Rapist Encountered : 5 ವರ್ಷದ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಕೊಲೆಗೈದ ಆರೋಪಿಯ ಎನ್‌ಕೌಂಟರ್‌

  • ಹುಬ್ಬಳ್ಳಿಯಲ್ಲಿನ ಘಟನೆ

  • ಅಧಿಕಾರಿ ಸಹಿತ ಮೂವರು ಪೊಲೀಸರಿಗೆ ಗಾಯ

ಹುಬ್ಬಳ್ಳಿ – ಇಲ್ಲಿ 5 ವರ್ಷದ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಕೊಲೆಗೈದ ಆರೋಪಿಯನ್ನು ಪೊಲೀಸರು ಏಪ್ರಿಲ್ 13 ರ ರಾತ್ರಿ ಎನ್ಕೌಂಟರ್ನಲ್ಲಿ ಕೊಂದರು. ಈ ಎನ್ಕೌಂಟರ್ನಲ್ಲಿ ಸಬ್ ಇನ್ಸ್ಪೆಕ್ಟರ್ ಸೇರಿದಂತೆ ಮೂವರು ಪೊಲೀಸರು ಗಾಯಗೊಂಡಿದ್ದಾರೆ. ರಿತೇಶ (ವಯಸ್ಸು 35) ಎಂದು ಆರೋಪಿಯನ್ನು ಗುರುತಿಸಲಾಗಿದ್ದು, ಈತ ಮೂಲತಃ ಬಿಹಾರದವನು. ಆತ ಬಾಲಕಿಯನ್ನು ಆಕೆಯ ಮನೆಯ ಹತ್ತಿದಿಂದ ಅಪಹರಿಸಿ ಪಾಳುಬಿದ್ದ ಪ್ರದೇಶದ ಶೆಡ್ಗೆ ಕರೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಬಾಲಕಿಯ ಚೀರಾಟ ಕೇಳಿ ಜನರು ಜಮಾಯಿಸಿದರು. ಇದರಿಂದ ಹೆದರಿದ ಆರೋಪಿ ಬಾಲಕಿಯ ಕತ್ತು ಹಿಸುಕಿ ಕೊಲೆ ಮಾಡಿ ಪರಾರಿಯಾಗಿದ್ದ.

ಘಟನೆಯ ಮಾಹಿತಿ ತಿಳಿದ ಪೊಲೀಸರು ಕೆಲವೇ ಗಂಟೆಗಳಲ್ಲಿ ಆತನನ್ನು ಪತ್ತೆ ಹಚ್ಚಿ ಬಂಧಿಸಿದ್ದರು. ದಾಖಲೆಗಳು ಮತ್ತು ಗುರುತಿನ ಪರಿಶೀಲನೆಗಾಗಿ ಪೊಲೀಸರು ಆತನನ್ನು ಆತನ ಮನೆಗೆ ಕರೆದೊಯ್ದಿದ್ದರು. ಅಲ್ಲಿ ಆತ ತಪ್ಪಿಸಿಕೊಳ್ಳಲು ಯತ್ನಿಸಿ ಪೊಲೀಸರ ಮೇಲೆ ಕಲ್ಲುಗಳಿಂದ ಹಲ್ಲೆ ನಡೆಸಿದ್ದಾನೆ. ಈ ವೇಳೆ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದರೂ ಆತ ಓಡಿಹೋಗಲು ಯತ್ನಿಸುತ್ತಲೇ ಇದ್ದ. ಹಾಗಾಗಿ ಪೊಲೀಸರು ಆತನ ಮೇಲೆ ಗುಂಡು ಹಾರಿಸಿದ್ದಾರೆ. ಅದರಲ್ಲಿ ಆತ ಗಾಯಗೊಂಡಿದ್ದು, ಆತನನ್ನು ಆಸ್ಪತ್ರೆಗೆ ಕರೆದೊಯ್ದಾಗ ವೈದ್ಯರು ಆತ ಮೃತಪಟ್ಟಿದ್ದಾನೆ ಎಂದು ಹೇಳಿದ್ದಾರೆ. ಆತ ಕಳೆದ ಕೆಲವು ತಿಂಗಳುಗಳಿಂದ ಇಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದನು.