ಮುರ್ಷಿದಾಬಾದ (ಪಶ್ಚಿಮ ಬಂಗಾಳ) ಗಡಿ ಭದ್ರತಾ ಪಡೆಯ ಸೈನಿಕರ ಮೇಲೆ ಮತಾಂಧ ಮುಸ್ಲಿಮರಿಂದ ಗುಂಡಿನ ದಾಳಿ

ಮುರ್ಷಿದಾಬಾದ (ಪಶ್ಚಿಮ ಬಂಗಾಳ) – ಮತಾಂಧ ಮುಸ್ಲಿಮರು ವಕ್ಫ್ ಸುಧಾರಣಾ ಕಾಯ್ದೆಯ ವಿರುದ್ಧ ಹಿಂಸಾಚಾರ ನಡೆಸಿದ ನಂತರ, ಕೋಲಕಾತಾ ಉಚ್ಚ ನ್ಯಾಯಾಲಯದ ಆದೇಶದ ಮೇರೆಗೆ ಪರಿಸ್ಥಿತಿಯನ್ನು ಹತೋಟಿಗೆ ತರಲು ಗಡಿ ಭದ್ರತಾ ಪಡೆ ಸೈನಿಕರನ್ನು ನಿಯೋಜಿಸಲಾಗಿದೆ. ಈಗ ಅವರ ಮೇಲೂ ಸಹ ದಾಳಿ ನಡೆಸಲಾಗುತ್ತಿದೆ ಎಂಬುದು ಬೆಳಕಿಗೆ ಬಂದಿದೆ. ಏಪ್ರಿಲ್ 12 ರಂದು ಮುರ್ಷಿದಾಬಾದ್ ನ ಶಂಶೇರಗಂಜ್ ಪ್ರದೇಶದಲ್ಲಿ ಮತಾಂಧ ಮುಸ್ಲಿಮರು ಸೈನಿಕರ ತುಕಡಿಯ ಮೇಲೆ ಕಲ್ಲು ತೂರಾಟ ನಡೆಸಿ ಪೆಟ್ರೋಲ್ ಬಾಂಬಗಳನ್ನು ಎಸೆದರು, ಹಾಗೂ ಅವರ ವಾಹನಗಳನ್ನು ಧ್ವಂಸಗೊಳಿಸಿದರು. ಇದರ ನಂತರ ಏಪ್ರಿಲ್ 13 ರಂದು ಧುಲಿಯಾನ ಪ್ರದೇಶದಲ್ಲಿ ಮುಸ್ಲಿಮರು ಸೈನಿಕರ ಮೇಲೆ ಗುಂಡಿನ ದಾಳಿ ನಡೆಸಿದರು. ಈ ಗುಂಡಿನ ದಾಳಿಯಲ್ಲಿ ಇಬ್ಬರು ಮಕ್ಕಳು ಗಾಯಗೊಂಡಿದ್ದಾರೆ. ಸೈನಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಗಡಿ ಭದ್ರತಾ ಪಡೆಯ ಉಪ ಮಹಾನಿರೀಕ್ಷಕರು ತಿಳಿಸಿದ್ದಾರೆ. ಮೊದಲು ಹಿಂಸಾಚಾರ ನಡೆಸಿದವರೇ ಸೈನಿಕರ ಮೇಲೆ ದಾಳಿ ಮಾಡಿದ್ದಾರೆ ಎಂಬುದನ್ನು ಅವರು ಸ್ಪಷ್ಟಪಡಿಸಿದ್ದಾರೆ.

ಸಂಪಾದಕೀಯ ನಿಲುವು

ಇಂತಹ ದೇಶದ್ರೋಹಿಗಳನ್ನು ಗುಂಡಿಕ್ಕಿ ಕೊಲ್ಲುವ ಆದೇಶವನ್ನು ಸೈನ್ಯಕ್ಕೆ ನೀಡಬೇಕು, ಆಗ ಮಾತ್ರ ಇಂತಹವರ ಮೇಲೆ ನಿಯಂತ್ರಣ ಸಾಧಿಸಲು ಸಾಧ್ಯ!

 

‘ಗಡಿ ಭದ್ರತಾ ಪಡೆಯೇ ನುಸುಳುಕೋರರಿಗೆ ಹಿಂಸಾಚಾರ ನಡೆಸಲು ಕಳುಹಿಸಿದೆ!’ – ತೃಣಮೂಲ ಕಾಂಗ್ರೆಸ್ ಆರೋಪ

ತೃಣಮೂಲ ಕಾಂಗ್ರೆಸ್ಸಿನ ನಾಯಕ ಕುನಾಲ್ ಘೋಷ ಅವರು, ಗಡಿ ಭದ್ರತಾ ಪಡೆಯೇ ಹಿಂಸಾಚಾರ ನಡೆಸಲು ಮತ್ತು ರಾಜ್ಯ ಸರಕಾರಕ್ಕೆ ಸಮಸ್ಯೆಗಳನ್ನು ಸೃಷ್ಟಿಸಲು ನುಸುಳುಕೋರರನ್ನು ಈ ಪ್ರದೇಶಕ್ಕೆ ಕಳುಹಿಸಿದೆ ಎಂದು ಆರೋಪಿಸಿದ್ದಾರೆ. ಹೊರಗಿನಿಂದ ಬಂದವರೇ ಹಿಂಸಾಚಾರವನ್ನು ನಡೆಸಿದ್ದಾರೆ ಮತ್ತು ಈಗ ಅವರು ನಾಪತ್ತೆಯಾಗಿದ್ದಾರೆ ಎಂದು ಘೋಷ್ ಹೇಳಿಕೆ ನೀಡಿದ್ದಾರೆ.

ಸಂಪಾದಕೀಯ ನಿಲುವು

ಇಂತಹ ಆರೋಪ ಮಾಡುವ ಮೂಲಕ ತೃಣಮೂಲ ಕಾಂಗ್ರೆಸ್ ಭಾರತೀಯ ಸೇನೆಯನ್ನು ಅವಮಾನಿಸುತ್ತಿದೆ. ಈ ಹೇಳಿಕೆಗೆ ತೃಣಮೂಲ ಕಾಂಗ್ರೆಸ್ ಪುರಾವೆಗಳನ್ನು ಸಲ್ಲಿಸಬೇಕು, ಇಲ್ಲದಿದ್ದರೆ ಕ್ಷಮೆ ಯಾಚಿಸಬೇಕು. ಇಲ್ಲಾ ಅಂದರೆ ಕೇಂದ್ರ ಸರ್ಕಾರ ತೃಣಮೂಲ ಕಾಂಗ್ರೆಸ್ ಅನ್ನು ನಿಷೇಧಿಸಬೇಕು ಎಂದು ಜನಸಾಮಾನ್ಯರು ಒತ್ತಾಯಿಸಬೇಕು!