ದೇವಸ್ಥಾನದ ಸರಕಾರೀಕರಣದ ದುಷ್ಪರಿಣಾಮಗಳನ್ನು ಅರಿಯಿರಿ !
ತುಳಜಾಪುರ (ಜಿಲ್ಲೆ ಧಾರಶಿವ) – ಶ್ರೀ ತುಳಜಾಭವಾನಿ ದೇವಿಯ ಆಭರಣಗಳು ಕಳ್ಳತನವಾಗಿರುವ ಪ್ರಕರಣದಲ್ಲಿ ಜಿಲ್ಲಾಧಿಕಾರಿಗಳು ತಮ್ಮ ನಿಲುವನ್ನು ಅಧ್ಯಕ್ಷರು ಎನ್ನುವ ಸಂಬಂಧದಿಂದ ಸ್ಪಷ್ಟ ಪಡಿಸಬೇಕು. ಹಾಗೆಯೇ ಜನತೆ ಮತ್ತು ಭಕ್ತರ ನಡುವೆ ಇರುವ ಈ ಗೊಂದಲವನ್ನು ದೂರಗೊಳಿಸಬೇಕು ಎಂದು ಪೂಜಾರಿ ಮಂಡಲದ ಮಾಜಿ ಅಧ್ಯಕ್ಷ ಶ್ರೀ. ಕಿಶೋರ ಗಂಗಣೆ ಹಾಗೂ ವಕೀಲ ಶಿರೀಶ ಕುಲಕರ್ಣಿ ಇವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುವಾಗ ಆಗ್ರಹಿಸಿದ್ದಾರೆ. (ಇಂತಹ ಬೇಡಿಕೆ ಏಕೆ ಮಾಡಬೇಕಾಗುತ್ತದೆ? ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಆಡಳಿತವು ತನ್ನ ನಿಲುವನ್ನು ಸ್ಪಷ್ಟಪಡಿಸಬೇಕು ! – ಸಂಪಾದಕರು)
1. ಶ್ರೀ ತುಳಜಾಭವಾನಿಯ ಐತಿಹಾಸಿಕ ಆಭರಣಗಳು ಮತ್ತು ವಸ್ತುಗಳ ಪ್ರಸ್ತುತ ಮರುಎಣಿಕೆ ಮಾಡಲಾಗುತ್ತಿದೆ. ಈ ಎಣಿಕೆಯಲ್ಲಿ ಕೆಲವು ಐತಿಹಾಸಿಕ ಆಭರಣಗಳು ನಾಪತ್ತೆಯಾಗಿದ್ದು, ಕೆಲವು ಆಭರಣಗಳ ತೂಕ ಹೆಚ್ಚಾಗಿರುವುದು ಕಂಡುಬಂದಿದೆ. ಇದರಿಂದ ಭಕ್ತರಲ್ಲಿ ಅಸಮಾಧಾನ ಉಂಟಾಗಿದೆ.
2. ವಾಸ್ತವವಾಗಿ ಅಂದಿನ ಧಾರ್ಮಿಕ ವ್ಯವಸ್ಥಾಪಕರು 2002ರಲ್ಲಿ ನಿಧನರಾದ ಬಳಿಕ ಮುಂದಿನ ಧಾರ್ಮಿಕ ವ್ಯವಸ್ಥಾಪಕರು ಸರಿಯಾಗಿ ಕರ್ತವ್ಯ ನಿರ್ವಹಿಸದ ಕಾರಣ ಆಭರಣ ನಾಪತ್ತೆಯಾಗಿರುವ ಪ್ರಕರಣದಲ್ಲಿ ಶಂಕೆ ವ್ಯಕ್ತವಾಗಿದೆ. ಪ್ರಸ್ತುತ ಸ್ಥಿತಿಯಲ್ಲಿ, ವಸ್ತುಗಳು (ವಸ್ತುಗಳು), ಹಾಗೆಯೇ ಐತಿಹಾಸಿಕ ಆಭರಣಗಳನ್ನು ಎಣಿಸಲಾಗಿದೆ. ಮೊದಲ ಎಣಿಕೆಯಲ್ಲಿ ಕೆಲವು ಆಭರಣಗಳು ನಾಪತ್ತೆಯಾಗಿರುವುದು ಕಂಡುಬಂದಿದ್ದರಿಂದ, ಅವುಗಳನ್ನು ಮರು ಎಣಿಕೆ ಮಾಡಲಾಗಿದೆ.
3. ಈ ಎಣಿಕೆಯಲ್ಲಿ ನಿಖರವಾಗಿ ಏನು ಕಂಡುಬಂದಿದೆ ?, ಮತ್ತು ನಿಖರವಾಗಿ ಯಾವ ಆಭರಣಗಳು ಕಾಣೆಯಾಗಿವೆ ? ಆ ಆಭರಣಗಳ ಹೆಸರನ್ನು ಜಿಲ್ಲಾಧಿಕಾರಿಗಳು ಅಧ್ಯಕ್ಷರಾಗಿ ಘೋಷಿಸಬೇಕು. ಈ ಚಿನ್ನಾಭರಣಗಳು ನಾಪತ್ತೆಯಾದ ಪ್ರಕರಣದಲ್ಲಿ ತಪ್ಪಿತಸ್ಥರ ಮೇಲೆ ಯಾವ ಕ್ರಮ ಜರುಗಿಸಲಾಗುವುದು ? ಎಂದು ಸಾರ್ವಜನಿಕರ ಮುಂದೆ ಬರುವುದು ಅವಶ್ಯಕವಾಗಿದೆ.
4. ಚಿನ್ನಾಭರಣ ಕಾಣೆಯಾದ ಪ್ರಕರಣದಲ್ಲಿ ಜಿಲ್ಲಾಧಿಕಾರಿಗಳು ಹಿರಿಯರ ವಿಭಾಗೀಯ ಆಯುಕ್ತರ ಸಮಿತಿ ರಚಿಸಲು ಮನವಿ ಮಾಡಬೇಕು. ಈ ಸಮಿತಿಯು ನಿವೃತ್ತ ಹೈಕೋರ್ಟ್ ನ್ಯಾಯಾಧೀಶರು, ಮುಜರಾಯಿ ಆಯುಕ್ತರಂತಹ ಉನ್ನತ ಶ್ರೇಣಿಯ ಸದಸ್ಯರನ್ನು ಒಳಗೊಂಡಿರಬೇಕು. ಒಟ್ಟಾರೆ ಈ ಸಮಿತಿಯ ಮಾಧ್ಯಮದಿಂದ ನಿಷ್ಪಕ್ಷ ತನಿಖೆ ನಡೆಸುವುದು ಎಂದು ಹೇಳಿದ್ದಾರೆ.
ಸಂಪಾದಕೀಯ ನಿಲುವು‘ದೇವಸ್ಥಾನಗಳಲ್ಲಿ ಭ್ರಷ್ಟಾಚಾರ ನಡೆಯುತ್ತದೆ’, ‘ಅವುಗಳ ನಿರ್ವಹಣೆ ಚೆನ್ನಾಗಿಲ್ಲ’ ಮುಂತಾದ ಕಾರಣಗಳನ್ನು ಮುಂದಿಟ್ಟುಕೊಂಡು ದೇವಸ್ಥಾನಗಳನ್ನು ಸರಕಾರೀಕರಣಗೊಳಿಸಲಾಗುತ್ತದೆ; ಆದರೆ ಕಾಲಕ್ರಮೇಣ ಸರಕಾರೀಕರಣಗೊಂಡಿರುವ ದೇವಸ್ಥಾನಗಳಲ್ಲಿ ಭ್ರಷ್ಟಾಚಾರ ನಡೆದಿರುವುದು ಬಯಲಾದಾಗ ಮಾತ್ರ ಅದನ್ನು ಗುಟ್ಟಾಗಿ ಇಡಲಾಗುತ್ತದೆ ! ಇದು ಭಕ್ತರಿಗೆ ಮಾಡುವ ಘೋರ ವಂಚನೆಯಾಗಿದೆ. ಇದನ್ನು ತಡೆಯಲು ದೇವಸ್ಥಾನಗಳನ್ನು ಭಕ್ತರಿಗೆ ಒಪ್ಪಿಸಿರಿ ! |