Bengal Waqf Amendment Violence : ಮುರ್ಷಿದಾಬಾದ್‌ನ ಹಿಂಸಾಚಾರದ ಹಿಂದೆ ಬಾಂಗ್ಲಾದೇಶಿ ಭಯೋತ್ಪಾದಕ ಸಂಘಟನೆಯ ಕೈವಾಡ !

ಬಂಗಾಳವನ್ನು ‘ಬಾಂಗ್ಲಾದೇಶ’ ಮಾಡಲು ಬಾಂಗ್ಲಾದೇಶಿ ಭಯೋತ್ಪಾದಕ ಸಂಘಟನೆ ಸಕ್ರಿಯ

ಮುರ್ಷಿದಾಬಾದ್ (ಬಂಗಾಳ) – ಇಲ್ಲಿ ವಕ್ಫ್ ಸುಧಾರಣಾ ಕಾನೂನಿನಿಂದಾಗಿ ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ಹಿಂದೂ ವಿರೋಧಿ ಹಿಂಸಾಚಾರದ ಹಿಂದೆ ಬಾಂಗ್ಲಾದೇಶದ ಕೈವಾಡವಿರುವುದು ಬೆಳಕಿಗೆ ಬಂದಿದೆ. ವಕ್ಫ್ ಕಾನೂನನ್ನು ವಿರೋಧಿಸುವ ನೆಪದಲ್ಲಿ ಜಿಹಾದಿ ಭಯೋತ್ಪಾದಕರು ರೂಪಿಸಿದ ಸಂಚಿನ ಭಾಗವಾಗಿ ಮುರ್ಷಿದಾಬಾದ್‌ನಲ್ಲಿ ಹಿಂಸಾಚಾರ ನಡೆದಿದೆ ಎಂದು ಹೇಳಲಾಗುತ್ತಿದೆ. ಈ ಹಿಂಸಾಚಾರದಲ್ಲಿ ಈವರೆಗೆ 2 ಹಿಂದೂಗಳು ಸೇರಿದಂತೆ 3 ಜನರು ಸಾವನ್ನಪ್ಪಿದ್ದಾರೆ. ಈ ಹಿಂಸಾಚಾರದ ಹಿಂದೆ ಬಾಂಗ್ಲಾದೇಶದ ಜಿಹಾದಿ ಭಯೋತ್ಪಾದಕ ಸಂಘಟನೆ ‘ಹಿಜ್ಬುತ್-ಉತ್-ತಹ್ರೀರ್’ ಇದೆ ಎಂದು ಪೊಲೀಸರಿಗೆ ಮಾಹಿತಿ ಲಭಿಸಿದೆ. ಈ ಹಿಂದೆ ಬಾಂಗ್ಲಾದೇಶಿ ಭಯೋತ್ಪಾದಕ ಸಂಘಟನೆ ‘ಅನ್ಸಾರುಲ್ಲಾ ಬಾಂಗ್ಲಾ ತಂಡ’ದ ಭಯೋತ್ಪಾದಕರನ್ನು ಮುರ್ಷಿದಾಬಾದ್‌ನ ಧುಲಿಯನ್‌ನಿಂದ ಬಂಧಿಸಲಾಗಿತ್ತು. ಈ ಪ್ರದೇಶದಲ್ಲಿ ‘ಅಲ್ ಖೈದಾ ಇನ್ ಇಂಡಿಯನ್ ಸಬ್‌ಕಾಂಟಿನೆಂಟ್’ ಮತ್ತು ‘ಹಿಜ್ಬುಲ್ ಮುಜಾಹಿದ್ದೀನ್’ ಭಯೋತ್ಪಾದಕ ಸಂಘಟನೆಗಳ ಚಟುವಟಿಕೆಗಳು ಕೂಡ ಬೆಳಕಿಗೆ ಬಂದಿವೆ.

ಮುರ್ಷಿದಾಬಾದ್ ಜಿಲ್ಲೆಯಲ್ಲಿ ಹಿಜ್ಬುತ್-ಉತ್-ತಹ್ರೀರ್‌ನ 40ಕ್ಕೂ ಹೆಚ್ಚು ‘ಸ್ಲೀಪರ್ ಸೆಲ್’ (ಗುಪ್ತವಾಗಿ ಭಯೋತ್ಪಾದಕರಿಗೆ ಸಹಾಯ ಮಾಡುವ ಮತಾಂಧರ ಸ್ಥಳೀಯ ಗುಂಪುಗಳು) ಹಿಜ್ಬುತ್-ಉತ್-ತಹ್ರೀರ್‌ನ ಪ್ರಮುಖ ಕಮಾಂಡರ್ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಮುರ್ಷಿದಾಬಾದ್‌ಗೆ ಬಂದಿದ್ದ. ಹಿಜ್ಬುತ್-ಉತ್-ತಹ್ರೀರ್‌ನ 2 ಸಂಘಟಕರು ಕಳೆದ ಕೆಲವು ತಿಂಗಳುಗಳಿಂದ ಮುರ್ಷಿದಾಬಾದ್‌ನ ಧುಲಿಯನ್ ಮತ್ತು ಫರಕ್ಕಾದಲ್ಲಿ ಸಕ್ರಿಯರಾಗಿದ್ದರು ಎಂದು ಗುಪ್ತಚರ ಸಂಸ್ಥೆಗಳಿಗೆ ಮಾಹಿತಿ ಲಭಿಸಿದೆ. ಮುರ್ಷಿದಾಬಾದ್ ಜಿಲ್ಲೆಯಲ್ಲಿ ಹಿಜ್ಬುತ್-ಉತ್-ತಹ್ರೀರ್‌ನ 40ಕ್ಕೂ ಹೆಚ್ಚು ‘ಸ್ಲೀಪರ್ ಸೆಲ್’ಗಳು ಇರಬಹುದು. ಮುರ್ಷಿದಾಬಾದ್‌ನ ಗಡಿ ಬಾಂಗ್ಲಾದೇಶಕ್ಕೆ ಹೊಂದಿಕೊಂಡಿದೆ. ಇಲ್ಲಿಂದ ನುಸುಳುವಿಕೆ ಮತ್ತು ಕಳ್ಳಸಾಗಣೆ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ. ‘ಹಿಜ್ಬುತ್’ ಮುರ್ಷಿದಾಬಾದ್‌ನಲ್ಲಿ ತನ್ನ ಬಲೆಯನ್ನು ಸ್ಥಾಪಿಸಲು ಪ್ರಯತ್ನಿಸುತ್ತಿದೆ.

ಹಿಜ್ಬುತ್-ಉತ್-ತಹ್ರೀರ್‌ನ ಕಾರ್ಯವಿಧಾನ!

ಧರ್ಮದ ಆಧಾರದಲ್ಲಿ ಮುಸ್ಲಿಂ ಸಮುದಾಯವನ್ನು ಗೊಂದಲಕ್ಕೆ ಸಿಲುಕಿಸುವುದು

ಹಿಂದೂಗಳ ಮೇಲೆ ದಾಳಿ ಮಾಡಲು ಮುಸ್ಲಿಂ ಸಮುದಾಯವನ್ನು ಸಿದ್ಧಪಡಿಸುವುದು

ಸ್ಥಳೀಯ ಯುವಕರನ್ನು ದಾರಿ ತಪ್ಪಿಸಿ ಸಂಘಟನೆಯಲ್ಲಿ ಸೇರಿಸಿಕೊಳ್ಳುವುದು

ಹಿಂದೂಗಳನ್ನು ಎಳೆದೊಯ್ದು ಹತ್ಯೆ ಮಾಡಲಾಗಿದೆ!

ಬಾಂಗ್ಲಾದೇಶದಲ್ಲಿ ಕಳೆದ ವರ್ಷ ನಡೆದ ಅಧಿಕಾರ ಬದಲಾವಣೆಯ ಸಂದರ್ಭದಲ್ಲಿ ಈ ಸಂಘಟನೆ ಅಲ್ಲಿ ಇದೇ ರೀತಿಯಲ್ಲಿ ಕೆಲಸ ಮಾಡಿದೆ. ಅಲ್ಲಿ ಹಿಂದೂಗಳನ್ನು ಮನೆಯಿಂದ ಹೊರಗೆ ಎಳೆದು ತಂದು ಬೀದಿಯಲ್ಲಿ ಥಳಿಸಿ ಹತ್ಯೆ ಮಾಡಲಾಯಿತು. ದೇವಾಲಯಗಳನ್ನು ಧ್ವಂಸಗೊಳಿಸಲಾಯಿತು. ಹಿಂದೂಗಳ ಮನೆ ಮತ್ತು ಅಂಗಡಿಗಳನ್ನು ಸುಟ್ಟುಹಾಕಲಾಯಿತು. ಗುಪ್ತಚರ ಮೂಲಗಳ ಮಾಹಿತಿಯ ಪ್ರಕಾರ, ಈ ಸಂಘಟನೆ ಈಗ ಭಾರತದಲ್ಲಿ ವಕ್ಫ್ ಕಾನೂನಿಗೆ ನಡೆಯುತ್ತಿರುವ ವಿರೋಧದ ಲಾಭ ಪಡೆದು ಭಾರತವನ್ನು ಅಶಾಂತಗೊಳಿಸಲು ಸಂಚು ರೂಪಿಸುತ್ತಿದೆ.

ಬಾಂಗ್ಲಾದೇಶದ ಗಡಿಯ ಮದರಸಾಗಳಲ್ಲಿ ಭಯೋತ್ಪಾದಕರನ್ನು ಸೃಷ್ಟಿಸಿ ಭಾರತಕ್ಕೆ ಕಳುಹಿಸಲಾಗುತ್ತಿದೆ!

ಕಳೆದ 2 ವರ್ಷಗಳಲ್ಲಿ ‘ಅಲ್ ಖೈದಾ ಇನ್ ಇಂಡಿಯನ್ ಸಬ್‌ಕಾಂಟಿನೆಂಟ್’ (ಭಾರತೀಯ ಉಪಖಂಡದಲ್ಲಿನ ಅಲ್ ಖೈದಾ) ಮತ್ತು ‘ಅನ್ಸಾರುಲ್ಲಾ ಬಾಂಗ್ಲಾ ತಂಡ’ಕ್ಕೆ ಸಂಬಂಧಿಸಿದ ಅನೇಕ ಭಯೋತ್ಪಾದಕರನ್ನು ಬಂಧಿಸಲಾಗಿದೆ. ಅವರಲ್ಲಿ ಸುಮಾರು 20 ಭಯೋತ್ಪಾದಕರು ಬಾಂಗ್ಲಾದೇಶದವರಾಗಿದ್ದಾರೆ. ಬಾಂಗ್ಲಾದೇಶದ ಗಡಿಯ ಬಳಿ ಅನೇಕ ತಥಾಕಥಿತ ಮದರಸಾಗಳಿವೆ, ಅಲ್ಲಿ ಧರ್ಮದ ಹೆಸರಿನಲ್ಲಿ ಯುವಕರನ್ನು ಮತಾಂತರ ಮಾಡಲಾಗುತ್ತಿದೆ. ಅವರಿಗೆ ಶಸ್ತ್ರಾಸ್ತ್ರಗಳನ್ನು ಬಳಸಲು ಮತ್ತು ಸ್ಫೋಟಕಗಳನ್ನು ತಯಾರಿಸಲು ತರಬೇತಿ ನೀಡಲಾಗುತ್ತಿದೆ ಎಂದು ಮೂಲಗಳು ಹೇಳುತ್ತವೆ. ಈ ತರಬೇತಿ ಪಡೆದ ಜಿಹಾದಿಗಳಿಗೆ ನಕಲಿ ಭಾರತೀಯ ಗುರುತಿನ ಚೀಟಿಗಳನ್ನು ನೀಡಿ ಬಂಗಾಳವನ್ನು ಬಾಂಗ್ಲಾದೇಶವಾಗಿ ಪರಿವರ್ತಿಸಲು ಭಾರತಕ್ಕೆ ಕಳುಹಿಸಲಾಗುತ್ತಿದೆ.