ದೇವಸ್ಥಾನ ಸರಕಾರೀಕರಣ ದುಷ್ಪರಿಣಾಮಗಳನ್ನು ಅರಿಯಿರಿ !
ತಿರುಮಲ – ದೇಶದ ಅತ್ಯಂತ ಶ್ರೀಮಂತ ದೇವಸ್ಥಾನವಾಗಿರುವ ತಿರುಮಲ ತಿರುಪತಿ ದೇವಸ್ಥಾನದ ಮಂಡಳಿಯ ಅಧ್ಯಕ್ಷ ಹುದ್ದೆಗೆ ಕ್ರೈಸ್ತ ವ್ಯಕ್ತಿಯ ನೇಮಕವು ವಿವಾದಕ್ಕೆ ಕಾರಣವಾಗಿದೆ. ಆಂಧ್ರಪ್ರದೇಶದ ಕ್ರೈಸ್ತ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಕುಟುಂಬದ ಕಟ್ಟರ ಬೆಂಬಲಿಗನಾಗಿರುವ ಶಾಸಕ ಕರುಣಾಕರ್ ರೆಡ್ಡಿ ಅವರನ್ನು ತಿರುಪತಿ ಮಂಡಳಿಯ ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಕರುಣಾಕರ್ ರೆಡ್ಡಿ ಅವರ ಕುಟುಂಬ ಕ್ರೈಸ್ತ ಧರ್ಮದ ಪಾಲನೆ ಮಾಡುತ್ತದೆ. ಆಂಧ್ರಪ್ರದೇಶ ಸರಕಾರದ ಈ ನಿರ್ಣಯದ ಬಗ್ಗೆ ತೆಲುಗು ದೇಸಂ ಪಕ್ಷ, ಭಾಜಪ ಮತ್ತು ಇತರ ಹಲವು ವಿರೋಧ ಪಕ್ಷಗಳು ಪ್ರಶ್ನೆಚಿಹ್ನೆ ಎತ್ತಿವೆ. ತೆಲುಗು ದೇಸಂ ಪಕ್ಷದ ರಾಜ್ಯ ಕಾರ್ಯದರ್ಶಿ ಬುಚಿ ರಾಮ ಪ್ರಸಾದ ಇವರು ‘ಹಿಂದೂ ಧರ್ಮದಲ್ಲಿ ನಂಬಿಕೆಯಿಲ್ಲದ ವ್ಯಕ್ತಿಯನ್ನು ಹೇಗೆ ದೇವಸ್ಥಾನದ ಅಧ್ಯಕ್ಷರನ್ನಾಗಿ ಮಾಡಲು ಸಾಧ್ಯ?’ ಎಂದು ಪ್ರಶ್ನಿಸಿದ್ದಾರೆ. ಭಾಜಪದ ಪ್ರದೇಶಾಧ್ಯಕ್ಷ ಡಿ. ಪುರಂದರೇಶ್ವರಿಯವರು ‘ಈ ಹುದ್ದೆಗೆ ಹಿಂದೂ ಧರ್ಮದಲ್ಲಿ ನಂಬಿಕೆ ಇರುವವರನ್ನು ಮಾತ್ರ ನಿಯುಕ್ತಿಗೊಳಿಸಬೇಕು’, ಎಂದು ಹೇಳಿದ್ದಾರೆ. ದೇವಸ್ಥಾನದ ಅಧ್ಯಕ್ಷ ಸ್ಥಾನವನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿರುವುದು ವಿಷಾದನೀಯ ಎಂದು ಅವರು ಹೇಳಿದರು. ಭಾಜಪದ ಮುಖಂಡ ಹಾಗೂ ಮಾಜಿ ಮುಖ್ಯ ಕಾರ್ಯದರ್ಶಿ ಕೃಷ್ಣ ರಾವ್ ಇವರೂ ಕೂಡ ಸರಕಾರದ ನಿರ್ಣಯವನ್ನು ಟೀಕಿಸಿದ್ದಾರೆ. ಅವರು ಈ ಹಿಂದೆ ತಿರುಪತಿ ದೇವಸ್ಥಾನ ಮಂಡಳಿಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. (ತಿರುಮಲ ತಿರುಪತಿ ದೇವಸ್ಥಾನದ ಅಧ್ಯಕ್ಷ ಹುದ್ದೆಗೆ ಕ್ರೈಸ್ತ ವ್ಯಕ್ತಿಯನ್ನು ನೇಮಿಸುವುದು ಹಿಂದೂಗಳಿಗೆ ಲಜ್ಜಾಸ್ಪದವಾಗಿದೆ ! ಹಿಂದೂಗಳನ್ನು ಚರ್ಚ್ ನ ಅಧ್ಯಕ್ಷರನ್ನಾಗಿ ನೇಮಕ ಮಾಡಿರುವುದನ್ನು ಎಲ್ಲಿಯಾದರೂ ಕೇಳಿದ್ದೀರಾ ? – ಸಂಪಾದಕರು)
ಕರುಣಾಕರ್ ರೆಡ್ಡಿ ಎರಡನೇ ಬಾರಿಗೆ ಟ್ರಸ್ಟ್ ಅಧ್ಯಕ್ಷರಾಗುವರು !
ಇತ್ತೀಚೆಗೆ ಕರುಣಾಕರ್ ರೆಡ್ಡಿ ತಿರುಮಲ ತಿರುಪತಿ ದೇವಸ್ಥಾನ ಮಂಡಳಿಯ ಅಧ್ಯಕ್ಷ ಸ್ಥಾನವನ್ನು ಸ್ವೀಕರಿಸಿದ್ದಾರೆ. ಅವರಿಗೆ ಎರಡನೇ ಬಾರಿಗೆ ಈ ಹುದ್ದೆಯನ್ನು ವಹಿಸಲಾಗಿದೆ. ಮುಖ್ಯಮಂತ್ರಿ ಜಗನ್ ಮೋಹನ ರೆಡ್ಡಿ ಅವರ ತಂದೆ ವೈ, ಸ್ಯಾಮ್ಯುಯೆಲ್ ರಾಜಶೇಖರ ರೆಡ್ಡಿ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿದ್ದ ಕರುಣಾಕರ್ ರೆಡ್ಡಿಯವರನ್ನು 2006-2008ರ ಅವಧಿಯಲ್ಲಿ ದೇವಸ್ಥಾನದ ಅಧ್ಯಕ್ಷರನ್ನಾಗಿ ಮಾಡಲಾಗಿತ್ತು.
Andhra Pradesh: Opposition slams Reddy’s appointment as TTD chief
(reports @asrao2009 )https://t.co/An7vLnnATU pic.twitter.com/4cqPifUwb8
— Hindustan Times (@htTweets) August 8, 2023
ಸಂಪಾದಕೀಯ ನಿಲುವುಆಂಧ್ರಪ್ರದೇಶದಲ್ಲಿ ಕ್ರೈಸ್ತ ಜಗನ್ ಮೋಹನ್ ರೆಡ್ಡಿ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸುತ್ತಿರುವಾಗ, ಅವರ ರಾಜ್ಯದಲ್ಲಿ ಇಂತಹ ಘಟನೆ ನಡೆದರೆ ಆಶ್ಚರ್ಯವೇನಿಲ್ಲ ! ಹಿಂದೂಗಳಿಗೆ ಅತ್ಯಂತ ಪೂಜನೀಯವಾಗಿರುವ ದೇವಸ್ಥಾನದ ಅಧ್ಯಕ್ಷ ಹುದ್ದೆಯನ್ನು ಕ್ರೈಸ್ತರನ್ನು ನೇಮಿಸುವ ದಿಟ್ಟತನವನ್ನು ವೈ.ಎಸ್.ಆರ್ ಕಾಂಗ್ರೆಸ್ ಸರಕಾರ ಹೇಗೆ ತೋರಿಸುತ್ತದೆ ? ಇದು ಹಿಂದೂಗಳಿಗೆ ಲಜ್ಜಾಸ್ಪದ ! |