ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಂದ ಕಾಂಗ್ರೆಸ್‌ಗೆ ಸವಾಲು
ಹಿಸ್ಸಾರ್ (ಹರಿಯಾಣ): ಕಾಂಗ್ರೆಸ್‌ಗೆ ಮುಸಲ್ಮಾನರ ಬಗ್ಗೆ ಅಷ್ಟೊಂದು ಕಾಳಜಿ ಇದ್ದರೆ, ಅವರು ಮುಸಲ್ಮಾನ ವ್ಯಕ್ತಿಯನ್ನು ಕಾಂಗ್ರೆಸ್ ನ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಮಾಡಲಿ. ಲೋಕಸಭೆ ಮತ್ತು ರಾಜ್ಯಸಭೆ ಚುನಾವಣೆಗಳಲ್ಲಿ ಮುಸಲ್ಮಾನರಿಗೆ 50 ಪ್ರತಿಶತ ಟಿಕೆಟ್ ನೀಡಲಿ. ಅವರು ಗೆದ್ದು ಬಂದರೆ, ಅವರು ತಮ್ಮ ಅಭಿಪ್ರಾಯಗಳನ್ನು ಮಂಡಿಸುತ್ತಾರೆ; ಆದರೆ ಕಾಂಗ್ರೆಸ್ ಹಾಗೆ ಮಾಡಲು ಬಯಸುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಇಲ್ಲಿನ ಸಭೆಯಲ್ಲಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್‌ನ ತುಷ್ಟೀಕರಣ ರಾಜಕಾರಣದಿಂದ ಮುಸಲ್ಮಾನರಿಗೆ ಒಂದಿಷ್ಟೂ ಲಾಭವಾಗಿಲ್ಲ!
ಪ್ರಧಾನಿ ಮೋದಿ ಮಾತು ಮುಂದುವರೆಸಿ, ಕಾಂಗ್ರೆಸ್ ಎಂದಿಗೂ ಯಾರಿಗು ಒಳ್ಳೆಯದನ್ನು ಬಯಸಲಿಲ್ಲ. ಆದ್ದರಿಂದ, ಅದು ಎಂದಿಗೂ ಮುಸಲ್ಮಾನರ ಒಳ್ಳೆಯದನ್ನು ಬಯಸಲಿಲ್ಲ. ಇದು ಕಾಂಗ್ರೆಸ್‌ನ ನಿಜವಾದ ಸತ್ಯ. ಕಾಂಗ್ರೆಸ್‌ನ ತುಷ್ಟೀಕರಣ ರಾಜಕಾರಣದಿಂದ ಮುಸಲ್ಮಾನರಿಗೆ ಒಂದಿಷ್ಟೂ ಲಾಭವಾಗಲಿಲ್ಲ, ಬದಲಿಗೆ ನಷ್ಟವೆ ಆಗಿದೆ. ಕಾಂಗ್ರೆಸ್ ಕೇವಲ ಕೆಲವು ಕಟ್ಟರವಾದಿಗಳನ್ನು ಸಂತೋಷಪಡಿಸುವ ಆಯ್ಕೆಯನ್ನು ಆರಿಸಿಕೊಂಡಿತು. ಉಳಿದ ಸಮಾಜವು ಕಷ್ಟದಲ್ಲಿದೆ, ಅನಕ್ಷರಸ್ಥವಾಗಿದೆ ಮತ್ತು ಬಡತನದಲ್ಲಿ ಉಳಿಯಿತು.
ವಕ್ಫ್ ಸುಧಾರಣಾ ಕಾನೂನಿನಿಂದ ಬಡ ಮುಸಲ್ಮಾನರಿಗೆ ಲಾಭ
ವಕ್ಫ್ ಹೆಸರಿನಲ್ಲಿ ಲಕ್ಷಾಂತರ ಹೆಕ್ಟೇರ್ ಭೂಮಿ ಇದೆ. ವಕ್ಫ್ ಆಸ್ತಿಯ ಲಾಭವನ್ನು ಅಗತ್ಯವಿರುವ ಮುಸಲ್ಮಾನರಿಗೆ ನೀಡಿದ್ದರೆ, ಅವರು ಲಾಭ ಪಡೆಯುತ್ತಿದ್ದರು; ಆದರೆ ಈ ಆಸ್ತಿಯ ಲಾಭವು ಭೂ-ಮಾಫಿಯಾಗಳಿಗೆ ಸಿಕ್ಕಿತು. ಈಗ ವಕ್ಫ್ ಸುಧಾರಣಾ ಕಾನೂನಿನಿಂದ ಬಡವರ ಶೋಷಣೆ ನಿಲ್ಲಲಿದೆ. ಹೊಸ ನಿಬಂಧನೆಗಳಿಂದ ಮುಸ್ಲಿಂ ಸಮಾಜದ ಬಡವರು, ಮಹಿಳೆಯರು ಮತ್ತು ವಿಧವೆಯರಿಗೆ ಲಾಭವಾಗಲಿದೆ ಎಂದು ಪ್ರಧಾನಿ ಮೋದಿ ಹೇಳಿದರು.