ಸೂರ್ಯಪೇಟ (ತೆಲಂಗಾಣ) ದಲ್ಲಿರುವ ಬಾಲ ಉಗ್ರ ನರಸಿಂಹ ಸ್ವಾಮಿ ದೇವಸ್ಥಾನದ ಅವ್ಯವಹಾರದ ಕುರಿತು ಮುಸಲ್ಮಾನನ ದೂರು !

  • ಧಾರ್ಮಿಕ ದತ್ತಿ ಇಲಾಖೆಯಿಂದ ದೇವಸ್ಥಾನಕ್ಕೆ ನೋಟಿಸ್ ಜಾರಿಗೊಳಿಸಿ ದೇವಸ್ಥಾನವನ್ನು ಸ್ವಾಧೀನ ಪಡಿಸಿಕೊಳ್ಳುವುದಾಗಿ ಎಚ್ಚರಿಕೆ !

  • ಹಿಂದೂ ಜನಜಾಗೃತಿ ಸಮಿತಿಯ ಮುಂದಾಳತ್ವದಲ್ಲಿ ಹಿಂದುತ್ವನಿಷ್ಠ ಸಂಘಟನೆಗಳಿಂದ ನೊಟೀಸಿನ ವಿರುದ್ಧ ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರಿಗೆ ಮನವಿ

ಸೂರ್ಯಪೇಟ (ತೆಲಂಗಾಣ) – ಸೂರ್ಯಪೇಟ ಜಿಲ್ಲೆಯ ಇರಾವರಮ ಗ್ರಾಮದಲ್ಲಿ ಬಾಲ ಉಗ್ರ ನರಸಿಂಹ ಸ್ವಾಮಿಯ ಪ್ರಸಿದ್ಧ ದೇವಸ್ಥಾನವಿದೆ. ಪ್ರತಿ ಶುಕ್ರವಾರ ಮತ್ತು ಶನಿವಾರ ಈ ದೇವಸ್ಥಾನಕ್ಕೆ 1 ಲಕ್ಷಕ್ಕೂ ಹೆಚ್ಚು ಭಕ್ತರು ಭೇಟಿ ನೀಡುತ್ತಾರೆ. ಇದರಿಂದ ದೇವಸ್ಥಾನದ ಆದಾಯ ಹೆಚ್ಚಿದೆ. ಇದರಿಂದ ಕೆಲ ದಿನಗಳ ಹಿಂದೆ ಗ್ರಾಮದ ಸೂರೆಪಲ್ಲಿ ಹುಸೇನ್ ಎಂಬವರು ಈ ದೇವಸ್ಥಾನದ ನಿರ್ವಹಣೆಯಲ್ಲಿ ಅವ್ಯವಹಾರ ನಡೆದಿದೆ ಎಂದು ದತ್ತಿ ಇಲಾಖೆಗೆ ದೂರು ನೀಡಿದ್ದರು. ಆ ಬಳಿಕ ದತ್ತಿ ಇಲಾಖೆಯು ಆಗಸ್ಟ್ 2 ರಂದು ದೇವಸ್ಥಾನದ ಆಡಳಿತ ಮಂಡಳಿಗೆ ನೋಟಿಸ್ ಕಳುಹಿಸಿ ವಿವರಣೆ ನೀಡುವಂತೆ ಸೂಚಿಸಿತ್ತು. ಒಂದು ವೇಳೆ ವಿವರಣೆ ನೀಡದಿದ್ದರೆ 15 ದಿನಗಳ ನಂತರ ದೇವಸ್ಥಾನವನ್ನು ಸರಕಾರದ ಸ್ವಾಧೀನಕ್ಕೆ ಪಡೆಯಲಾಗುವುದು’ ಎಂದು ಎಚ್ಚರಿಕೆ ನೀಡಿದೆ.

ಈ ಬಗ್ಗೆ ಹಿಂದೂ ಜನಜಾಗೃತಿ ಸಮಿತಿಗೆ ಮಾಹಿತಿ ಸಿಕ್ಕಿದಾಗ ಸಮಿತಿಯು ಹಿಂದುತ್ವನಿಷ್ಠ ಸಂಘಟನೆಗಳನ್ನು ಸಂಘಟಿಸಿ ಆಗಸ್ಟ 17 ರಂದು ದತ್ತಿ ಆಯುಕ್ತರಿಗೆ ಮನವಿ ಸಲ್ಲಿಸಿತ್ತು. ಅದರಲ್ಲಿ ‘ಇಲಾಖೆ ಕಳುಹಿಸಿರುವ ನೋಟಿಸ್ ಕಾನೂನಿಗೆ ವಿರುದ್ಧವಾಗಿದ್ದು, ದತ್ತಿ ಇಲಾಖೆಯು ದೇವಸ್ಥಾನವನ್ನು ಸ್ವಾಧೀನ ಪಡಿಸಿಕೊಳ್ಳಲು ಸಾಧ್ಯವಿಲ್ಲ. ಈ ನೋಟಿಸನ್ನು ಹಿಂದೂಗಳು ವಿರೋಧಿಸುತ್ತಾರೆ’ ಎಂದು ತಿಳಿಸಲಾಗಿತ್ತು.

ಆಗಸ್ಟ್ 18 ರಂದು ಹಿಂದೂ ಜನಜಾಗೃತಿ ಸಮಿತಿ ಮತ್ತು ಇತರ ಹಿಂದುತ್ವನಿಷ್ಠ ಸಂಘಟನೆಗಳ ಕಾರ್ಯಕರ್ತರು ಇರಾವರಮ್ ಗ್ರಾಮಕ್ಕೆ ತೆರಳಿ ದೇವಸ್ಥಾನದ ಅಧ್ಯಕ್ಷ ಜಗನ್ನಾಥ ಅವರನ್ನು ಭೇಟಿ ಮಾಡಿ ಯಾವುದೇ ಸಂದರ್ಭದಲ್ಲೂ ದೇವಸ್ಥಾನವನ್ನು ದತ್ತಿ ಇಲಾಖೆಯ ಸ್ವಾಧೀನಕ್ಕೆ ನೀಡಬಾರದು ಎಂದು ಹೇಳಿ, ನಿಮ್ಮೊಂದಿಗೆ ನಾವಿದ್ದೇವೆ,’’ಎಂದು ಭರವಸೆ ನೀಡಿದರು. ಈ ಸಮಯದಲ್ಲಿ ದೇವಾಲಯದ ಟ್ರಸ್ಟ್ ಅನ್ನು ಸ್ಥಾಪಿಸಲಾಯಿತು. ಟ್ರಸ್ಟ್ ದತ್ತಿ ಇಲಾಖೆಗೆ ದೇವಸ್ಥಾನದ ವಿಚಾರದಲ್ಲಿ ಯಾವುದೇ ಹಸ್ತಕ್ಷೇಪ ಮಾಡಬಾರದು’ ಎಂದು ತಿಳಿಸಿದೆ.

ಸಂಪಾದಕೀಯ ನಿಲುವು

ಎಷ್ಟು ಹಿಂದೂಗಳು ಮಸೀದಿ ಮತ್ತು ಚರ್ಚ್ ಗಳಲ್ಲಿನ ಅವ್ಯವಸ್ಥೆಯ ಬಗ್ಗೆ ದತ್ತಿ ಇಲಾಖೆಗೆ ದೂರು ನೀಡುತ್ತಾರೆ? ಹಿಂದೂಗಳು ಈಗ ಈ ದೃಷ್ಟಿಯಿಂದ ಪ್ರಯತ್ನಿಸಬೇಕು ಎಂದು ಯಾರಿಗಾದರೂ ಅನಿಸಿದರೆ, ಆಶ್ಚರ್ಯಪಡಬಾರದು !