ತಾಯಪೆಯಿ (ತೈವಾನ್) – ತೈವಾನ್‌ನ ರಾಜಧಾನಿ ತಾಯಪೆಯಿಯಲ್ಲಿ ಕಳೆದ ವಾರ ಹಿಂದು ದೇವಸ್ಥಾನವನ್ನು ಉದ್ಘಾಟಿಸಲಾಯಿತು. ಈ ದೇವಸ್ಥಾನದಲ್ಲಿ ಭಗವಾನ ಶ್ರೀರಾಮ ಮತ್ತು ಮಹಾದೇವ ಇವರ ವಿಗ್ರಹಗಳನ್ನು ಸ್ಥಾಪಿಸಲಾಯಿತು. ಈ ದೇವಸ್ಥಾನಕ್ಕೆ ‘ಸಬಕಾ ಮಂದಿರ’ ಎಂಬ ಹೆಸರನ್ನು ಇಡಲಾಗಿದೆ. ತೈವಾನ್‌ನಲ್ಲಿ ಈಗಾಗಲೇ ‘ಇಸ್ಕಾನ್ ದೇವಸ್ಥಾನ’ ಮತ್ತು ‘ಶ್ರೀಗಣೇಶ ದೇವಸ್ಥಾನ’ಗಳು ಇವೆ. ಈ ಎರಡೂ ದೇವಸ್ಥಾನಗಳು ಪ್ರಸಿದ್ಧವಾಗಿವೆ.
(ಸೌಜನ್ಯ : Oneindia News)