ಶ್ರೀಕೃಷ್ಣಜನ್ಮಭೂಮಿ ಮುಕ್ತಿ ನಿರ್ಮಾಣ ನ್ಯಾಸ’ದಿಂದ ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ !

ಪ್ರಸ್ತುತ ವಾರಣಾಸಿಯಲ್ಲಿನ ಜ್ಞಾನವಾಪಿಯ ಪರಿಸರದಲ್ಲಿ ವೈಜ್ಞಾನಿಕ ಸಮೀಕ್ಷೆ ನಡೆಯುತ್ತಿದೆ. ಇಂತಹದರಲ್ಲೇ ಮಥುರಾದಲ್ಲಿನ ಶ್ರೀ ಕೃಷ್ಣ ಜನ್ಮ ಭೂಮಿಯ ಕುರಿತು ಇದೇ ರೀತಿಯ ಸಮೀಕ್ಷೆ ನಡೆಯಬೇಕೆಂದು ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ತಿರುಮಲ ತಿರುಪತಿ ದೇವಸ್ಥಾನದ ಅಧ್ಯಕ್ಷರಾಗಿ ಕ್ರೈಸ್ತ ವ್ಯಕ್ತಿಯ ನೇಮಕಯಿಂದ ವಿವಾದ !

ದೇಶದ ಅತ್ಯಂತ ಶ್ರೀಮಂತ ದೇವಸ್ಥಾನವಾಗಿರುವ ತಿರುಮಲ ತಿರುಪತಿ ದೇವಸ್ಥಾನದ ಮಂಡಳಿಯ ಅಧ್ಯಕ್ಷ ಹುದ್ದೆಗೆ ಕ್ರೈಸ್ತ ವ್ಯಕ್ತಿಯ ನೇಮಕವು ವಿವಾದಕ್ಕೆ ಕಾರಣವಾಗಿದೆ. ಆಂಧ್ರಪ್ರದೇಶದ ಕ್ರೈಸ್ತ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಕುಟುಂಬದ ಕಟ್ಟರ ಬೆಂಬಲಿಗನಾಗಿರುವ ಶಾಸಕ ಕರುಣಾಕರ್ ರೆಡ್ಡಿ ಅವರನ್ನು ತಿರುಪತಿ ಮಂಡಳಿಯ ಅಧ್ಯಕ್ಷರನ್ನಾಗಿ ಮಾಡಲಾಗಿದೆ.

ಶಿವಲಿಂಗವನ್ನು ತೆಗೆಯುವಂತೆ ಕೋಲಕಾತಾ ಉಚ್ಚನ್ಯಾಯಾಲಯದ ಆದೇಶವನ್ನು ಬರೆಯುವಾಗಲೇ ನ್ಯಾಯಾಲಯದ ಅಧಿಕಾರಿ ಮೂರ್ಛೆ !

ಜಗತ್ತಿನ ಅನೇಕ ವಿಷಯಗಳು ಈ ಪಂಚೇಂದ್ರಿಯಗಳಾದ ಮನಸ್ಸು ಮತ್ತು ಬುದ್ಧಿಯನ್ನು ಮೀರಿವೆ ಮತ್ತು ಅವುಗಳನ್ನು ಅರ್ಥಮಾಡಿಕೊಳ್ಳಲು ಸಾಧನೆಯನ್ನೇ ಮಾಡಬೇಕಾಗುತ್ತದೆ. ಭಾರತೀಯ ಋಷಿ-ಮುನಿಗಳು ನಮಗೆ ಅಧ್ಯಾತ್ಮದ ಮಹತ್ವವನ್ನು ಹೇಳಿದ್ದರೂ, ಭಾರತೀಯ ಸಮಾಜವು ಸಾಧನಾಹೀನವಾಗುತ್ತಿದೆ, ಇದು ಭಾರತದ ದೌರ್ಭಾಗ್ಯ !

ಆಮ್ ಆದ್ಮಿ ಪಕ್ಷದ ನಾಯಕ ಜಾವೇದ್ ಅಹಮದ್ ನ ವಿರುದ್ಧ ಕೊಲೆಗೆ ಸಂಬಂಧಿಸಿದಂತೆ ದೂರು ದಾಖಲು !

ನಡೆದಿರುವ ಗಲಭೆಯಲ್ಲಿ ಭಜರಂಗದಳದ ನಾಯಕ ಪ್ರದೀಪ ಕುಮಾರ ಇವರ ಹತ್ಯೆ ಮಾಡಿದ್ದಾರೆ. ಪ್ರದೀಪ್ ಕುಮಾರ್ ಇವರ ಹತ್ಯೆಯ ಪ್ರಕರಣದಲ್ಲಿ ಆಮ್ ಆದ್ಮಿ ಪಕ್ಷದ ನಾಯಕ ಜಾವೇದ್ ಅಹಮದ್ ಇವರ ವಿರುದ್ಧ ದೂರು ದಾಖಲಿಸಲಾಗಿದೆ.

ಜ್ಞಾನವಾಪಿ ಸಮೀಕ್ಷೆ – ನೆಲಮಾಳಿಗೆಯಲ್ಲಿ ಭಗ್ನಗೊಂಡ ದೇವರ ವಿಗ್ರಹ ಪತ್ತೆ!

ಜ್ಞಾನವಾಪಿ ಸಮೀಕ್ಷೆಯ ಎರಡನೇ ದಿನ

5 ಕಲಶ ಮತ್ತು ಕಮಲದ ಆಕೃತಿ ಪತ್ತೆ!

2 ಅಡಿ ತ್ರಿಶೂಲ ಪತ್ತೆ!

ಚಿಕ್ಕಮಗಳೂರಿನ ಪ್ರಸಿದ್ಧ ದೇವೀರಮ್ಮನ ದೇವಸ್ಥಾನದಲ್ಲಿ ಡ್ರೆಸ್ ಕೋಡ್ ಜಾರಿ

ತಾಲೂಕಿನ ಪ್ರಸಿದ್ಧ ದೇವೀರಮ್ಮ ದೇವಸ್ಥಾನದಲ್ಲಿ ಡ್ರೆಸ್ ಕೋಡ್ ಜಾರಿ ಮಾಡಲಾಗಿದೆ. ಧಾರ್ಮಿಕ ದತ್ತಿ ಇಲಾಖೆ ಹಾಗೂ ದೇವಸ್ಥಾನ ಆಡಳಿತ ಮಂಡಳಿಯು, ದರ್ಶನಕ್ಕೆ ಆಗಮಿಸುವ ಭಕ್ತರು ಸಾಂಪ್ರದಾಯಿಕ ಉಡುಗೆಯಲ್ಲಿ ಬರಬೇಕು ಎಂದು ತಿಳಸಿದೆ.

ಇಸ್ಲಾಮಿಕ್‌ ಬಾಂಗ್ಲಾದೇಶದ ಚಿಟಗಾವದಲ್ಲಿ ದುರ್ಗಾದೇವಿ ದೇವಸ್ಥಾನದಲ್ಲಿನ ಮೂರ್ತಿ ಧ್ವಂಸ !

ಬಾಂಗ್ಲಾದೇಶದಲ್ಲಿನ ಅಲ್ಪಸಂಖ್ಯಾತ ಹಿಂದೂಗಳ ದೇವಸ್ಥಾನಗಳ ಮೇಲೆ ಸತತವಾಗಿ ದಾಳಿ ನಡೆಯುತ್ತಿವೆ. ಚಿಟಗಾವ ಜಿಲ್ಲೆಯ ಇಥಾಝಾರಿ ಉಪ ಜಿಲ್ಲೆಯಲ್ಲಿರುವ ಶಿಕಾರಪುರ ಪ್ರದೇಶದಲ್ಲಿನ ದುರ್ಗಾದೇವಿಯ ದೇವಸ್ಥಾನದ ಮೇಲೆ ಕೆಲವು ಜಿಹಾದಿ ಭಯೋತ್ಪಾದಕರು ದಾಳಿ ನಡೆಸಿದರು.

ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಮೂರ್ತಿಯ ಪ್ರಾಣಪ್ರತಿಷ್ಠಾಪನೆಯ ಸಮಾರಂಭ ಜನವರಿ 15, 2024 ರಂದು ಪ್ರಾರಂಭ !

ಶ್ರೀರಾಮಜನ್ಮಭೂಮಿಯಲ್ಲಿ ನಿರ್ಮಿಸಲಾಗುತ್ತಿರುವ ಶ್ರೀರಾಮನ ದೇವಸ್ಥಾನದಲ್ಲಿ ಜನವರಿ 15, 2024 ರಂದು ರಾಮಲಲ್ಲಾ ಮೂರ್ತಿಯ ಪ್ರಾಣಪ್ರತಿಷ್ಠಾಪನೆ ಸಮಾರಂಭವು ಪ್ರಾರಂಭವಾಗಲಿದ್ದು, ಜನವರಿ 24 ರಂದು ಈ ವಿಧಿ ಪೂರ್ಣಗೊಳ್ಳಲಿದೆ.

ಛತರಪುರ (ಮಧ್ಯ ಪ್ರದೇಶ) ಭಜನೆ ಮತ್ತು ಆರತಿಯಿಂದ ಆಗುವ ಶಬ್ದ ಮಾಲಿನ್ಯದ ಕುರಿತು ಇಲ್ಲಿಯ ದೇವಸ್ಥಾನಕ್ಕೆ ನೀಡಿದ್ದ ನೋಟಿಸ್ ತಕ್ಷಣ ಹಿಂಪಡೆದ ಸರಕಾರ !

ದೇವಸ್ಥಾನದ ಬಳಿ ಸರಕಾರಿ ಅಧಿಕಾರಿಗಳ ಬಂಗಲೆ ಇದ್ದರಿಂದ ನೋಟಿಸ್ ನೀಡಲಾಗಿದೆ ಎಂದು ಜನರ ಆರೋಪ