Laser Weapon System : ಭಾರತದಿಂದ ಲೇಸರ್ ಆಯುಧದ ಯಶಸ್ವಿ ಪರೀಕ್ಷೆ

ಅಮೆರಿಕ, ಚೀನಾ, ಇಸ್ರೇಲ್ ಮತ್ತು ರಷ್ಯಾದ ನಂತರ ಭಾರತದ ಬಳಿ ‘ಲೇಸರ್’ಶಸ್ತ್ರಾಸ್ತ್ರ

ಕರ್ನೂಲು (ಆಂಧ್ರಪ್ರದೇಶ) – ಭಾರತವು ‘ಲೇಸರ್’ ಆಧಾರಿತ ಶಸ್ತ್ರಾಸ್ತ್ರಗಳನ್ನು ಯಶಸ್ವಿಯಾಗಿ ಪರೀಕ್ಷಿಸಿ ಅಮೆರಿಕ, ಚೀನಾ, ಇಸ್ರೇಲ್ ಮತ್ತು ರಷ್ಯಾಗಳ ಸಾಲಿಗೆ ಸೇರಿದೆ. ಈ ಪರೀಕ್ಷೆ ಕರ್ನೂಲ್‌ನಲ್ಲಿರುವ, ‘ನ್ಯಾಷನಲ್ ಓಪನ್ ಏರ್ ರೇಂಜ್’ನಲ್ಲಿ (ರಾಷ್ಟ್ರೀಯ ಮುಕ್ತ ವಾಯು ಶ್ರೇಣಿಯಲ್ಲಿ) ನಡೆಸಲಾಯಿತು. 30 ಕಿಲೋವ್ಯಾಟ್ ನ ಈ ಲೇಸರ್ ಆಧಾರಿತ ‘ಡೈರೆಕ್ಟೆಡ್ ಎನರ್ಜಿ ವೆಪನ್ ಎಕ್ಮೆ-4 (ಎ)’ ಶಸ್ತ್ರಾಸ್ತ್ರಗಳ ಮೂಲಕ ಕೆಲವೇ ಸೆಕೆಂಡುಗಳಲ್ಲಿ ಶತ್ರುಗಳ ಡ್ರೋನ್, ಕ್ಷಿಪಣಿಗಳು, ಕಣ್ಗಾವಲು ಕಾಯುವ ಸೆನ್ಸರ್ ನಾಶಪಡಿಸುತ್ತದೆ. ಈ ಶಸ್ತ್ರಾಸ್ತ್ರ ಸಂರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಅಂದರೆ ಡಿ.ಆರ್.ಡಿ.ಓ. (ಡಿಫೈನ್ಸ್ ರೀಸರ್ಚ್ ಅಂಡ್ ಡೆವಲಪಮೆಂಟ್ ಆರ್ಗನೈಸೇಷನ್) ಅಭಿವೃದ್ಧಿ ಪಡಿಸಿದೆ.

ಲೇಸರ್ ವ್ಯವಸ್ಥೆ ಹೇಗೆ ಕೆಲಸ ಮಾಡುತ್ತದೆ?

ರಾಡಾರ್ ಅಥವಾ ಅದರ ಅಂತರ್ನಿರ್ಮಿತ ‘ಎಲೆಕ್ಟ್ರೋ-ಆಪ್ಟಿಕ್’ ವ್ಯವಸ್ಥೆಯಿಂದ ಗುರಿ ಪತ್ತೆಯಾದಾಗ, ಈ ಲೇಸರ್ ಶಸ್ತ್ರಾಸ್ತ್ರವು ಬೆಳಕಿನ ವೇಗದಲ್ಲಿ ಅದರ ಮೇಲೆ ದಾಳಿ ಮಾಡಿ ಲೇಸರ್‌ನಿಂದ ಅದನ್ನು ನಾಶಪಡಿಸುತ್ತದೆ. ಈ ವ್ಯವಸ್ಥೆಯ ವೈಶಿಷ್ಟ್ಯವೆಂದರೆ ಇದಕ್ಕೆ ಯಾವುದೇ ಮದ್ದುಗುಂಡು ಅಥವಾ ರಾಕೆಟ್‌ಗಳನ್ನು ಬಳಸುವ ಅಗತ್ಯವಿರುವುದಿಲ್ಲ; ಅದು ಕೇವಲ ಬೆಳಕಿನಿಂದ ಮಾತ್ರ ದಾಳಿ ಮಾಡುತ್ತದೆ. ಇದು ಡ್ರೋನ್ ದಾಳಿಯ ಗುಂಪನ್ನು ಒಂದೇ ಬಾರಿಗೆ ನಾಶಪಡಿಸುತ್ತದೆ. ಮೂಕ ಆಪರೇಷನ್, ಅಂದರೆ ಇದು ಶಬ್ದವಿಲ್ಲದೆ ಮತ್ತು ಹೊಗೆಯಿಲ್ಲದೆ ಗುರಿಗಳನ್ನು ನಾಶಪಡಿಸುತ್ತದೆ.