ಕಾಂಗ್ರೆಸ್ ನಾಯಕ ಆಚಾರ್ಯ ಪ್ರಮೋದ್ ಕೃಷ್ಣಮ್ ಅವರಿಗೆ ಶ್ರೀ ಕಲ್ಕಿ ದೇವಸ್ಥಾನ ನಿರ್ಮಾಣಕ್ಕೆ ಕೋರ್ಟ್ ಅನುಮತಿ !

ಮುಸಲ್ಮಾನರ ದೂರಿನ ನಂತರ ಜಿಲ್ಲಾಧಿಕಾರಿಗಳು ನಿರ್ಮಾಣ ಕಾಮಗಾರಿಯನ್ನು ಸ್ಥಗಿತಗೊಳಿಸಿದ್ದರು

ಸಂಭಲ (ಉತ್ತರ ಪ್ರದೇಶ) – ಅಲಹಾಬಾದ ಉಚ್ಚ ನ್ಯಾಯಾಲಯ ಕಾಂಗ್ರೆಸ್ ನಾಯಕ ಆಚಾರ್ಯ ಪ್ರಮೋದ್ ಕೃಷ್ಣಮ್ ಅವರಿಗೆ ಸಂಭಲ್‌ನಲ್ಲಿರುವ ಅವರ ಖಾಸಗಿ ಭೂಮಿಯಲ್ಲಿ ಶ್ರೀ ಕಲ್ಕಿ ದೇವಸ್ಥಾನವನ್ನು ನಿರ್ಮಾಣ ಮಾಡಲು ಇತ್ತೀಚೆಗೆ ಅನುಮತಿ ನೀಡಿತು. ಉಚ್ಚ ನ್ಯಾಯಾಲಯ ಇಂತಹ ನಿರ್ಮಾಣಗಳಿಂದ ಇತರ ಸಮುದಾಯಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುವುದಿಲ್ಲ ಎಂದು ತಿಳಿಸಿದೆ. ಮುಸ್ಲಿಂ ಮುಖಂಡರೊಬ್ಬರು ಆಕ್ಷೇಪ ವ್ಯಕ್ತಪಡಿಸಿದ ಬಳಿಕ ಸಂಭಲ ಜಿಲ್ಲಾ ದಂಡಾಧಿಕಾರಿಗಳು ದೇವಸ್ಥಾನದ ನಿರ್ಮಾಣವನ್ನು ನಿಲ್ಲಿಸುವಂತೆ ಆದೇಶಿಸಿದ್ದರು. ಈ ಪ್ರದೇಶದಲ್ಲಿ ಧಾರ್ಮಿಕ ಶಾಂತಿ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆಯಾಗಬಹುದು ಎಂದು ಜಿಲ್ಲಾಧಿಕಾರಿಗಳು ದೇವಸ್ಥಾನದ ನಿರ್ಮಾಣಕ್ಕೆ ತಡೆಯಾಜ್ಞೆ ನೀಡಿದ್ದರು.

1. ಆಚಾರ್ಯ ಪ್ರಮೋದ್ ಕೃಷ್ಣಮ್ ಇವರು 2016 ರಲ್ಲಿ, ಸಂಭಲ ಜಿಲ್ಲೆಯ ಅಚೋರಾ ಕಂಬೋ ಗ್ರಾಮದಲ್ಲಿ ಶ್ರೀ ಕಲ್ಕಿ ಧಾಮ ದೇವಸ್ಥಾನವನ್ನು ನಿರ್ಮಿಸಲು ಭೂಮಿಯನ್ನು ಖರೀದಿಸಿದ್ದರು. ಮುಸ್ಲಿಂ ಕಿಸಾನ್ ಯೂನಿಯನ್’ನ ರಾಷ್ಟ್ರೀಯ ಅಧ್ಯಕ್ಷ ಇಮಾಮುರ್ ರೆಹಮಾನ್ ಖಾನ್ ಇವರು, ‘ಈ ಪ್ರದೇಶದಲ್ಲಿ ಮುಸ್ಲಿಮರಿಗೆ ದೇವಾಲಯ ನಿರ್ಮಾಣ ಬೇಡ’ ಎಂದು ಪ್ರತಿಪಾದಿಸುತ್ತಾ, ಆಕ್ಷೇಪ ವ್ಯಕ್ತಪಡಿಸಿದ್ದರು. (ಹಿಂದೂಗಳ ಭೂಮಿಯನ್ನು ಅತಿಕ್ರಮಿಸುವ, ಹಿಂದೂಗಳ ದೇವಸ್ಥಾನಗಳನ್ನು ಧ್ವಂಸ ಮಾಡುವ ಮತಾಂಧರಿಗೆ ಹಿಂದೂಗಳು ತಮ್ಮ ಭೂಮಿಯಲ್ಲಿ ದೇವಾಲಯಗಳನ್ನು ನಿರ್ಮಿಸಿದಾಗ ಅಸೂಯೆ ಪಡುತ್ತಾರೆ ಎಂದು ಗಮನಿಸಿ ! – ಸಂಪಾದಕರು) ಅವರು ಈ ಪ್ರಕರಣದಲ್ಲಿ ಜಿಲ್ಲಾ ಮ್ಯಾಜಿಸ್ಟ್ರೇಟ್‌ಗೆ ದೂರು ಸಲ್ಲಿಸಿದ್ದರು.

2. ಜಿಲ್ಲಾ ದಂಡಾಧಿಕಾರಿಗಳ ಆದೇಶದ ವಿರುದ್ಧ ಆಚಾರ್ಯ ಪ್ರಮೋದ್ ಕೃಷ್ಣಮ್ ಇವರು ಅಲಹಾಬಾದ್ ಉಚ್ಚ ನ್ಯಾಯಾಲಯಕ್ಕೆ ಮೊರೆ ಹೋಗಿದ್ದರು. ಅಲಹಾಬಾದ್ ಉಚ್ಚ ನ್ಯಾಯಾಲಯವು ಈ ಪ್ರಕರಣದಲ್ಲಿ ತೀರ್ಪು ನೀಡುವಾಗ, ಖಾಸಗಿ ಭೂಮಿಯಲ್ಲಿ ಭಾರತದ ಸಂವಿಧಾನದ 25 ಮತ್ತು 26 ನೇ ವಿಧಿಗಳ ಅಡಿಯಲ್ಲಿ ದೇವಾಲಯವನ್ನು ನಿರ್ಮಿಸುವ ಹಕ್ಕನ್ನು ರಕ್ಷಿಸಲಾಗಿದೆ ಮತ್ತು “ಈ ನಿರ್ಮಾಣವು ಕಾನೂನು ಮತ್ತು ಸುವ್ಯವಸ್ಥೆಗೆ ಅಡ್ಡಿ ಉಂಟುಮಾಡಿದೆ” ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಹೇಳಿದೆ.

ಸಂಪಾದಕರ ನಿಲುವು

ಮುಸ್ಲಿಮರ ನೈಜ ಮನಃಸ್ಥಿತಿ ಈಗಲಾದರೂ ಕಾಂಗ್ರೆಸ್ಸಿಗರಿಗೆ ತಿಳಿಯುವುದೇ?