ದೇವಸ್ಥಾನದ ಬಳಿ ಸರಕಾರಿ ಅಧಿಕಾರಿಗಳ ಬಂಗಲೆ ಇದ್ದರಿಂದ ನೋಟಿಸ್ ನೀಡಲಾಗಿದೆ ಎಂದು ಜನರ ಆರೋಪ
ಛತರಪುರ (ಮಧ್ಯಪ್ರದೇಶ) – ಇಲ್ಲಿಯ ನರಸಿಂಹ ದೇವಸ್ಥಾನದ ಅರ್ಚಕರಿಗೆ ವಿಭಾಗಿಯ ಅಧಿಕಾರಿಯು ಭಜನೆ ಮತ್ತು ಆರತಿಯಿಂದ ಶಬ್ಧ ಮಾಲಿನ್ಯವಾಗುತ್ತಿದೆ ಎಂದು ನೋಟಿಸ್ ಜಾರಿ ಮಾಡಿದ್ದರು; ಆದರೆ ಕೆಲವೇ ಕ್ಷಣದಲ್ಲಿ ಈ ನೋಟಿಸ್ ಹಿಂಪಡೆದರು. ನೋಟಿಸ್ ಹಿಂಪಡೆಯುವ ಮುಂಚೆ ಸಾಮಾಜಿಕ ಜಾಲತಾಣದಲ್ಲಿ ಅದು ಪ್ರಸಾರವಾದ ನಂತರ ಧರ್ಮಾಭಿಮಾನಿ ಹಿಂದುಗಳಿಂದ ಅದರ ಬಗ್ಗೆ ಟಿಕೆ ಟಿಪ್ಪಣಿಗಳು ಆರಂಭವಾಗಿದ್ದವು. ಈ ದೇವಸ್ಥಾನದ ಹತ್ತಿರ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯಕಾರಿ ಅಧಿಕಾರಿ ಮತ್ತು ಜಿಲ್ಲಾಧಿಕಾರಿಗಳ ಬಂಗಲೆಗಳಿರುವುದು. ಅವರಿಗೆ ಆರತಿಯ ಧ್ವನಿಯಿಂದ ತೊಂದರೆ ಆಗುತ್ತಿರುವುದರಿಂದ ಈ ನೋಟಿಸ್ ಜಾರಿ ಮಾಡಿದ್ದಾರೆ ಎಂದು ಜನರ ಅಭಿಪ್ರಾಯವಾಗಿದೆ. ಮುಂದೆ ಇದರಿಂದ ವಿವಾದ ನಿರ್ಮಾಣವಾಗುವ ಸಾಧ್ಯತೆಗಳ ಬಗ್ಗೆ ಗಮನಕ್ಕೆ ಬರುತ್ತಲೇ ನೋಟಿಸ್ ಹಿಂಪಡೆಯಲಾಯಿತು.
ಈ ಪ್ರಕರಣದಲ್ಲಿ ವಿಭಾಗಿಯ ಅಧಿಕಾರಿ ಬಾಲವೀರ ರಮಣ ಇವರು, ನಮಗೆ ಮೌಖಿಕ ದೂರ ಬಂದ ನಂತರ ಲಿಖಿತ ನೋಟಿಸ್ ಜಾರಿ ಮಾಡಲಾಗಿತ್ತು. ಈಗ ಆರತಿಯ ಧ್ವನಿ ಕಡಿಮೆ ಮಾಡಿರುವುದರಿಂದ ನೋಟಿಸ್ ಹಿಂಪಡೆಯಲಾಗಿದೆ ಎಂದು ಹೇಳಿದರು. (ಸಾಮಾನ್ಯವಾಗಿ ಜನರಿಗೆ ಯಾವುದೇ ವಿಷಯದ ಬಗ್ಗೆ ಲಿಖಿತ ದೂರು ನೀಡಲು ಹೇಳುವ ಸರಕಾರಿ ಅಧಿಕಾರಿಗಳು ಇಲ್ಲಿಯವರೆಗೆ ಎಷ್ಟು ಮೌಖಿಕ ದೂರುಗಳಿಗೆ ತಕ್ಷಣ ಕ್ರಮ ಕೈಗೊಂಡಿದ್ದಾರೆ ? ಇದನ್ನು ಕೂಡ ಅವರು ಹೇಳಬೇಕು ! – ಸಂಪಾದಕರು)
Chhatarpur : नरसिंह मंदिर समिति को एसडीएम ने जारी किया नोटिस, ध्वनि प्रदूषण को लेकर नोटिस जारी करने पर भड़के हिंदू संगठन#MadhyaPradeshNews #Chhatarpur #SDM #Notice #ZeeMPCG
For More Updates : https://t.co/uXPUZQnDPQ pic.twitter.com/lHqzVnKB2u
— Zee MP-Chhattisgarh (@ZeeMPCG) July 20, 2023
ಸಂಪಾದಕರ ನಿಲುವು* ತಥಾಕಥಿತ ಶಬ್ಧ ಮಾಲಿನ್ಯದ ನೆಪದಲ್ಲಿ ದೇವಸ್ಥಾನಕ್ಕೆ ನೋಟಿಸ್ ಜಾರಿ ಮಾಡುವ ಸರಕಾರ ಎಂದಾದರು ಮಸೀದಿಯ ಮೇಲಿನ ಬೋಂಗಾದಿಂದ ದಿನದಲ್ಲಿ ೫ ಸಲ ನಡೆಯುವ ಶಬ್ಧ ಮಾಲಿನ್ಯದ ಬಗ್ಗೆ ನೋಟಿಸ್ ಜಾರಿ ಮಾಡಿರುವರೆ ? * ಭಾಜಪದ ರಾಜ್ಯದಲ್ಲಿ ಸರಕಾರದಿಂದ ನಡೆಯುವ ಇಂತಹ ಕೃತಿಗಳು ಹಿಂದುಗಳಿಗೆ ಅಪೇಕ್ಷಿತವಿಲ್ಲ ! |