ಹಿಂದೂಗಳೇ, ಪ್ರವಾಸಿಗರಲ್ಲ ಭಕ್ತರಾಗಿ !

ಸದ್ಯ ಭಾರತದಲ್ಲಿ ಪ್ರಸಿದ್ಧಿಯಲ್ಲಿರುವ ದೇವಸ್ಥಾನಗಳ ಗರ್ಭಗುಡಿಗಳಲ್ಲಿನ ಪ್ರವೇಶ ಮತ್ತು ದೇವಸ್ಥಾನಗಳಿಗೆ ಸಂಬಂಧಿಸಿದ ಇತರ ವಾದವಿವಾದಗಳು (ಗರ್ಭಗುಡಿಯಲ್ಲಿ ಪ್ರವೇಶಿಸುವುದು ಅಥವಾ ವ್ಯವಸ್ಥಾಪನೆಯಲ್ಲಿನ ನೇಮಕಾತಿ ಇತ್ಯಾದಿ). ಇವುಗಳ ಮೇಲೆ ವಿವಿಧ ಮಾಧ್ಯಮಗಳಿಂದ ಎರಡೂ ಬದಿಗಳಿಂದ ಚರ್ಚೆ ಯಾಗುತ್ತಿದೆ. ಈ ಸಂದರ್ಭದಲ್ಲಿ ನ್ಯಾಯಾಲಯದ ಕೆಲವು ತೀರ್ಪು ಗಳೂ ಬಂದಿವೆ. ಹಿಂದೂಗಳ ದೇವಸ್ಥಾನಗಳ ಈ ಸ್ಥಿತಿಗೆ ಕೆಲವು ಕಾರಣಗಳಿವೆ, ಆದರೆ ಅದಕ್ಕೆ ಬೇರೆ ಯಾರೂ ಅಲ್ಲ, ನಾವೇ ಹಿಂದೂ ಬಾಂಧವರೇ ಕಾರಣರಾಗಿದ್ದೇವೆ, ಇದು ನನ್ನ ಸ್ಪಷ್ಟ ಅಭಿಪ್ರಾಯವಿದೆ.

ವೇದಮೂರ್ತಿ ಭೂಷಣ ದಿಗಂಬರ ಜೋಶಿ

೧. ಈಗ ಹಿಂದೂಗಳು ‘ಭಕ್ತರೆಂದು ಅಲ್ಲ, ‘ಪ್ರವಾಸಿಗರೆಂದು ದೇವಸ್ಥಾನಗಳಿಗೆ ಭೇಟಿ ನೀಡುವುದು ಸದ್ಯ ದೇವಸ್ಥಾನಗಳಿಗೆ ‘ಭಕ್ತರೆಂದಲ್ಲ; ‘ಪ್ರವಾಸಿಗರೆಂದು ಹೋಗುವ ಹೊಸ ಪದ್ಧತಿಯು ಪ್ರಾರಂಭವಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಅನೇಕ ಹಿಂದೂ ದೇವಸ್ಥಾನಗಳನ್ನು ‘ಪ್ರವಾಸಿಸ್ಥಳಗಳೆಂದು ಘೋಷಿಸಲಾಗಿದೆ. ಈ ಪ್ರವಾಸಿಗರು ದೇವಸ್ಥಾನದಲ್ಲಿ ಕುಳಿತು ಈಶ್ವರನ ಧ್ಯಾನ ಮಾಡುವ ಬದಲು ದೇವಸ್ಥಾನದ ಪರಿಸರದಲ್ಲಿ ‘ಸೆಲ್ಫೀ ತೆಗೆಯುವುದರಲ್ಲಿ ನಿರತ ರಾಗಿರುತ್ತಾರೆ. ಅವರಿಗೆ ದೇವಸ್ಥಾನದಲ್ಲಿರುವ ದೇವರ ಅಥವಾ ಸಂತರ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ಇರುವುದಿಲ್ಲ. ಅವರು ಇತರ ವಿಷಯಗಳಲ್ಲಿ ತಲ್ಲೀನರಾಗಿರುತ್ತಾರೆ.

೨. ದೇವಸ್ಥಾನಗಳಲ್ಲಿ ವಾಸ್ತುಶಿಲ್ಪದ ಮಾಹಿತಿಯ ಕೊರತೆ ದೇವಸ್ಥಾನಗಳಲ್ಲಿ ಅವುಗಳ ವಾಸ್ತುಶಿಲ್ಪ ಅಥವಾ ಅವುಗಳ ಇತಿಹಾಸದ ಬಗ್ಗೆ ಮಾಹಿತಿ ಕೊಟ್ಟಿರುವುದಿಲ್ಲ. ಅದರ ಬದಲು ಅನೇಕ ರಾಜಕೀಯ ನಾಯಕರ ಚಿಕ್ಕ-ಪುಟ್ಟ ಫಲಕಗಳು ದೇವ ಸ್ಥಾನಗಳ ನಾಲ್ಕು ಬದಿಗಳಲ್ಲಿ ಕಂಡುಬರುತ್ತವೆ. ದೇವಸ್ಥಾನಗಳ ಪರಿಸರದಲ್ಲಿರುವ ಅಂಗಡಿಗಳಿಂದ ಪಾನಪಟ್ಟಿ (ಎಲೆ), ಗುಟ್ಖಾ, ಸಿಗರೇಟುಗಳನ್ನು ಮಾರಾಟವನ್ನು ಮಾಡಲಾಗುತ್ತದೆ.

೩. ಧರ್ಮಶಾಲೆಗಳ ಜಾಗದಲ್ಲಿ ‘ಲಾಡ್ಜ್ಗಳ ನಿರ್ಮಾಣ ಹಿಂದಿನ ಕಾಲದಲ್ಲಿ ದೇವಸ್ಥಾನಗಳ ಪರಿಸರದಲ್ಲಿ ಧರ್ಮ ಶಾಲೆಗಳನ್ನು ಕಟ್ಟುತ್ತಿದ್ದರು. ಅವುಗಳಲ್ಲಿ ಯಾತ್ರಿಕರಿಗೆ ಅಥವಾ ಭಕ್ತರಿಗೆ ಉಳಿದುಕೊಳ್ಳುವ ವ್ಯವಸ್ಥೆಯನ್ನು ಮಾಡಲಾಗುತ್ತಿತ್ತು. ಅಲ್ಲಿ ಭಕ್ತರು ಆನಂದದಿಂದ ಇರುತ್ತಿದ್ದರು. ಆ ಕಾಲದಲ್ಲಿ ಅಲ್ಲಿ ಪಾರಾಯಣ ಸಪ್ತಾಹಗಳು (ದೇವರ ಕೀರ್ತನ, ಪ್ರವಚನ ಇತ್ಯಾದಿ) ನಡೆಯುತ್ತಿದ್ದವು. ಈ ನಿಮಿತ್ತದಿಂದ ಅವರು ಈಶ್ವರನ ಸೇವೆಯನ್ನು ಮಾಡುತ್ತಿದ್ದರು. ಈ ಧರ್ಮಶಾಲೆಗಳ ಜಾಗದಲ್ಲಿ ಈಗ ‘ಲಾಡ್ಜ್ಗಳು ನಿರ್ಮಾಣವಾಗಿವೆ. ಅಲ್ಲಿ ಪ್ರವಾಸಿಗರು ಹವಾನಿಯಂತ್ರಿತ (ಎ.ಸಿ.) ಕೊಠಡಿ, ಡಬಲ್‌ಬೆಡ್, ದೂರಚಿತ್ರ ವಾಹಿನಿ (ಟಿ.ವಿ.) ಇತ್ಯಾದಿಗಳ ಬಗ್ಗೆ ವಿಚಾರಿಸುತ್ತಾರೆ. ನಿಜವಾದ ಭಕ್ತನಿಗೆ ಈ ಎಲ್ಲ ಸುಖಸೌಲಭ್ಯಗಳು ಇಲ್ಲದಿದ್ದರೂ ನಡೆಯುತ್ತದೆ.

೪. ಹಿಂದೂಗಳಿಂದ ಭಕ್ತನಿವಾಸಗಳ ದುರುಪಯೋಗ ‘ಭಕ್ತನಿವಾಸವು ಭಕ್ತರಿಗಾಗಿರುತ್ತದೆ, ಈಗ ಅನೇಕರು ಇದನ್ನು ಮರೆತಿದ್ದಾರೆ. ಹೊಸದಾಗಿ ಮದುವೆಯಾಗಿದ್ದ ಅನೇಕ ಯುವ ಜೋಡಿಗಳು ಮಧುಚಂದ್ರಕ್ಕಾಗಿ ಭಕ್ತನಿವಾಸಗಳನ್ನು ಬಳಸುತ್ತಾರೆ. ಕೆಲವು ಭಕ್ತನಿವಾಸಗಳಲ್ಲಿ ಯುವಕ-ಯುವತಿಯರ ಆತ್ಮಹತ್ಯೆಯ ಘಟನೆಗಳಾದ ವರದಿಗಳನ್ನು ಓದಿದ್ದೇವೆ. (ಅವರು ಪತಿ-ಪತ್ನಿ ಅಲ್ಲ, ಮನೆಯಿಂದ ಓಡಿ ಬಂದ ಪ್ರೇಮಿಗಳಾಗಿದ್ದರು.)

೫. ದೇವಸ್ಥಾನಗಳ ಉದಾಸೀನತೆಯಿಂದ ಭಕ್ತರು ಆಧ್ಯಾತ್ಮಿಕ ಜ್ಞಾನದಿಂದ ವಂಚಿತರಾಗುವುದು ದೇವಸ್ಥಾನಗಳ ವ್ಯವಸ್ಥಾಪನೆಯಲ್ಲಿ ನಿಷ್ಕಾಮ ಭಕ್ತರ ಬದಲು ಪರಿಸರದ ರಾಜಕಾರಣಿಗಳು ಅಥವಾ ಶ್ರೀಮಂತ ವ್ಯಕ್ತಿಗಳನ್ನು ನೇಮಿಸಲಾಗುತ್ತದೆ. ಆದುದರಿಂದ ಕೆಲವು ದೇವಸ್ಥಾನಗಳ ವಿಶ್ವಸ್ಥರಿಗೆ ಮತ್ತು ಸಿಬ್ಬಂದಿಗಳಿಗೆ ಆ ದೇವಸ್ಥಾನದ ದೇವತೆಯ ಬಗ್ಗೆ ಶ್ರದ್ಧೆಯೇ ಇರುವುದಿಲ್ಲ. ಅನೇಕರಿಗೆ ಆ ದೇವತೆ ಅಥವಾ ಸಂತರ ಬಗ್ಗೆ ಸರಿಯಾದ ಮಾಹಿತಿಯೂ ಇರುವುದಿಲ್ಲ. ಅವರಿಗೆ ದೇವತೆ ಅಥವಾ ಸಂತರ ಬಗ್ಗೆ ಬರೆದ ಗ್ರಂಥಗಳ ಬಗ್ಗೆ ಹೆಚ್ಚೇನು ತಿಳಿದಿರುವುದಿಲ್ಲ. ಎಲ್ಲ ಸಂತರು ವೇದಗಳಲ್ಲಿನ ತತ್ತ್ವಜ್ಞಾನವನ್ನು ಅಭಂಗ ಅಥವಾ ದ್ವಿಪದಿ (ಕಾವ್ಯ) ಇವುಗಳ ಮಾಧ್ಯಮದಿಂದ ಸುಲಭ ಮತ್ತು ಸರಳ ಭಾಷೆಯಲ್ಲಿ ಹೇಳಿದ್ದಾರೆ. ಆದುದರಿಂದ ಈ ದೇವಸ್ಥಾನಗಳ ಮಾಧ್ಯಮದಿಂದ ಅವರ ತತ್ತ್ವಜ್ಞಾನದ ಪ್ರಚಾರ-ಪ್ರಸಾರವಾಗುವುದು ಅಪೇಕ್ಷಿತವಾಗಿರುತ್ತದೆ; ಆದರೆ ಹಾಗಾಗುವು ದಿಲ್ಲ. ಆದುದರಿಂದ ಹಿಂದೂಗಳಿಗೆ ತಮ್ಮ ದೇವಿದೇವತೆಗಳ ಮತ್ತು ಸಂತರ ಮೇಲಾಗುವ ಟೀಕೆಗಳಿಗೆ ಪ್ರತಿವಾದ ಮಾಡಲು ಬರುವುದಿಲ್ಲ.

೬. ಹಿಂದೂಗಳು ಉಪಾಸನೆಯನ್ನು ಹೆಚ್ಚಿಸುವುದು ಆವಶ್ಯಕ ! ಉಪಾಸನೆಯ ಅಭಾವದಿಂದ ಹಿಂದೂಗಳು ಭಕ್ತಿ ಮತ್ತು ಶಕ್ತಿಯಲ್ಲಿ ಕಡಿಮೆ ಬೀಳುತ್ತಿದ್ದಾರೆ. – ವೇದಮೂರ್ತಿ ಭೂಷಣ ದಿಗಂಬರ ಜೋಶಿ, ಸಿಂಧುದುರ್ಗ, ಮಹಾರಾಷ್ಟ್ರ.

ನಮ್ಮ ಮನೆಗಳಲ್ಲಿ ಸಂಜೆಯ ಸಮಯದಲ್ಲಿ ‘ಶುಭಂ ಕರೋತಿ ಕಿವಿಗೆ ಕೇಳಿಸುವ ಬದಲು ಧಾರಾವಾಹಿಗಳ ಸಂಭಾಷಣೆಗಳು ಕಿವಿಗೆ ಕೇಳಿಸುತ್ತಿವೆ. ನಮ್ಮ ಮನೆಗೆ ಲಕ್ಷ್ಮೀ ಬರುವ ಸಮಯದಲ್ಲಿ ಧಾರಾವಾಹಿಗಳಲ್ಲಿನ ಪಿತೂರಿಗಳು, ಹೆಣ್ಣುಮಕ್ಕಳ ಜಗಳ, ಮೋಸ ಇತ್ಯಾದಿ ವಿಷಯಗಳು ದೊಡ್ಡ ಧ್ವನಿಯಲ್ಲಿ ಕಿವಿಗೆ ಕೇಳಿಸುತ್ತದೆ. ಅದರಿಂದ ‘ಸಹಜವಾಗಿಯೇ ಚಿಕ್ಕಮ್ಮ, ದೊಡ್ಡಮ್ಮ, ಅತ್ತೆ ಮುಂತಾದವರು ಕಪಟಿಗಳಾಗಿರುತ್ತಾರೆ, ಎಂಬ ತಪ್ಪು ಕಲ್ಪನೆ ಮನಸ್ಸಿನಲ್ಲಿ ಮನೆ ಮಾಡತೊಡಗುತ್ತದೆ. ಇವುಗಳೊಂದಿಗೆ ದೂರಚಿತ್ರವಾಹಿನಿಗಳಲ್ಲಿ ಬರುವ ಕಾರ್ಯಕ್ರಮಗಳಲ್ಲಿಯೇ ಹಿಂದೂ ದೇವಿ-ದೇವತೆಗಳ ಅತೀ ಹೆಚ್ಚು ವಿಡಂಬನೆಯನ್ನು ಮಾಡಲಾಗುತ್ತದೆ.

೭. ಉಪಾಸನೆಯನ್ನು ಮಾಡಿ ಈಶ್ವರನ ಭಕ್ತರಾಗಿರಿ !

ಯಾವ ವ್ಯಕ್ತಿಗಳು ಇಂದು ಅಧರ್ಮದಿಂದ ನಡೆಯುತ್ತಿದ್ದಾರೆ, ಅವರ ಮುಂದಿನ ಅವಸ್ಥೆ ಹೇಗಿರುವುದು ಮತ್ತು ಭಗವಂತನು ಅವರಿಗೆ ಎಂತಹ ಶಿಕ್ಷೆಯನ್ನು ಕೊಡುವನು ? ಇದರ ಮೇಲೆ ಮನುಸ್ಮೃತಿಯಲ್ಲಿ ಒಂದು ಒಳ್ಳೆಯ ಶ್ಲೋಕವಿದೆ.

ಅಧರ್ಮೇಣೌಧತೇ ತಾವತ್ ತತೋ ಭದ್ರಾಣಿ ಪಶ್ಯತಿ |
ತತಃ ಸಪತ್ನಾಞ್ಜಯತಿ ಸಮೂಲಸ್ತು ವಿನಶ್ಯತಿ ||
– ಮನುಸ್ಮೃತಿ, ಅಧ್ಯಾಯ ೪, ಶ್ಲೋಕ ೧೭೪

ಅರ್ಥ : ಅಧರ್ಮ ಮಾಡಿದ ತಕ್ಷಣ ಅದರ ದುಷ್ಪರಿಣಾಮ ಕಾಣಿಸುವುದಿಲ್ಲ, ಕೆಲವು ಕಾಲ ಅಧರ್ಮದ ಉನ್ನತಿ, ಪ್ರಗತಿ ಆಗುವುದು ಕಾಣಿಸುತ್ತದೆ. ಅವರಿಗೆ ಅಧಿಕಾರ, ಸಂಪತ್ತು, ಪ್ರತಿಷ್ಠೆ ಪ್ರಾಪ್ತವಾಗುತ್ತದೆ. ಅವರು ತಮ್ಮ ಶತ್ರುವನ್ನೂ ಜಯಿಸಬಹುದು; ಆದರೆ ಕೊನೆಗೆ ಅಧರ್ಮಿಗಳ ನಾಶವಾಗುತ್ತದೆ. ಆದುದರಿಂದ ನಮ್ಮ ದೇವಸ್ಥಾನಗಳ ಏಳಿಗೆಯಾಗಲು ನಮ್ಮಲ್ಲಿ ಸುಧಾರಣೆ ಆಗುವುದು ಆವಶ್ಯಕವಾಗಿದೆ. ಹಿಂದುಗಳು ದೇವಸ್ಥಾನಗಳಿಗೆ ಭಕ್ತರೆಂದು ಹೋಗುವುದು ಆವಶ್ಯಕವಾಗಿದೆ, ಪ್ರವಾಸಿಗರೆಂದು ಅಲ್ಲ. ಇಲ್ಲಿಯವರೆಗೆ ಭಕ್ತರಿಗಾಗಿ ಭಗವಂತನು ಓಡಿಬಂದ ಸಾವಿರಾರು ಉದಾಹರಣೆಗಳಿವೆ; ಆದರೆ ಪ್ರವಾಸಿಗರಿ ಗಾಗಿ ಭಗವಂತ ಓಡಿ ಬಂದ ಒಂದೂ ಉದಾಹರಣೆ ಇಲ್ಲ.

– ವೇದಮೂರ್ತಿ ಭೂಷಣ ದಿಗಂಬರ ಜೋಶಿ, ಸಿಂಧುದುರ್ಗ.