ನೂಹ (ಹರಿಯಾಣ) ಇಲ್ಲಿ ವಿಶ್ವ ಹಿಂದೂ ಪರಿಷತ್ತಿನ ನಾಯಕರು ಯಾತ್ರೆ ನಡೆಸದೆ ದೇವಸ್ಥಾನದಲ್ಲಿ ಜಲಾಭಿಷೇಕ ನಡೆಸಿದರು !

ನೂಹ (ಹರಿಯಾಣ) – ವಿಶ್ವ ಹಿಂದೂ ಪರಿಷತ್ತಿನಿಂದ ಆಗಸ್ಟ್ ೨೮ ರಂದು ಬ್ರಜಮಂಡಲ ಜಲಾಭಿಷೇಕ ಯಾತ್ರೆ ನಡೆಸುವುದಾಗಿ ಘೋಷಿಸಿದ ನಂತರ ಪೊಲೀಸರು ಅದಕ್ಕೆ ಅನುಮತಿ ನಿರಾಕರಿಸಿದ್ದರು. ಆದರೂ ಕೂಡ ವಿಶ್ವ ಹಿಂದೂ ಪರಿಷತ್ತಿನಿಂದ ಯಾತ್ರೆ ನಡೆಸುವುದಾಗಿ ಘೋಷಿಸಿತ್ತು; ಆದರೆ ಪ್ರತ್ಯಕ್ಷದಲ್ಲಿ ಅಲ್ಲಿ ಯಾತ್ರೆ ನಡೆಸದೆ ಭಕ್ತರಿಂದ ನಲ್ಹಡ ದೇವಸ್ಥಾನದಲ್ಲಿ ಜಲಾಭಿಷೇಕ ಮಾಡಲಾಯಿತು. ವಿಶ್ವ ಹಿಂದೂ ಪರಿಷತ್ತಿನ ನಾಯಕರಿಗೆ ಮತ್ತು ಕಾರ್ಯಕರ್ತರಿಗೆ ದೇವಸ್ಥಾನಕ್ಕೆ ಹೋಗಿ ಜಲಾಭಿಷೇಕ ಮಾಡಲು ಅನುಮತಿ ನೀಡಿದ್ದರು. ಈ ಸಮಯದಲ್ಲಿ ಪೊಲೀಸರು ಭಕ್ತರ ಗುರುತಿನ ಚೀಟಿ ಪರಿಶೀಲಿಸುತ್ತಿದ್ದರು. ಇದರ ಹಿನ್ನೆಲೆಯಲ್ಲಿ ಸಂಪೂರ್ಣ ನೂಹ ಜಿಲ್ಲೆಯಲ್ಲಿ ಹೆಚ್ಚುವರಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಪೊಲೀಸರು ಯಾತ್ರೆಯ ಹಿನ್ನೆಲೆಯಲ್ಲಿ ಭಾಜಪದ ನಾಯಕ ಮೋತಿರಾಮ ಶರ್ಮಾ ಇವರನ್ನು ವಶಕ್ಕೆ ಪಡೆದಿದ್ದರು. ಶರ್ಮ ಇವರು ಯಾತ್ರೆಯ ಆಯೋಜಕ ಸಮಿತಿಯ ಸದಸ್ಯರಾಗಿದ್ದರು. ವಿಶ್ವ ಹಿಂದೂ ಪರಿಷತ್ತಿನ ಕಾರ್ಯಕಾರಿ ಅಧ್ಯಕ್ಷ ಆಲೋಕ ಕುಮಾರ, ಸ್ವಾಮಿ ಧರ್ಮದೇವ ಮುಂತಾದವರು ನಲ್ಹಡ ದೇವಸ್ಥಾನಕ್ಕೆ ಹೋಗಿ ಜಲಾಭಿಷೇಕ ನಡೆಸಿದರು. ಈ ದೇವಸ್ಥಾನದಲ್ಲಿ ಶ್ರಾವಣ ಸೋಮವಾರ ಜಲಾಭಿಷೇಕಕ್ಕಾಗಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ.

ಮನೆಯಲ್ಲಿಯೇ ಇರಿ, ಹೊರಗೆ ಬರಬೇಡಿ ! – ಮುಸಲ್ಮಾನರಿಗೆ ಅವರ ನಾಯಕರು ನೀಡಿರುವ ಕರೆ !

೨೮ ರಂದು ಯಾತ್ರೆಯ ಹಿನ್ನೆಲೆಯಲ್ಲಿ ಯಾರೂ ಮನೆಯಿಂದ ಹೊರ ಬರಬೇಡಿ ಎಂದು ಮುಸ್ಲಿಂ ಧಾರ್ಮಿಕ ನಾಯಕರು ಮಸೀದಿಯಿಂದ ಕರೆ ನೀಡಿದರು. ಆದ್ದರಿಂದ ಹೆಚ್ಚಿನ ಮುಸಲ್ಮಾನರು ತಮ್ಮ ಅಂಗಡಿಗಳನ್ನು ಮುಚ್ಚಿದ್ದರು. ಇನ್ನೊಂದು ಕಡೆಗೆ ಹಿಂದೂ ಅಂಗಡಿಯವರು ಕೂಡ ಅವರ ಅಂಗಡಿಗಳನ್ನು ಮುಚ್ಚಿದ್ದರು. ಮುಸಲ್ಮಾನ ಬಹುಸಂಖ್ಯಾತ ಗ್ರಾಮದಲ್ಲಿನ ಹಿಂದುಗಳಿಗೆ ಕೂಡ ಮನೆಯ ಹೊರಗೆ ಬರದಿರಲು ಕರೆ ನೀಡಲಾಗಿತ್ತು.

ನೂಹದಲ್ಲಿನ ಹಿಂಸಾಚಾರದ ಬಗ್ಗೆ ಹರಿಯಾಣದ ವಿಧಾನಸಭೆಯಲ್ಲಿ ರಂಪಾರಾದ್ಧಾಂತ !

ನೂಹದಲ್ಲಿ ಜುಲೈ ೩೧ ರಂದು ಬ್ರಜಮಂಡಲ ಜಲಾಭಿಷೇಕ ಯಾತ್ರೆಯ ಮೇಲೆ ಮತಾಂಧ ಮುಸಲ್ಮಾನರಿಂದ ನಡೆದಿರುವ ದಾಳಿಯ ನಂತರ ಭುಗಿಲೆದ್ದ ಗಲಭೆಯ ಪ್ರಕರಣದಲ್ಲಿ ಹರಿಯಾಣದ ವಿಧಾನಸಭೆಯಲ್ಲಿ ವಿರೋಧಿ ಪಕ್ಷದಿಂದ ಚರ್ಚೆಗೆ ಓದ್ತಾಯಿಸಲಾಗಿದೆ. ಇದರಿಂದ ನಡೆದಿರುವ ರಂಪಾರಾದ್ಧಾಂತದಿಂದ ೩೦ ನಿಮಿಷಕ್ಕಾಗಿ ಕಾರ್ಯಕಲಾಪ ಸ್ಥಗಿತಗೊಳಿಸಲಾಗಿತ್ತು. ಕಾಂಗ್ರೆಸ್ಸಿನಿಂದ ಈ ಸಮಯದಲ್ಲಿ ಹಿಂಸಾಚಾರದ ವಿಚಾರಣೆ ಉಚ್ಚ ನ್ಯಾಯಾಲಯದ ನ್ಯಾಯಾಧೀಶರಿಂದ ನಡೆಸಲು ಒತ್ತಾಯಿಸಿದ್ದಾರೆ.