ನೂಹ (ಹರಿಯಾಣ) ಇಲ್ಲಿ ವಿಶ್ವ ಹಿಂದೂ ಪರಿಷತ್ತಿನ ನಾಯಕರು ಯಾತ್ರೆ ನಡೆಸದೆ ದೇವಸ್ಥಾನದಲ್ಲಿ ಜಲಾಭಿಷೇಕ ನಡೆಸಿದರು !

ವಿಶ್ವ ಹಿಂದೂ ಪರಿಷತ್ತಿನಿಂದ ಆಗಸ್ಟ್ ೨೮ ರಂದು ಬ್ರಜಮಂಡಲ ಜಲಾಭಿಷೇಕ ಯಾತ್ರೆ ನಡೆಸುವುದಾಗಿ ಘೋಷಿಸಿದ ನಂತರ ಪೊಲೀಸರು ಅದಕ್ಕೆ ಅನುಮತಿ ನಿರಾಕರಿಸಿದ್ದರು. ಆದರೂ ಕೂಡ ವಿಶ್ವ ಹಿಂದೂ ಪರಿಷತ್ತಿನಿಂದ ಯಾತ್ರೆ ನಡೆಸುವುದಾಗಿ ಘೋಷಿಸಿತ್ತು; ಆದರೆ ಪ್ರತ್ಯಕ್ಷದಲ್ಲಿ ಅಲ್ಲಿ ಯಾತ್ರೆ ನಡೆಸದೆ ಭಕ್ತರಿಂದ ನಲ್ಹಡ ದೇವಸ್ಥಾನದಲ್ಲಿ ಜಲಾಭಿಷೇಕ ಮಾಡಲಾಯಿತು.

ಶ್ರೀ ತುಳಜಾಭವಾನಿ ದೇವಿಯ ಆಭರಣಗಳು ನಾಪತ್ತೆಯಾದ ಪ್ರಕರಣದಲ್ಲಿ ಜಿಲ್ಲಾಧಿಕಾರಿಗಳು ತಮ್ಮ ನಿಲುವನ್ನು ಸ್ಪಷ್ಟಗೊಳಿಸಬೇಕು ! – ಕಿಶೋರ ಗಂಗಣೆ, ಮಾಜಿ ಅಧ್ಯಕ್ಷ, ಪೂಜಾರಿ ಮಂಡಳಿ

ಶ್ರೀ ತುಳಜಾಭವಾನಿ ದೇವಿಯ ಆಭರಣಗಳು ಕಳ್ಳತನವಾಗಿರುವ ಪ್ರಕರಣದಲ್ಲಿ ಜಿಲ್ಲಾಧಿಕಾರಿಗಳು ತಮ್ಮ ನಿಲುವನ್ನು ಅಧ್ಯಕ್ಷರು ಎನ್ನುವ ಸಂಬಂಧದಿಂದ ಸ್ಪಷ್ಟ ಪಡಿಸಬೇಕು.

ಸೂರ್ಯಪೇಟ (ತೆಲಂಗಾಣ) ದಲ್ಲಿರುವ ಬಾಲ ಉಗ್ರ ನರಸಿಂಹ ಸ್ವಾಮಿ ದೇವಸ್ಥಾನದ ಅವ್ಯವಹಾರದ ಕುರಿತು ಮುಸಲ್ಮಾನನ ದೂರು !

ಸೂರ್ಯಪೇಟ ಜಿಲ್ಲೆಯ ಇರಾವರಮ ಗ್ರಾಮದಲ್ಲಿ ಬಾಲ ಉಗ್ರ ನರಸಿಂಹ ಸ್ವಾಮಿಯ ಪ್ರಸಿದ್ಧ ದೇವಸ್ಥಾನವಿದೆ. ಪ್ರತಿ ಶುಕ್ರವಾರ ಮತ್ತು ಶನಿವಾರ ಈ ದೇವಸ್ಥಾನಕ್ಕೆ 1 ಲಕ್ಷಕ್ಕೂ ಹೆಚ್ಚು ಭಕ್ತರು ಭೇಟಿ ನೀಡುತ್ತಾರೆ.

ಹಿಂದುಗಳ ವಿರೋಧದ ಬಳಿಕ ದೇವಸ್ಥಾನದ ಜೀರ್ಣೋದ್ಧಾರಕ್ಕೆ ನೀಡುವ ಅನುದಾನಕ್ಕೆ ತಡೆ ಆಜ್ಞೆ ನೀಡಿರುವ ಆದೇಶವನ್ನು ಹಿಂಪಡೆದ ರಾಜ್ಯದ ಧಾರ್ಮಿಕ ದತ್ತಿ ಇಲಾಖೆ !

ರಾಜ್ಯದಲ್ಲಿನ ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ನೀಡಲಾಗುವ ಅನುದಾನ ರಾಜ್ಯದಲ್ಲಿನ ಕಾಂಗ್ರೆಸ್ ಸರಕಾರ ನಿಲ್ಲಿಸಿತ್ತು; ಆದರೆ ಹಿಂದುಗಳ ವಿರೋಧದಿಂದ ಕೊನೆಗೂ ಸರಕಾರ ಅದರಿಂದ ಹಿಂದೆ ಸರಿದಿದೆ. ರಾಜ್ಯ ಸರಕಾರದ ಅಧಿಕಾರದ ಅಡಿಯಲ್ಲಿರುವ ಧಾರ್ಮಿಕ ದತ್ತಿ ಇಲಾಖೆ ಮೂರು ಅಂಶಗಳ ಮೂಲಕ ಈ ಅನುದಾನ ತಡೆ ಹಿಡಿದಿತ್ತು.

ದತ್ತಿ ಇಲಾಖೆಯ ಅಧಿನಿಯಮದ ಪ್ರಕಾರ ದೇವಸ್ಥಾನದ ಪರಿಸರದಲ್ಲಿ ಕೇವಲ ಹಿಂದುಗಳಿಗೆ ವ್ಯಾಪಾರದ ಅವಕಾಶ ನೀಡಬೇಕು !

ರಾಜ್ಯದಲ್ಲಿನ ‘ಹಿಂದೂ ಧಾರ್ಮಿಕ ಸಂಸ್ಥೆ ಮತ್ತು ದತ್ತಿ ಇಲಾಖೆಯ ೧೯೯೭-೨೦೦೧’ ಅಧಿನಿಯಮದ ಪ್ರಕಾರ ದೇವಸ್ಥಾನ ಪರಿಸರದಲ್ಲಿ ಕೇವಲ ಹಿಂದೂಗಳಿಗೆ ವ್ಯಾಪಾರ ನಡೆಸುವ ಅವಕಾಶ ನೀಡಬೇಕೆಂದು ರಾಜ್ಯ ಹಿಂದು ಜಾತ್ರೆ ವ್ಯಾಪಾರಿ ಸಂಘದಿಂದ ಬೇಡಿಕೆ ಸಲ್ಲಿಸಲಾಗಿದೆ.

ಸುಪ್ರಸಿದ್ಧ ಹಾಸನಾಂಬಾ ದೇವಸ್ಥಾನದಲ್ಲಿ ವಸ್ತ್ರಸಂಹಿತೆ ಜಾರಿಗೊಳಿಸಿ !

ಜಿಲ್ಲೆಯ ಹಾಸನಾಂಬಾ ದೇವಸ್ಥಾನವು ೧೨ ನೇ ಶತಮಾನದ ಅತ್ಯಂತ ಪ್ರಾಚೀನ ಶಕ್ತಿಪೀಠವಾಗಿದೆ. ಭಗವಾನ್ ಶಿವನ ಅವತಾರಿ ಸಪ್ತಮಾತೃಕೆಯರಾದ ವೈಷ್ಣವಿ, ಮಾಹೇಶ್ವರಿ ಮತ್ತು ಕೌಮಾರಿ ದೇವಿಗಳ ವಾಸಸ್ಥಾನವಾಗಿದೆ. ಈ ಪವಿತ್ರ ಶ್ರೀ ದೇವಿಯರ ಕ್ಷೇತ್ರಕ್ಕೆ ಜಗತ್ತಿನಾದ್ಯಂತ ಭಕ್ತಾಧಿಗಳು ಬರುತ್ತಾರೆ.

ಕಾಂಗ್ರೆಸ್ ನಾಯಕ ಆಚಾರ್ಯ ಪ್ರಮೋದ್ ಕೃಷ್ಣಮ್ ಅವರಿಗೆ ಶ್ರೀ ಕಲ್ಕಿ ದೇವಸ್ಥಾನ ನಿರ್ಮಾಣಕ್ಕೆ ಕೋರ್ಟ್ ಅನುಮತಿ !

ಮುಸ್ಲಿಮರ ನೈಜ ಮನಃಸ್ಥಿತಿ ಈಗಲಾದರೂ ಕಾಂಗ್ರೆಸ್ಸಿಗರಿಗೆ ತಿಳಿಯುವುದೇ?

ನಾವು ಜ್ಞಾನವಾಪಿಯ ಒಂದು ಇಂಚು ಭೂಮಿಯನ್ನೂ ಕೊಡುವುದಿಲ್ಲ ! – ಪೂ. (ನ್ಯಾಯವಾದಿ) ಹರಿಶಂಕರ ಜೈನ ಮತ್ತು ನ್ಯಾಯವಾದಿ ವಿಷ್ಣು ಶಂಕರ ಜೈನ

ಪ್ರಖರ ಹಿಂದುತ್ವನಿಷ್ಠ ನ್ಯಾಯವಾದಿ ತಂದೆ-ಮಗನ ನಿರ್ಧಾರ !

ಕರ್ಣಾವತಿ (ಗುಜರಾತ್)ನಲ್ಲಿ ಶ್ರೀ ಕಾಲಭೈರವ ದೇಗುಲದಲ್ಲಿ ಧ್ವಂಸ !

ಇಲ್ಲಿನ ದೂಧೇಶ್ವರ ಸ್ಮಶಾನದ ಹತ್ತಿರವಿರುವ ಶ್ರೀ ಕಾಲಭೈರವ ದೇವಸ್ಥಾನದಲ್ಲಿ ಹಲವಾರು ದೇವತೆಗಳ ವಿಗ್ರಹಗಳನ್ನು ಧ್ವಂಸಗೊಳಿಸಲಾಗಿದೆ. ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಬರಮತಿ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳ ಸಹಾಯದಿಂದ ಕಿಡಿಗೇಡಿಗಳ ವಿರುದ್ಧ ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.