ಇಸ್ಲಾಮಿಕ್‌ ಬಾಂಗ್ಲಾದೇಶದ ಚಿಟಗಾವದಲ್ಲಿ ದುರ್ಗಾದೇವಿ ದೇವಸ್ಥಾನದಲ್ಲಿನ ಮೂರ್ತಿ ಧ್ವಂಸ !

ಈ ಮೇಲಿನ ಚಿತ್ರ ಪ್ರಕಟಿಸುವುದರ ಉದ್ದೇಶ ಯಾರ ಧಾರ್ಮಿಕ ಭಾವನೆಗಳಿಗೆ ನೋವನ್ನುಂಟು ಮಾಡುವುದಾಗಿರದೇ ನಿಜ ಸ್ಥಿತಿ ತಿಳಿಸುವುದಾಗಿದೆ – ಸಂಪಾದಕರು

ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದಲ್ಲಿನ ಅಲ್ಪಸಂಖ್ಯಾತ ಹಿಂದೂಗಳ ದೇವಸ್ಥಾನಗಳ ಮೇಲೆ ಸತತವಾಗಿ ದಾಳಿ ನಡೆಯುತ್ತಿವೆ. ಚಿಟಗಾವ ಜಿಲ್ಲೆಯ ಇಥಾಝಾರಿ ಉಪ ಜಿಲ್ಲೆಯಲ್ಲಿರುವ ಶಿಕಾರಪುರ ಪ್ರದೇಶದಲ್ಲಿನ ದುರ್ಗಾದೇವಿಯ ದೇವಸ್ಥಾನದ ಮೇಲೆ ಕೆಲವು ಜಿಹಾದಿ ಭಯೋತ್ಪಾದಕರು ದಾಳಿ ನಡೆಸಿದರು. ಅವರು ದುರ್ಗಾದೇವಿಯ ಮೂರ್ತಿ ಸಹಿತ ಇತರ ದೇವತೆಗಳ ಮೂರ್ತಿಗಳನ್ನು ಧ್ವಂಸ ಮಾಡಿದ್ದಾರೆ.

ಇಥಾಝಾರಿ ಉಪಜಿಲ್ಲೆ ಇದು ವಿಶ್ವದ ಎಲ್ಲಕ್ಕಿಂತ ದೊಡ್ಡ ಮದರಸಾ ಮತ್ತು ಭಯೋತ್ಪಾದಕರ ಕಾರ್ಖಾನೆ ಇರುವ ಸ್ಥಳ ಎಂದು ಗುರುತಿಸಲಾಗುತ್ತದೆ, ಎಂದು ‘ವ್ಹಾಯಿಸ್‌ ಆಫ್ ಬಾಂಗ್ಲಾದೇಶಿ ಹಿಂದೂಜ್‌’ ಈ ಸಂಘಟನೆಯು ಸನಾತನ ಪ್ರಭಾತದ ಪ್ರತಿನಿಧಿಗೆ ಮಾಹಿತಿ ನೀಡಿದೆ. ಈ ಸಂದರ್ಭದಲ್ಲಿ ಅವರ ಟ್ವೀಟರ ಖಾತೆಯಿಂದ ಟ್ವೀಟ್‌ ಸಹ ಮಾಡಲಾಗಿದೆ.

ಸಂಪಾದಕೀಯ ನಿಲುವು

ಬಹುಸಂಖ್ಯಾತ ಹಿಂದೂಗಳ ಭಾರತದಲ್ಲಿ ಗುರುಗ್ರಾಮ, ಪಲವಲ ಇವುಗಳಂತಹ ನಗರಗಳಲ್ಲಿ ಕೆಲವು ಮತಾಂಧ ಮುಸ್ಲೀಮರು ಮಸೀದಿಗಳ ಮೇಲೆ ದಾಳಿ ನಡೆಸಿ ಅದರ ಆರೋಪವನ್ನು ಹಿಂದೂಗಳ ಮೇಲೆ ಹೊರಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಇನ್ನೊಂದೆಡೆ ಹಿಂದೂಗಳು ಅಲ್ಪಸಂಖ್ಯಾತರಿರುವ ಬಾಂಗ್ಲಾದೇಶದಲ್ಲಿ ಅವರ ದೇವಸ್ಥಾನಗಳನ್ನು ಸತತವಾಗಿ ಧ್ವಂಸ ಮಾಡಲಾಗುತ್ತಿವೆ. ಈಗ ಹಿಂದೂ ರಾಷ್ಟ್ರದ ಸ್ಥಾಪನೆಯೊಂದೇ ಇದರ ಮೇಲಿನ ಪರ್ಯಾಯ ಉಳಿಯುತ್ತದೆ, ಎಂಬುದನ್ನು ಗಮನದಲ್ಲಿಡಿ !