Hanuman Chalisa Importance : ಪ್ರತಿದಿನ ಹನುಮಾನ್ ಚಾಲೀಸಾ ಪಠಿಸಿದರೆ ಹೃದಯಾಘಾತ ತಪ್ಪಿಸಬಹುದು! – ಸಂಶೋಧನೆ

ನವದೆಹಲಿ – ಹನುಮಾನ ಚಾಲೀಸಾದ ಪಠಣದಿಂದ ಆಧ್ಯಾತ್ಮಿಕ ಲಾಭಗಳಿವೆ ಎಂದು ಹಿಂದೂಗಳು ಅನೇಕ ಶತಮಾನಗಳಿಂದ ಅನುಭವಿಸುತ್ತಿದ್ದಾರೆ. ಈಗ ವಿಜ್ಞಾನವು ಸಂಶೋಧನೆಯ ಆಧಾರದ ಮೇಲೆ ಇದರ ವಿವಿಧ ಲಾಭಗಳಿವೆ ಎಂದು ಕಂಡುಹಿಡಿದಿದೆ. ಈ ಸಂಬಂಧ ಅನೇಕ ಪ್ರಯೋಗಗಳೂ ನಡೆದಿವೆ. ‘ಜರ್ನಲ್ ಆಫ್ ಆಲ್ಟರ್ನೇಟಿವ್ ಮೆಡಿಸಿನ್’ನಲ್ಲಿನ ಒಂದು ಅಧ್ಯಯನದ ಪ್ರಕಾರ ಪ್ರತಿದಿನ ಹನುಮಾನ ಚಾಲೀಸಾವನ್ನು ಪಠಿಸುವುದರಿಂದ ಒತ್ತಡ ಕಡಿಮೆಯಾಗುತ್ತದೆ ಮತ್ತು ಸಕಾರಾತ್ಮಕ ಶಕ್ತಿಯ ಮಟ್ಟ ಹೆಚ್ಚಾಗುತ್ತದೆ ಹಾಗೂ ಹೃದಯಾಘಾತವನ್ನು ತಪ್ಪಿಸಬಹುದು.

ಮನಸ್ಸು ಮತ್ತು ಮೆದುಳಿಗೆ ಶಾಂತಿ ಸಿಗುತ್ತದೆ!

ಹನುಮಾನ ಚಾಲೀಸಾದಲ್ಲಿ ಸುಮಾರು ೪೦ ಶ್ಲೋಕಗಳಿವೆ. ಅವುಗಳಲ್ಲಿ ಹೆಚ್ಚಿನವು ಅನುಷ್ಟುಪ್ ಛಂದಸ್ಸಿನಲ್ಲಿ ಬರೆಯಲ್ಪಟ್ಟಿವೆ. ಅಂದರೆ ಅವು ಲಯಬದ್ಧ, ಪುನರಾವರ್ತಿತ ಮತ್ತು ಧ್ಯಾನವನ್ನು ಪ್ರೇರೇಪಿಸುವಂತಿವೆ. ಈ ಶ್ಲೋಕಗಳು ಮೆದುಳಿನ ಅಲೆಗಳ ಆವರ್ತನವನ್ನು ಬೀಟಾ ಅಲೆಗಳಿಂದ ಆಲ್ಫಾ ಅಲೆಗಳಿಗೆ ಬದಲಾಯಿಸುತ್ತವೆ, ಇದರಿಂದ ಮನುಷ್ಯನ ಮನಸ್ಸು ಮತ್ತು ಮೆದುಳಿಗೆ ಶಾಂತಿ ಸಿಗುತ್ತದೆ.

ದೇಹದ ಶಾಂತಿ ಕಾಪಾಡುವ ವ್ಯವಸ್ಥೆ ಸಕ್ರಿಯವಾಗುತ್ತದೆ!

ನಾವು ಇದರಲ್ಲಿನ ‘ರಾಮದೂತ ಅತುಲಿತ ಬಲಧಾಮಾ..’ದಂತಹ ಶ್ಲೋಕಗಳನ್ನು ನಿಯಮಿತವಾಗಿ ಹೇಳಿದಾಗ, ಅದರ ಧ್ವನಿ ಕಂಪನವು ನಮ್ಮ ದೇಹದಲ್ಲಿನ ‘ಕಾರ್ಟಿಸೋಲ್’ ಅಂದರೆ ಒತ್ತಡದ ಹಾರ್ಮೋನನ್ನು ಕಡಿಮೆ ಮಾಡುತ್ತದೆ ಮತ್ತು ‘ಸೆರೊಟೋನಿನ್-ಡೋಪಮೈನ್’ ಅನ್ನು ಹೆಚ್ಚಿಸುತ್ತದೆ. ಇದರಿಂದ ನಮ್ಮ ದೇಹದ ಶಾಂತಿ ಕಾಪಾಡುವ ವ್ಯವಸ್ಥೆ ಮತ್ತು ‘ಪ್ಯಾರಾಸಿಂಪಥೆಟಿಕ್’ ವ್ಯವಸ್ಥೆ ಸಕ್ರಿಯವಾಗುತ್ತದೆ.

ಹೃದಯಾಘಾತ ಬರುವುದಿಲ್ಲ ಮತ್ತು ಇತರ ಕಾಯಿಲೆಗಳು ಬರುವುದಿಲ್ಲ!

ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತು (ಐಸಿಎಂಆರ್ – ಇಂಡಿಯನ್ ಕೌನ್ಸಿಲ್ ಆಫ್ ಮೆಡಿಸಿನ್ ರಿಸರ್ಚ್) ಮತ್ತು ‘ಏಮ್ಸ್’ನ (ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ) ಸಂಶೋಧನೆಯ ಪ್ರಕಾರ ಪ್ರತಿದಿನ 10 ನಿಮಿಷಗಳ ಕಾಲ ಹನುಮಾನ ಚಾಲೀಸಾವನ್ನು ಪಠಿಸುವುದರಿಂದ ಹೃದಯ ಬಡಿತ ಕಡಿಮೆಯಾಗಲು, ರಕ್ತದೊತ್ತಡ ನಿಯಂತ್ರಣದಲ್ಲಿರಲು ಮತ್ತು ನಿದ್ರೆ ಬರಲು ಸಹಾಯವಾಗುತ್ತದೆ. ಇದು ‘ಪೋಸ್ಟ ಟ್ರಾಮಾಟಿಕ್ ಸ್ಟ್ರೆಸ್ ಡಿಸಾರ್ಡರ್’, ಆತಂಕ ಮತ್ತು ‘ಎಡಿಎಚ್ಡಿ’ (ಅಟೆನ್ಷನ್ ಡೆಫಿಸಿಟ್ ಹೈಪರ್ಆಕ್ಟಿವಿಟಿ ಡಿಸಾರ್ಡರ್) ಕಾಯಿಲೆಗಳಿಂದಲೂ ಆರಾಮ್ ನೀಡುತ್ತದೆ.

ರಕ್ತದೊತ್ತಡವನ್ನು ನಿಯಂತ್ರಿಸಲು ಉಪಯುಕ್ತ!

‘ಜರ್ನಲ್ ಆಫ್ ಇವಲ್ಯೂಷನ್ ಆಫ್ ಮೆಡಿಕಲ್ ಅಂಡ್ ಡೆಂಟಲ್ ಸೈನ್ಸ’ ನಲ್ಲಿನ ಮೀರಾ ಗೋಯಲ ಮತ್ತು ಅವರ ಸಹೋದ್ಯೋಗಿಗಳು ನಡೆಸಿದ ಸಂಶೋಧನೆಯ ಪ್ರಕಾರ 18 ರಿಂದ 22 ವರ್ಷ ವಯಸ್ಸಿನ ಎಂಬಿಬಿಎಸ್ (‘ಬ್ಯಾಚುಲರ್ ಆಫ್ ಮೆಡಿಸಿನ್, ಬ್ಯಾಚುಲರ್ ಆಫ್ ಸರ್ಜರಿ’)ನ 20 ವಿದ್ಯಾರ್ಥಿಗಳಿಗೆ 10 ನಿಮಿಷಗಳ ಕಾಲ ಹನುಮಾನ ಚಾಲೀಸಾವನ್ನು ಕೇಳಿಸಿದ ನಂತರ ಅವರ ರಕ್ತದೊತ್ತಡ ಕಡಿಮೆಯಾಗಿರುವುದು ಕಂಡುಬಂದಿದೆ.

ಸಂಪಾದಕೀಯ ನಿಲುವು

‘ಇತರ ಧರ್ಮೀಯರನ್ನು ಕೊಲ್ಲಿರಿ, ಅವರನ್ನು ಮತಾಂತರಿಸಿ, ಅವರ ಆಸ್ತಿಯನ್ನು ಲೂಟಿ ಮಾಡಿರಿ’ ಎಂದು ಬೋಧಿಸುವ ಇತರ ಪಂಥಗಳಲ್ಲಿ ಇಂತಹ ಒಂದು ಸ್ತೋತ್ರವಾದರೂ ಇದೆಯೇ?