ನಾವು ಜ್ಞಾನವಾಪಿಯ ಒಂದು ಇಂಚು ಭೂಮಿಯನ್ನೂ ಕೊಡುವುದಿಲ್ಲ ! – ಪೂ. (ನ್ಯಾಯವಾದಿ) ಹರಿಶಂಕರ ಜೈನ ಮತ್ತು ನ್ಯಾಯವಾದಿ ವಿಷ್ಣು ಶಂಕರ ಜೈನ

ಪ್ರಖರ ಹಿಂದುತ್ವನಿಷ್ಠ ನ್ಯಾಯವಾದಿ ತಂದೆ-ಮಗನ ನಿರ್ಧಾರ !

ನವ ದೆಹಲಿ – ನಾನು ಸ್ಪಷ್ಟವಾಗಿ ಹೇಳಲು ಇಚ್ಚಿಸುವುದೇನೆಂದರೆ, ಸನಾತನ ಧರ್ಮೀಯರ ಕಾಶಿಯಲ್ಲಿನ ಭೋಲೇನಾಥನ ಒಂದು ಇಂಚು ಭೂಮಿಯನ್ನೂ ನಾವು ಕೊಡುವುದಿಲ್ಲ. ಮುಸಲ್ಮಾನ ಸಮಾಜವು (ಹಿಂದೂಗಳ ಬಳಿ) ಕ್ಷಮೆ ಕೇಳಿ ಅನಧೀಕೃತ ನಿಯಂತ್ರಣವನ್ನು ತೆರವುಗೊಳಿಸಬೇಕು, ಎಂಬ ನೇರ ಹೇಳಿಕೆಯನ್ನು ಪೂ. (ನ್ಯಾಯವಾದಿ) ಹರಿಶಂಕರ ಜೈನರವರು `ಎಕ್ಸ್’ ಮೂಲಕ ಟ್ವೀಟ್ ಮಾಡಿ ಹೇಳಿದ್ದಾರೆ. ಅವರ ಈ ಹೇಳಿಕೆಯನ್ನು ಬೆಂಬಲಿಸುತ್ತ ಅವರ ಮಗ ಹಾಗೂ ಜ್ಞಾನವಾಪಿ ಪ್ರಕರಣದಲ್ಲಿನ ಹಿಂದೂ ಪಕ್ಷದ ಓರ್ವ ನ್ಯಾಯವಾದಿಯಾದ ವಿಷ್ಣು ಶಂಕರ ಜೈನರವರು ಮಾತನಾಡುತ್ತ `ಜ್ಞಾನವಾಪಿ ಪ್ರಕರಣದಲ್ಲಿ ಪ್ರಕರಣವನ್ನು ನ್ಯಾಯಾಲಯದ ಹೊರಗೆ ಅಳಿಸುವುದು ಕಾನೂನುದೃಷ್ಠಿಯಿಂದ ಸಾಧ್ಯವಿಲ್ಲ’, ಎಂದು ಹೇಳಿದರು. `ವಿಶ್ವ ವೈದಿಕ ಸನಾತನ ಸಂಘ’ದ ಅಂತಾರಾಷ್ಟ್ರೀಯ ಅಧ್ಯಕ್ಷರಾದ ಜಿತೇಂದ್ರಸಿಂಹ ಬಿಸೇನರವರು ಜ್ಞಾನವಾಪಿ ಪ್ರಕರಣದಲ್ಲಿನ ಮುಸಲ್ಮಾನ ಪಕ್ಷದ ಪ್ರತಿನಿಧಿತ್ವ ಮಾಡುತ್ತಿರುವ `ಅಂಜುಮನ ಇಂತೇಜಾಮಿಯಾ ಮಶೀದ ಕಮಿಟಿ’ಗೆ ಪತ್ರದ ಮೂಲಕ ಜ್ಞಾನವಾಪಿಯ ಪ್ರಕರಣವನ್ನು ನ್ಯಾಯಾಲಯದ ಹೊರಗೆ ಮುಗಿಸಲು ಕೆರೆ ನೀಡಿದ ನಂತರ ನ್ಯಾಯವಾದಿ ವಿಷ್ಣು ಶಂಕರ ಜೈನರವರು ತಮ್ಮ ಭೂಮಿಕೆಯನ್ನು ಮಂಡಿಸಿದರು.

(ಸೌಜನ್ಯ : Republic World)

ನ್ಯಾಯವಾದಿ ವಿಷ್ಣು ಶಂಕರ ಜೈನರವರು ಮಾತನಾಡುತ್ತ, ನಮಗೆ ಈ ಪ್ರಕರಣದಲ್ಲಿ ಯಾವುದೇ ಹೊಂದಾಣಿಕೆ ಇಷ್ಟವಿಲ್ಲ. ಹೀಗೆ ಮಾಡುವುದಾದರೆ ಎರಡೂ ಪಕ್ಷಗಳು ತಮ್ಮ ಕೆಲವು ಅಧಿಕಾರಗಳನ್ನು ತ್ಯಜಿಸಬೇಕಾಗುತ್ತದೆ. ಈ ಪ್ರಕರಣದಲ್ಲಿ ನಮಗೆ ಅವರಿಗೆ (ಮುಸಲ್ಮಾನ ಪಕ್ಷಕ್ಕೆ) ಒಂದು ಇಂಚು ಭೂಮಿಯನ್ನೂ ಕೊಡಲಿಕ್ಕಿಲ್ಲ ! ದೇವಸ್ಥಾನವನ್ನು ಮಸೀದಿಯನ್ನಾಗಿ ಬಳಸಲಾಗುತ್ತಿರುವುದರಿಂದ ಮುಸಲ್ಮಾನ ಪಕ್ಷವು ನಮ್ಮಲ್ಲಿ ಕ್ಷಮೆ ಕೇಳಬೇಕು. ಅದುದರಿಂದ ಇಲ್ಲಿ ಹೊಂದಾಣಿಕೆಯ ಪ್ರಶ್ನೆಯೇ ಉದ್ಭವಿಸುವುದಿಲ್ಲ, ಎಂದು ಹೇಳಿದರು.

ಸದ್ಯ ವಜೂಖಾನಾ (ನಮಾಜು ಪಠಣದ ಮೊದಲು ಕೈ ಕಾಲು ತೊಳೆಯಲು ಇರುವ ಸ್ಥಳ) ಸಹಿತ ಜ್ಞಾನವ್ಯಾಪಿಯ ಪರಿಸರದ ವೈಜ್ಞಾನಿಕ ಸಮೀಕ್ಷೆಯನ್ನು ನಡೆಸಲಾಗುತ್ತಿದೆ. ಭಾರತೀಯ ಪುರಾತತ್ತ್ವ ವಿಭಾಗಕ್ಕೆ ಈ ಸಂದರ್ಭದಲ್ಲಿನ ಎಲ್ಲ ಅಧ್ಯಯನವನ್ನು ವಾರಾಣಸಿ ಜಿಲ್ಲಾ ನ್ಯಾಯಾಲಯದ ಎದುರು ಸಪ್ಟೆಂಬರ್ ೨ ರಂದು ಮಂಡಿಸಬೇಕಿದೆ. ಆ ನಂತರ ಈ ಪ್ರಕರಣದ ಮುಂದಿನ ಆಲಿಕೆ ಆರಂಭವಾಗುವುದು.