ಕರ್ಣಾವತಿ (ಗುಜರಾತ್)ನಲ್ಲಿ ಶ್ರೀ ಕಾಲಭೈರವ ದೇಗುಲದಲ್ಲಿ ಧ್ವಂಸ !

ಕರ್ಣಾವತಿ (ಗುಜರಾತ್) – ಇಲ್ಲಿನ ದೂಧೇಶ್ವರ ಸ್ಮಶಾನದ ಹತ್ತಿರವಿರುವ ಶ್ರೀ ಕಾಲಭೈರವ ದೇವಸ್ಥಾನದಲ್ಲಿ ಹಲವಾರು ದೇವತೆಗಳ ವಿಗ್ರಹಗಳನ್ನು ಧ್ವಂಸಗೊಳಿಸಲಾಗಿದೆ. ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಬರಮತಿ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳ ಸಹಾಯದಿಂದ ಕಿಡಿಗೇಡಿಗಳ ವಿರುದ್ಧ ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. (ಹಿಂದೂ ಬಾಹುಸಂಖ್ಯಾತವಿರುವ ಪ್ರದೇಶದಲ್ಲಿ ಹಿಂದೂ ದೇವಸ್ಥಾನವನ್ನು ಧ್ವಂಸಗೊಳಿಸಿರುವುದು ಹಿಂದೂಗಳಿಗೆ ಲಜ್ಜಾಸ್ಪದ ! – ಸಂಪಾದಕರು) ಈ ಘಟನೆಯ ಬಳಿಕ ಆ ಪ್ರದೇಶವು ಬಿಗುವಿನಿಂದ ಕೂಡಿದೆ.

ಈ ಘಟನೆಯಲ್ಲಿ ಕಾಲಭೈರವನ ವಿಗ್ರಹದ ಕಣ್ಣು ತೆಗೆಯಲಾಗಿದ್ದು, ಶ್ರೀ ಹನುಮಂತನ ಗದೆಯನ್ನು ಒಡೆಯಲಾಗಿದೆ, ಶಂಕರ ದೇವರ ವಿಗ್ರಹವನ್ನು ವಿರೂಪಗೊಳಿಸಲಾಗಿದೆ. ವಿಗ್ರಹಗಳನ್ನು ಧ್ವಂಸ ಮಾಡುವಾಗ ಅಪರಿಚಿತ ವ್ಯಕ್ತಿಗಳು ತಮ್ಮ ಬಟ್ಟೆಗಳನ್ನು ಕಳಚಿ ಕುಣಿಯುತ್ತಿರುವುದು ವಿಡಿಯೋದಲ್ಲಿ ಕಂಡುಬಂದಿದೆ. ದೇವಸ್ಥಾನದ ಗುಮ್ಮಟವನ್ನೂ ಹತ್ತಿದ್ದಾರೆ. ಅಲ್ಲದೆ, ಬಾಬಾ ಕಾಲಭೈರವನ ವಾಹನವಿರುವ ಮೂರ್ತಿಯನ್ನು ಎತ್ತಿ ಬಿಸಾಡಿದ್ದಾರೆ. (ಹಿಂದೂ ಧರ್ಮ ಮತ್ತು ಹಿಂದೂ ದೇವತೆಗಳ ಮೇಲಿನ ದಾಳಿಯನ್ನು ತಡೆಯಲು ಹಿಂದೂಗಳು ಯಾವಾಗ ಸಂಘಟಿತರಾಗುತ್ತಾರೆ ? – ಸಂಪಾದಕರು)

ಸಂಪಾದಕೀಯ ನಿಲುವು

ಭಾರತವು ಹಿಂದೂ ಬಾಹುಸಂಖ್ಯಾತವಿರುವ ದೇಶವಾಗಿದ್ದರೂ, ಇಲ್ಲಿ ಹಿಂದೂ ದೇವಸ್ಥಾನಗಳು ಏಕೆ ಅಸುರಕ್ಷಿತವಾಗಿವೆ ?