ಪ್ರವೇಶಿಸುವ ಧೈರ್ಯ ಮಾಡಿದರೆ ಆತನನ್ನು ಹೊಡೆದೋಡಿಸುತ್ತೇವೆ’, ಎಂದು ಹೇಳಿದರು.

ಅವರು ಮಾತು ಮುಂದುವರೆಸಿ, ಇದು ಮಾಘ ಮೇಳವಾಗಿದ್ದು, ಸಿಖ್ಖರು ಮತ್ತು ಹಿಂದೂಗಳು ಎಲ್ಲರೂ ಒಂದಾಗಿದ್ದಾರೆ. ನಮ್ಮನ್ನು ವಿಭಜಿಸುವ ಬಗ್ಗೆ ಪನ್ನು ಹೇಳಿರುವುದು ಸರಿಯಲ್ಲ. ವಿಭಜನೆಯನ್ನು ಉತ್ತೇಜಿಸುವ ಪನ್ನು ಪ್ರಯತ್ನ ನಿರಾಧಾರವಾಗಿದೆ. ನಾಗಾ ಸಾಧುಗಳಂತೆ ಸಿಖ್ ಸಮುದಾಯದಲ್ಲಿ ಸಾಧುಗಳಿದ್ದಾರೆ. ಇವರಿಬ್ಬರೂ ಸಮಾನರಾಗಿದ್ದಾರೆ. ಇವರು ಸನಾತನದ ಸೈನಿಕರು’, ಎಂದು ಹೇಳಿದರು.