
ಠಾಣೆ: ‘ಪಿತಾಂಬರಿ ಉದ್ಯೋಗ ಸಮೂಹ’ದ ವ್ಯವಸ್ಥಾಪಕ ನಿರ್ದೇಶಕರಾದ ಡಾ. ರವೀಂದ್ರ ಪ್ರಭುದೇಸಾಯಿ ಅವರಿಗೆ ಇತ್ತೀಚೆಗೆ ಪುಣೆಯ ತಿಲಕ ಮಹಾರಾಷ್ಟ್ರ ವಿದ್ಯಾಪೀಠದಿಂದ ‘ಡಿ.ಲಿಟ್.’ ಗೌರವ ಪದವಿಯನ್ನು ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ವಿವಿಧ ಸಂಸ್ಥೆಗಳು ಮತ್ತು ಹಿತೈಷಿಗಳ ‘ನಾಗರಿಕ ಅಭಿನಂದನಾ ಸನ್ಮಾನ ಸಮಿತಿ’ಯ ಮೂಲಕ ಏಪ್ರಿಲ್ 17 ರಂದು ಡಾ. ರವೀಂದ್ರ ಪ್ರಭುದೇಸಾಯಿ ಅವರಿಗೆ ಸಾರ್ವಜನಿಕ ನಾಗರಿಕ ಸನ್ಮಾನವನ್ನು ಏರ್ಪಡಿಸಲಾಗಿದೆ. ಈ ಸನ್ಮಾನ ಸಮಾರಂಭದಲ್ಲಿ ಸನ್ಮಾನಪತ್ರ ವಾಚನ ಮತ್ತು ಡಾ. ಪ್ರಭುದೇಸಾಯಿ ಅವರ ಕುರಿತಾದ ಸ್ಮರಣಿಕೆಯ ಲೋಕಾರ್ಪಣೆ, ಎಂದು ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಲಾಯಿತು. ಈ ಸಂದರ್ಭದಲ್ಲಿ ಲೆಕ್ಕ ಪರಿಶೋಧಕರಾದ (ಸಿಎ) ಸಂಜೀವ ಬ್ರಹ್ಮೆ, ಅರುಂಧತಿ ಭಾಲೆರಾವ, ಅಮೋಲ ಧರ್ಮೆ ಮತ್ತು ನಿತಿನ ಬೋರಸೆ ಉಪಸ್ಥಿತರಿದ್ದರು.
ಠಾಣೆಯ ಡಾ. ಕಾಶಿನಾಥ ಘಾಣೇಕರ ನಾಟ್ಯಗೃಹದಲ್ಲಿ ಏಪ್ರಿಲ್ 17 ರಂದು ಸಂಜೆ 6 ಗಂಟೆಗೆ ಈ ಸನ್ಮಾನ ಸಮಾರಂಭ ಆಯೋಜಿಸಲಾಗಿದೆ. ಈ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ರಾಜ್ಯದ ಉಪಮುಖ್ಯಮಂತ್ರಿ ಏಕನಾಥ ಶಿಂದೆ, ಹಿರಿಯ ಪರಮಾಣು ವಿಜ್ಞಾನಿ ‘ಪದ್ಮವಿಭೂಷಣ’ ಡಾ. ಅನಿಲ ಕಾಕೋಡ್ಕರ, ಆಧ್ಯಾತ್ಮಿಕ ಚಿಂತಕರು ಮತ್ತು ಸುಪ್ರಸಿದ್ಧ ವಾಗ್ಮಿ ಡಾ. ಸಚ್ಚಿದಾನಂದ ಶೆವಡೆ, ಸನಾತನ ಸಂಸ್ಥೆಯ ಸದ್ಗುರು ಅನುರಾಧಾ ವಾಡೆಕರ ಅವರೊಂದಿಗೆ ಅನೇಕ ಸಂಸ್ಥೆಗಳ ಪ್ರತಿನಿಧಿಗಳು ಮತ್ತು ಠಾಣೆಯ ನಾಗರಿಕರು ಉಪಸ್ಥಿತರಿರಲಿದ್ದಾರೆ. ಈ ಕಾರ್ಯಕ್ರಮಕ್ಕೆ ಎಲ್ಲರೂ ಆಗಮಿಸಬೇಕೆಂದು ‘ನಾಗರಿಕ ಅಭಿನಂದನಾ ಸನ್ಮಾನ ಸಮಿತಿ’ಯ ವತಿಯಿಂದ ವಿನಂತಿಸಲಾಗಿದೆ.