Yogi Adityanath Statement : ಭಾರತವನ್ನು ಕಾಬೂಲ್ (ಅಫ್ಘಾನಿಸ್ತಾನ) ಮತ್ತು ಬಾಂಗ್ಲಾದೇಶ ಆಗುವುದರಿಂದ ರಕ್ಷಿಸಬೇಕಾಗಿದೆ ! – ಯೋಗಿ ಆದಿತ್ಯನಾಥ

ಲಕ್ಷ್ಮಣಪುರಿ (ಉತ್ತರ ಪ್ರದೇಶ) – ಇಂದು ಕಾಬೂಲ್‌ನಲ್ಲಿ ಕೇವಲ 8 ರಿಂದ 10 ಸಿಖ್ ಕುಟುಂಬಗಳು ಉಳಿದಿವೆ.  ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಘಟನೆಗಳನ್ನು ನೋಡಿದಾಗ ನಮಗೆ ಸಿಖ್ ಗುರುಗಳು ಮಾಡಿದ ತ್ಯಾಗ ಮತ್ತು ಬಲಿದಾನ ನೆನಪಾಗುತ್ತದೆ. ಸಿಖ್ ಗುರುಗಳು ನಮ್ಮೆದುರಿಗೆ ಇಟ್ಟಿರುವ ಆದರ್ಶಗಳು ನಮಗೆ ಸರಿಯಾದ ದಾರಿಯನ್ನು ತೋರಿಸುತ್ತವೆ. ಅವರಿಂದ ಸ್ಫೂರ್ತಿ ಪಡೆದು ನಾವು ಮುನ್ನಡೆದರೆ ಕಾಬೂಲ್ ಮತ್ತು ಬಾಂಗ್ಲಾದೇಶದಂತಹ ಪರಿಸ್ಥಿತಿಯನ್ನು ತಪ್ಪಿಸಬಹುದು’, ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿಕೆ ನೀಡಿದ್ದಾರೆ. ಅವರು ಸಿಖ್ಖರ ಒಂಬತ್ತನೇ ಗುರು ಗೋವಿಂದ ದೇವ ಸಿಂಗ್ ಅವರ ಇಬ್ಬರು ಸುಪುತ್ರರ ಬಲಿದಾನದ ನಿಮಿತ್ತ ಆಯೋಜಿಸಿದ್ದ ‘ವೀರ ಬಾಲ ದಿನ’ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.