|
ಕೋಲಕತ್ತಾ (ಬಂಗಾಳ) – ಕೋಲಕತ್ತಾ ಉಚ್ಚನ್ಯಾಯಾಲಯವು ರಾಜ್ಯದ ಮುರ್ಷಿದಾಬಾದ್‌ನ ಭೂ ವಿವಾದಕ್ಕೆ ಸಂಬಂಧಿಸಿದ ಒಂದು ಪ್ರಕರಣದ ವಿಚಾರಣೆ ವೇಳೆ ಅಲ್ಲಿರುವ ಶಿವಲಿಂಗವನ್ನು ತೆರವು ಮಾಡುವಂತೆ ಆದೇಶವನ್ನು ನೀಡಿತ್ತು. ಆಗ ಈ ತೀರ್ಪನ್ನು ಬರೆಯುತ್ತಿರುವಾಗ ಉಪನೋಂದಣಾಧಿಕಾರಿ ವಿಶ್ವನಾಥ ರಾಯ್ ಏಕಾಏಕಿ ಕೆಳಗೆ ಬಿದ್ದು ಪ್ರಜ್ಞಾಹೀನರಾದರು. ಆಶ್ಚರ್ಯಕ್ಕೊಳಗಾದ ನ್ಯಾಯಮೂರ್ತಿ ಜಾಯ್ ಸೇನ್‌ಗುಪ್ತಾ ಅವರು ಶಿವಲಿಂಗವನ್ನು ತೆಗೆದುಹಾಕುವ ಆದೇಶವನ್ನು ಹಿಂಪಡೆದರು ಮತ್ತು ವಿಷಯವನ್ನು ಕೆಳ ನ್ಯಾಯಾಲಯಕ್ಕೆ ವರ್ಗಾಯಿಸುವಂತೆ ಆದೇಶಿಸಿದರು. ಮುರ್ಷಿದಾಬಾದ್ ಜಿಲ್ಲೆಯ ಬೆಲಡಾಂಗಾ ಪ್ರದೇಶದ ಖಿದಿರಪುರ್ ಗ್ರಾಮದ ತುಂಡು ಭೂಮಿಗೆ ಸಂಬಂಧಿಸಿದಂತೆ ಸುದೀಪ್ ಪಾಲ್ ಮತ್ತು ಗೋವಿಂದಾ ಮಂಡಲ್ ನಡುವೆ ವಿವಾದ ನಡೆದಿತ್ತು. ಇಂತಹದರಲ್ಲಿಯೇ ಮೇ, 2023ರಲ್ಲಿ ಗೋವಿಂದಾ ಅವರು ಆ ಜಾಗದಲ್ಲಿ ಶಿವಲಿಂಗ ಪ್ರತಿಷ್ಠಾಪಿಸಿದ್ದಾರೆ ಎಂದು ಸುದೀಪ್ ಉಚ್ಚನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ, ಗೋವಿಂದಾ ಅವರು, ಈ ಶಿವಲಿಂಗವು ಸ್ವಯಂಭೂ ಆಗಿದೆ ಮತ್ತು ಅದು ಇದ್ದಕ್ಕಿದ್ದಂತೆ ಭೂಮಿಯಿಂದ ಮೇಲೆದ್ದಿದೆ ಎಂದು ಸ್ಪಷ್ಟಪಡಿಸಿದ್ದಾರೆ.
Calcutta HC judge changes order after assistant registrar passes out while recording verdict to remove Shivlinghttps://t.co/gENaT97Ptf
— OpIndia.com (@OpIndia_com) August 10, 2023
ಸಂಪಾದಕೀಯ ನಿಲುವು
ಜಗತ್ತಿನ ಅನೇಕ ವಿಷಯಗಳು ಈ ಪಂಚೇಂದ್ರಿಯಗಳಾದ ಮನಸ್ಸು ಮತ್ತು ಬುದ್ಧಿಯನ್ನು ಮೀರಿವೆ ಮತ್ತು ಅವುಗಳನ್ನು ಅರ್ಥಮಾಡಿಕೊಳ್ಳಲು ಸಾಧನೆಯನ್ನೇ ಮಾಡಬೇಕಾಗುತ್ತದೆ. ಭಾರತೀಯ ಋಷಿ-ಮುನಿಗಳು ನಮಗೆ ಅಧ್ಯಾತ್ಮದ ಮಹತ್ವವನ್ನು ಹೇಳಿದ್ದರೂ, ಭಾರತೀಯ ಸಮಾಜವು ಸಾಧನಾಹೀನವಾಗುತ್ತಿದೆ, ಇದು ಭಾರತದ ದೌರ್ಭಾಗ್ಯ ! |