ದತ್ತಿ ಇಲಾಖೆಯ ಅಧಿನಿಯಮದ ಪ್ರಕಾರ ದೇವಸ್ಥಾನದ ಪರಿಸರದಲ್ಲಿ ಕೇವಲ ಹಿಂದುಗಳಿಗೆ ವ್ಯಾಪಾರದ ಅವಕಾಶ ನೀಡಬೇಕು !

ರಾಜ್ಯದ ಹಿಂದೂ ಜಾತ್ರೆ ವ್ಯಾಪಾರ ಸಂಘದಿಂದ ದತ್ತಿ ಇಲಾಖೆಯ ಬಳಿ ಬೇಡಿಕೆ !

ಸೌಜನ್ಯ: ಏಷ್ಯಾನೆಟ್ ಸುವರ್ಣ ನ್ಯೂಸ್

ಬೆಂಗಳೂರು – ರಾಜ್ಯದಲ್ಲಿನ ‘ಹಿಂದೂ ಧಾರ್ಮಿಕ ಸಂಸ್ಥೆ ಮತ್ತು ದತ್ತಿ ಇಲಾಖೆಯ ೧೯೯೭-೨೦೦೧’ ಅಧಿನಿಯಮದ ಪ್ರಕಾರ ದೇವಸ್ಥಾನ ಪರಿಸರದಲ್ಲಿ ಕೇವಲ ಹಿಂದೂಗಳಿಗೆ ವ್ಯಾಪಾರ ನಡೆಸುವ ಅವಕಾಶ ನೀಡಬೇಕೆಂದು ರಾಜ್ಯ ಹಿಂದು ಜಾತ್ರೆ ವ್ಯಾಪಾರಿ ಸಂಘದಿಂದ ಬೇಡಿಕೆ ಸಲ್ಲಿಸಲಾಗಿದೆ. ಈ ಸಂಘವು ಹರಾಜಿನ ಮೂಲಕ ಅಂಗಡಿ ಹಾಕಲು ಅನುಮತಿ ನೀಡುವುದರ ಬಗ್ಗೆ ಕೂಡ ಒತ್ತಾಯಿಸಿದೆ.

(ಸೌಜನ್ಯ : ಪಬ್ಲಿಕ್ ಟಿವಿ)

ಸಂಘದ ಗೌರವಾನ್ವಿತ ಅಧ್ಯಕ್ಷ ಮಹೇಶ ದಾಸ ಇವರು ಸುದ್ಧಿಗೋಷ್ಠಿಯಲ್ಲಿ, ಹಿಂದೂ ಧಾರ್ಮಿಕ ಸಂಸ್ಥೆ ಮತ್ತು ದತ್ತಿ ಇಲಾಖೆಯ ಅಧಿನಿಯಮದ ಪ್ರಕಾರ ಹಿಂದುಗಳ ದೇವಸ್ಥಾನದ ಪರಿಸರದಲ್ಲಿ ವ್ಯಾಪಾರ ನಡೆಸುವ ಅಧಿಕಾರ ಹಿಂದುಗಳಿಗೆ ಮಾತ್ರ ಇದೆ. ಇತರ ಧರ್ಮಿಯರಿಗೆ ವ್ಯಾಪಾರ ಮಾಡುವುದಿದ್ದರೆ ಅವರು ದತ್ತಿ ಸಂಸ್ಥೆಯ ಅಡಿಯಲ್ಲಿ ಮಸೀದಿ ಹಾಗೂ ಚರ್ಚಗಳ ಸ್ಥಳಗಳಲ್ಲಿ ಕೂಡ ವ್ಯಾಪಾರದ ಪಟ್ಟಿಯಲ್ಲಿ ಸಮಾವೇಶಗೊಳಿಸಿದರೆ ನಮ್ಮ ಯಾವುದೇ ತಕರಾರು ಇಲ್ಲ. ಹಾಗೂ ವಾರದ ಸಂತೆಯ ಬಗ್ಗೆ ಕೂಡ ಯಾವುದೇ ಆಕ್ಷೇಪ ನಾವು ವ್ಯಕ್ತಪಡಿಸುವುದಿಲ್ಲ ಎಂದು ಹೇಳಿದರು.

ಸಂಪಾದಕೀಯ ನಿಲುವು

ಮೂಲತಃ ಇಂತಹ ಬೇಡಿಕೆ ಏಕೆ ಮಾಡಬೇಕಾಗುತ್ತದೆ ! ಹಿಂದುಗಳ ದೇವಸ್ಥಾನದ ಪರಿಸರದಲ್ಲಿ ಕೇವಲ ಹಿಂದೂ ವ್ಯಾಪಾರಿಗಳೇ ವ್ಯಾಪಾರ ಮಾಡುವುದು ಅಪೇಕ್ಷಿತವಾಗಿದೆ. ಇತರ ಧರ್ಮದವರು ಇಲ್ಲಿ ವ್ಯಾಪಾರ ಮಾಡಿದರೆ ಅದರಲ್ಲಿ ಎಷ್ಟು ಪಾವಿತ್ರತೆ ಇರುವುದು, ಸಧ್ಯ ‘ಉಗುಳು ಜಿಹಾದ’ನ ಅಪಾಯ ನೋಡುತ್ತಿದ್ದರೆ ಮಹತ್ವದ ಅಂಶವಾಗಿದೆ !