ಆಮ್ ಆದ್ಮಿ ಪಕ್ಷದ ನಾಯಕ ಜಾವೇದ್ ಅಹಮದ್ ನ ವಿರುದ್ಧ ಕೊಲೆಗೆ ಸಂಬಂಧಿಸಿದಂತೆ ದೂರು ದಾಖಲು !

  • ನೂಹ (ಹರಿಯಾಣ) ಇಲ್ಲಿಯ ಹಿಂಸಾಚಾರದಲ್ಲಿ ಹಿಂದುತ್ವನಿಷ್ಠ ನಾಯಕರ ಹತ್ಯೆ ಪ್ರಕರಣ

  • ಜಾವೇದ್ ಅಹಮದರನ್ನು ಕಾಪಾಡಲು ಆಮ್ ಆದ್ಮಿ ಪಕ್ಷದ ಪ್ರಯತ್ನ

 

ನೂಹ (ಹರಿಯಾಣ) – ಇಲ್ಲಿ ನಡೆದಿರುವ ಗಲಭೆಯಲ್ಲಿ ಭಜರಂಗದಳದ ನಾಯಕ ಪ್ರದೀಪ ಕುಮಾರ ಇವರ ಹತ್ಯೆ ಮಾಡಿದ್ದಾರೆ. ಪ್ರದೀಪ್ ಕುಮಾರ್ ಇವರ ಹತ್ಯೆಯ ಪ್ರಕರಣದಲ್ಲಿ ಆಮ್ ಆದ್ಮಿ ಪಕ್ಷದ ನಾಯಕ ಜಾವೇದ್ ಅಹಮದ್ ಇವರ ವಿರುದ್ಧ ದೂರು ದಾಖಲಿಸಲಾಗಿದೆ. ಈ ಗಲಭೆಯಲ್ಲಿ ಅವರ ಹೆಸರು ಬೆಳಕಿಗೆ ಬರುತ್ತಲೇ, ಆಮ್ ಆದ್ಮಿ ಪಕ್ಷ ಅವರ ಸಹಾಯಕ್ಕಾಗಿ ಮುಂದೆ ಬಂದಿದೆ. ದೆಹಲಿಯಲ್ಲಿ ೨೦೨೦ ರಲ್ಲಿ ನಡೆದಿರುವ ಹಿಂದು ವಿರೋಧಿ ಗಲಬೆಯ ಮುಖ್ಯ ಸೂತ್ರಧಾರ ಮತ್ತು ಆಮ್ ಆದ್ಮಿ ಪಕ್ಷದ ನಾಯಕ ತಾಹಿರ್ ಹುಸೇನ್ ನನ್ನು ಕಾಪಾಡಲು ಪಕ್ಷ ಏನೆಲ್ಲಾ ಮಾಡಿತು, ಅದನ್ನೇ ಈಗ ನೂಹ ಗಲಬೆಯಲ್ಲಿನ ಸೂತ್ರಧಾರ ಜಾವೇದ್ ಅಹಮದನಿಗಾಗಿ ಮಾಡುತ್ತಿದ್ದಾರೆ, ಎಂದು ಒಂದು ವಾರ್ತೆಯಲ್ಲಿ ಹೇಳಿದ್ದಾರೆ.

ಅವರನ್ನು ಕೊಂದು ಬಿಡಿ, ಮುಂದಿನದು ನಾನು ನೋಡಿಕೊಳ್ಳುತ್ತೇನೆ ! – ಜಾವೇದ್ ಅಹಮದ್

ಎಎಪಿ ನಾಯಕ ಜಾವೇದ್ ಅಹಮದ್

ಭಜರಂಗದಳದ ನಾಯಕ ಪ್ರದೀಪ ಕುಮಾರ ಇವರ ಹತ್ಯೆಯ ಪ್ರಕರಣದಲ್ಲಿನ ಒಂದು ವಿಡಿಯೊ ಪೊಲೀಸರಿಗೆ ದೊರೆತಿದೆ. ಅದರಲ್ಲಿ ಈ ಘಟನೆಯಲ್ಲಿನ ಪ್ರತ್ಯಕ್ಷ ಸಾಕ್ಷಿದಾರ ಪವನ ಇವರು, ‘ಪ್ರದೀಪ ಕುಮಾರ ಮತ್ತು ನಾನು ನೂಹದಲ್ಲಿನ ನಾಲ್ಹಾರ ದೇವಸ್ಥಾನದಿಂದ ಹೊರಬಂದು ವಾಹನದಲ್ಲಿ ಹೋಗುತ್ತಿರುವಾಗ ಮುಸಲ್ಮಾನರ ವಾಹನ ಅಡ್ಡ ಬಂದಿತು. ಆದ್ದರಿಂದ ನಮಗೆ ನಮ್ಮ ವಾಹನ ನಿಲ್ಲಿಸಬೇಕಾಯಿತು. ಆ ಗಾಡಿಯಲ್ಲಿದ್ದ ಜಾವೇದ್ ಅಹಮದ್ ಸಹಚರರನ್ನು ಉದ್ದೇಶಿಸಿ, ‘ಅವನನ್ನು (ಪ್ರದೀಪ ಕುಮಾರನನ್ನು) ಕೊಂದುಬಿಡಿ, ಮುಂದೆ ಏನು ಮಾಡುವುದು ಅದನ್ನು ನಾನು ನೋಡಿಕೊಳ್ಳುತ್ತೇನೆ ಎಂದು ಹೇಳುತ್ತಿದ್ದ.

೧. ದೆಹಲಿ ಭಾಜಪದ ಅಧ್ಯಕ್ಷ ವೀರೇಂದ್ರ ಸಚದೇವ ಇವರು ಟ್ವೀಟ್ ಮಾಡಿ, ಗಲಭೆ ಪ್ರಚೋದಿಸುವುದು ಮತ್ತು ನಿರಪರಾಧಿಗಳಿಗೆ ಹೊಡೆಯುವುದು, ಇದು ಆಮ್ ಆದ್ಮಿ ಪಕ್ಷದ ಬೇರೆಯ ರಾಜಕಾರಣ ಇರುವುದೇ ? ಆಮ್ ಆದ್ಮಿ ಪಕ್ಷದಲ್ಲಿ ಗಲಭೆಕೋರರು ಮತ್ತು ಹಿಂದೂ ವಿರೋಧಿ ಮುಖವಾಡದ ಬಗ್ಗೆ ಮಾತನಾಡುವಾಗ ಅವರು ಅರವಿಂದ ಕೇಜ್ರಿವಾಲ್ ಇವರ ಬಗ್ಗೆ ಟೀಕಿಸಿದ್ದಾರೆ.

೨. ಆಮ್ ಆದ್ಮಿ ಪಕ್ಷದ ಹಿರಿಯ ಉಪಾಧ್ಯಕ್ಷ ಅನುರಾಗ ಧಾಂಡ ಇವರು ಜಾವೇದ್ ಅಹಮದನ ಕುರಿತು ದಾಖಲಿಸಿರುವ ದೂರಿನ ಬಗ್ಗೆ ಸ್ಪಷ್ಟಿಕರಣ ನೀಡುವಾಗ ಭಾಜಪವನ್ನು ತೀವ್ರವಾಗಿ ಟೀಕಿಸಿದ್ದಾರೆ. ಭಾಜಪ ಈಗ ಷಡ್ಯಂತ್ರ ರೂಪಿಸಿ ಸಮಾಜದಲ್ಲಿ ಬಿರುಕು ಮೂಡಿಸುವ ಕೆಲಸ ಮಾಡುತ್ತಿದೆ ಎಂದು ಧಾಂಡ ಹೇಳಿದರು.

ಸಂಪಾದಕೀಯ ನಿಲುವು

ದೆಹಲಿಯ ಗಲಭೆಯಲ್ಲಿ ಆಮ್ ಆದ್ಮಿ ಪಕ್ಷದ ಮತಾಂಧ ನಾಯಕನ ಕೈವಾಡವಿದೆ ಮತ್ತು ನೂಹದಲ್ಲಿನ ಗಲಭೆಯಲ್ಲಿ ಕೂಡ ಈ ಪಕ್ಷದ ಮತಂಧ ನಾಯಕನ ಕೈವಾಡವಿರುವುದು ಬೆಳಕಿಗೆ ಬಂದಿದೆ. ಇದರಿಂದ ‘ಈ ಪಕ್ಷ ಎಂದರೆ ಗಲಭೆ ನಡೆಸುವ ಹಿಂದುಗಳನ್ನು ಹೊಡೆಯುವ ಪಕ್ಷವಾಗಿದೆ’, ಎಂದು ತಿಳಿಯಬೇಕೆ ?

ಈ ಪಕ್ಷದ ನಿಜ ಸ್ವರೂಪ ತಿಳಿದ ನಂತರ ಜಾತ್ಯತೀತರು ಮತ್ತು ಪ್ರಗತಿಪರರು ಮೌನವಾಗಿದ್ದಾರೆ, ಇದನ್ನು ತಿಳಿದುಕೊಳ್ಳಿ !