ಗುಜರಾತ್: ಸಮುದ್ರದಲ್ಲಿ 1 ಸಾವಿರದ,800 ಕೋಟಿ ರೂ. ಮೌಲ್ಯದ ಮಾದಕ ದ್ರವ್ಯ ವಶ!

ಪೋರಬಂದರ್ (ಗುಜರಾತ್) – ಬಂದರಿನಿಂದ 190 ಕಿ.ಮೀ.ದೂರದ ಸಮುದ್ರದಲ್ಲಿ ಭಾರತೀಯ ಕರಾವಳಿ ರಕ್ಷಣಾ ಪಡೆ ಮತ್ತು ಗುಜರಾತ್ ಭಯೋತ್ಪಾದನಾ ನಿಗ್ರಹ ದಳ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ, ಆಳ ಸಮುದ್ರದಲ್ಲಿ ಹಡಗಿನಿಂದ 1,800 ಕೋಟಿ ರೂ. ಮೌಲ್ಯದ 300 ಕೆ.ಜಿ. ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಔಷಧವು ‘ಮೆಥಾಂಫೆಟಮೈನ್’ ಇರಬಹುದು ಎಂದು ಹೇಳಲಾಗುತ್ತಿದೆ.

ತಂಡವು ಅನುಮಾನಾಸ್ಪದ ನೌಕೆಯನ್ನು ತಡೆದ ನಂತರ, ಅದರಲ್ಲಿದ್ದ ಜನರು ಮಾದಕ ದ್ರವ್ಯಗಳನ್ನು ಸಮುದ್ರಕ್ಕೆ ಎಸೆದು ನೌಕೆಯೊಂದಿಗೆ ಪರಾರಿಯಾದರು. ಇದಾದ ನಂತರ, ತಂಡವು ಸಮುದ್ರದಲ್ಲಿ ಎಸೆಯಲ್ಪಟ್ಟ ಮಾದಕವಸ್ತುಗಳನ್ನು ವಶಕ್ಕೆ ಪಡೆಯಿತು. ಈ ಮಾದಕ ವಸ್ತುಗಳ ಕಳ್ಳಸಾಗಣೆ ಮಾಡುವವನು ಪಾಕಿಸ್ತಾನಿ ನಾಗರಿಕನಾಗಿರಬಹುದು ಎಂದು ಶಂಕಿಸಲಾಗಿದೆ.

ಸಂಪಾದಕೀಯ ನಿಲುವು

ವಶಪಡಿಸಿಕೊಂಡ ಮಾದಕ ವಸ್ತುಗಳ ಪ್ರಮಾಣವೇ ಇಷ್ಟೊಂದಿರುವಾಗ, ದೇಶದಲ್ಲಿ ಪತ್ತೆಯಾಗದ ಮಾದಕ ವಸ್ತುಗಳು ಇನ್ನೆಷ್ಟಿರಬಹುದು ಎಂಬುದನ್ನು ಊಹಿಸಲೂ ಸಾಧ್ಯವಿಲ್ಲ!