ವಿಶ್ವವಿದ್ಯಾಲಯದಲ್ಲಿ ಇಸ್ಲಾಮಿಕ್ ಕಟ್ಟರವಾದಿ ಚಟುವಟಿಕೆಗಳು ಹೆಚ್ಚಾದ ಕಾರಣ ಈ ನಿರ್ಧಾರ!
ನ್ಯೂಯಾರ್ಕ್ (ಅಮೆರಿಕ) – ಜಾಗತಿಕ ಮಟ್ಟದಲ್ಲಿ ಪ್ರತಿಷ್ಠಿತ ವಿಶ್ವವಿದ್ಯಾಲಯವೆಂದು ಗುರುತಿಸಿಕೊಂಡಿರುವ ಹಾರ್ವರ್ಡ್ ವಿಶ್ವವಿದ್ಯಾಲಯಕ್ಕೆ ನೀಡಲಾಗುತ್ತಿದ್ದ ೨.೨ ಬಿಲಿಯನ್ ಡಾಲರ್‌ಗಳ (ಅಂದಾಜು ೧೮ ಸಾವಿರ ಕೋಟಿ ರೂಪಾಯಿಗಳ) ನಿಧಿಯನ್ನು ಟ್ರಂಪ್ ಸರಕಾರ ತಡೆಹಿಡಿದಿದೆ. ವಿಶ್ವವಿದ್ಯಾಲಯದಲ್ಲಿ ಹೆಚ್ಚುತ್ತಿರುವ ಕಟ್ಟರವಾದಿ ಚಟುವಟಿಕೆಗಳಿಂದಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ವಿಶ್ವವಿದ್ಯಾಲಯಗಳಲ್ಲಿ ಯಹೂದಿಗಳ ವಿರುದ್ಧ ದ್ವೇಷ ಹರಡಲಾಗುತ್ತಿದೆ ಎಂಬ ನಿರಂತರ ದೂರುಗಳು ಬರುತ್ತಿದ್ದವು ಹಾಗೂ ಅಲ್ಲಿ ಭಯೋತ್ಪಾದಕ ಸಂಘಟನೆ ಹಮಾಸ್‌ನ ಬೆಂಬಲಕ್ಕೆ ಪ್ರತಿಭಟನೆಗಳನ್ನು ನಡೆಸಲಾಗಿತ್ತು. ಈ ಬಗ್ಗೆ ಪದೇ ಪದೇ ದೂರು ನೀಡಿದರೂ ವಿಶ್ವವಿದ್ಯಾಲಯದ ಆಡಳಿತವು ಅವುಗಳನ್ನು ತಡೆಯಲು ಅಸಮರ್ಥವಾಗಿದೆ. ಟ್ರಂಪ್ ಆಡಳಿತವು ವಿಶ್ವವಿದ್ಯಾಲಯದ ವಿರುದ್ಧ ಯಹೂದಿ ಜ್ಯೂ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳೊಂದಿಗೆ ತಾರತಮ್ಯ ಮಾಡುತ್ತಿದೆ ಎಂದು ಆರೋಪಿಸಿದೆ.
Trump blocks over $2bn in funding to Harvard University!
Reason: Surge in Islamic extremist activities on campus!
In India, institutions like JNU, Jadavpur and other universities have become hubs of anti-India and anti-Hindu activities.
Will the Indian government show the same… pic.twitter.com/FCFJJkgxdv
— Sanatan Prabhat (@SanatanPrabhat) April 15, 2025
ಟ್ರಂಪ್ ಆಡಳಿತದಿಂದ ಕೆಲವು ಸೂಚನೆಗಳು ನೀಡಲ್ಪಟ್ಟಿದ್ದವು!
ಈ ನಿರ್ಧಾರ ತೆಗೆದುಕೊಳ್ಳುವ ಮೊದಲು ಅಧ್ಯಕ್ಷ ಟ್ರಂಪ್ ಅವರು ಹಾರ್ವರ್ಡ್ ವಿಶ್ವವಿದ್ಯಾಲಯಕ್ಕೆ ಪತ್ರ ಬರೆದಿದ್ದರು. ಅದರಲ್ಲಿ ಅವರು ವಿಶ್ವವಿದ್ಯಾಲಯದ ಆಡಳಿತಕ್ಕೆ ಅನೇಕ ದೊಡ್ಡ ಬದಲಾವಣೆಗಳನ್ನು ಮಾಡಲು ತಿಳಿಸಿದ್ದರು. ಆಡಳಿತವು ಭಯೋತ್ಪಾದಕರನ್ನು ಬೆಂಬಲಿಸುವ ವಿದ್ಯಾರ್ಥಿಗಳನ್ನು ಗುರುತಿಸಿ ವಿಶ್ವವಿದ್ಯಾಲಯದಲ್ಲಿ ಭಯೋತ್ಪಾದನೆಯನ್ನು ಪ್ರೋತ್ಸಾಹಿಸುವುದನ್ನು ನಿಲ್ಲಿಸಬೇಕು ಎಂದು ಅವರು ಹೇಳಿದ್ದರು. ಟ್ರಂಪ್ ಅವರು ವಿಶ್ವವಿದ್ಯಾಲಯದ ಪ್ರವೇಶ ಪ್ರಕ್ರಿಯೆಯಲ್ಲಿ ಸುಧಾರಣೆಗಳನ್ನು ಮಾಡುವಂತೆ ಸಹ ಸೂಚಿಸಿದ್ದರು. ಹಾರ್ವರ್ಡ್ ಆಡಳಿತವು ಈ ಸೂಚನೆಗಳನ್ನು ಒಪ್ಪಿಕೊಳ್ಳಲು ನಿರಾಕರಿಸಿತು. ವಿಶ್ವವಿದ್ಯಾಲಯದ ಆಡಳಿತವು ಭಯೋತ್ಪಾದನೆಯನ್ನು ಬೆಂಬಲಿಸುವ ವಿದ್ಯಾರ್ಥಿಗಳ ಶೋಧವು ಅವರ ಸ್ವಾತಂತ್ರ್ಯದ ಮೇಲಿನ ಆಕ್ರಮಣ ಎಂದು ಬಣ್ಣಿಸಿತು. ಇದರ ನಂತರ ಟ್ರಂಪ್ ಆಡಳಿತವು ಈ ನಿರ್ಧಾರ ತೆಗೆದುಕೊಂಡಿತು.
೯ ಅಬ್ಜ ಡಾಲರ್‌ಗಳ ನಿಧಿಯನ್ನು ಸಹ ತಡೆಯುವ ಸಾಧ್ಯತೆ!
ವಿಶ್ವವಿದ್ಯಾಲಯದ ಈ ಅಪಾಯಕಾರಿ ದೃಷ್ಟಿಕೋನವು ಅಮೆರಿಕದ ಕಾನೂನುಗಳನ್ನು ಉಲ್ಲಂಘಿಸುತ್ತದೆ ಎಂದು ಟ್ರಂಪ್ ಆಡಳಿತ ಹೇಳಿದೆ. ಸರಕಾರದಿಂದ ನೀಡಲಾಗುವ ೯ ಅಬ್ಜ ಡಾಲರ್‌ಗಳ ಮತ್ತೊಂದು ನಿಧಿಯನ್ನು ಸಹ ತಡೆಯುವ ಬಗ್ಗೆ ಚಿಂತನೆ ನಡೆದಿದೆ. ಹಾರ್ವರ್ಡ್‌ನಂತಹ ಪ್ರಸಿದ್ಧ ವಿಶ್ವವಿದ್ಯಾಲಯಗಳನ್ನು ಅಲ್ಲಿ ನಡೆಯುವ ಅಪಾಯಕಾರಿ ಕೃತ್ಯಗಳಿಗೆ ಹೊಣೆಗಾರರನ್ನಾಗಿ ಮಾಡಬೇಕು ಎಂದು ಟ್ರಂಪ್ ಆಡಳಿತ ನಂಬಿದೆ. ಅಂತಹ ವಿಶ್ವವಿದ್ಯಾಲಯಗಳು ನಿಷ್ಪಕ್ಷಪಾತವಾಗಿರದಿದ್ದಾಗ, ಅವುಗಳಿಗೆ ಸರಕಾರಿ ನಿಧಿ ನೀಡಬಾರದು.
ಟ್ರಂಪ್ ಆಡಳಿತದ ವಿರುದ್ಧ ಹಾರ್ವರ್ಡ್‌ನ ಪ್ರಾಧ್ಯಾಪಕರಿಂದ ಮೊಕದ್ದಮೆ !
ಹಾರ್ವರ್ಡ್ ವಿಶ್ವವಿದ್ಯಾಲಯದ ಕೆಲವು ಪ್ರಾಧ್ಯಾಪಕರು ಸಹ ಅಧ್ಯಕ್ಷ ಟ್ರಂಪ್ ಅವರ ವಿರುದ್ಧ ಮೊಕದ್ದಮೆ ದಾಖಲಿಸಿದ್ದಾರೆ. ಸರಕಾರಿ ನಿಧಿಯನ್ನು ತಡೆಹಿಡಿಯುವುದು ವಿಶ್ವವಿದ್ಯಾಲಯದ ಸ್ವಾಯತ್ತತೆಯ ಮೇಲಿನ ಆಕ್ರಮಣವಾಗಿದ್ದು, ಈ ಕ್ರಮವು ಸಂವಿಧಾನ ವಿರೋಧಿಯಾಗಿದೆ ಎಂದು ಪ್ರಾಧ್ಯಾಪಕರು ವಾದಿಸಿದ್ದಾರೆ. ಪ್ರಾಧ್ಯಾಪಕರ ೨ ಗುಂಪುಗಳು ಜಿಲ್ಲಾ ನ್ಯಾಯಾಲಯದಲ್ಲಿ ಟ್ರಂಪ್ ಆಡಳಿತದ ವಿರುದ್ಧ ಮೊಕದ್ದಮೆ ದಾಖಲಿಸಿವೆ. ವಿಶ್ವವಿದ್ಯಾಲಯದ ನಿಧಿಯನ್ನು ತಡೆಹಿಡಿಯುವುದು ಅಭಿವ್ಯಕ್ತಿ ಸ್ವಾತಂತ್ರ್ಯದ ಉಲ್ಲಂಘನೆಯಾಗಿದೆ ಎಂದು ಅದರಲ್ಲಿ ಹೇಳಲಾಗಿದೆ.
ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ಆಘಾತಕಾರಿ ಚಟುವಟಿಕೆಗಳು!
ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧದ ಸಮಯದಲ್ಲಿ ಹಾರ್ವರ್ಡ್‌ನಲ್ಲಿ ಅನೇಕ ಪ್ರತಿಭಟನೆಗಳನ್ನು ನಡೆಸಲಾಯಿತು. ಅವುಗಳಲ್ಲಿ ‘ಅಮೆರಿಕವು ಇಸ್ರೇಲ್‌ನೊಂದಿಗಿನ ಸ್ನೇಹವನ್ನು ಕಡಿದುಕೊಳ್ಳಬೇಕು’ ಎಂದು ಒತ್ತಾಯಿಸಲಾಯಿತು. ಈ ಪ್ರತಿಭಟನೆಗಳಲ್ಲಿ ಹಮಾಸ್‌ನನ್ನು ಬಹಿರಂಗವಾಗಿ ಬೆಂಬಲಿಸಲಾಯಿತು. ಕೆಲವು ಪ್ರತಿಭಟನೆಗಳಲ್ಲಿ ಹಮಾಸ್ ಇಸ್ರೇಲ್ ಮೇಲೆ ನಡೆಸಿದ ದಾಳಿಗಳನ್ನು ಸಮರ್ಥಿಸಿಕೊಳ್ಳಲಾಗಿತ್ತು. ಅಧ್ಯಕ್ಷ ಟ್ರಂಪ್ ಅಧಿಕಾರಕ್ಕೆ ಬಂದ ನಂತರ ಅಂತಹ ಅಂಶಗಳ ಮೇಲೆ ಕ್ರಮ ಕೈಗೊಳ್ಳಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಹಾರ್ವರ್ಡ್ ವಿಶ್ವವಿದ್ಯಾಲಯವು ವಿದ್ಯಾರ್ಥಿಗಳಿಗೆ ಪ್ರವೇಶ ನೀಡುವಾಗ ಯಹೂದಿಯೇತರ ಮತ್ತು ಅಲ್ಪಸಂಖ್ಯಾತರಿಗೆ ಆದ್ಯತೆ ನೀಡಿದೆ ಎಂಬ ಆರೋಪವೂ ಕೇಳಿಬಂದಿದೆ. ಅಂತಹ ತಾರತಮ್ಯದ ಕೃತ್ಯಗಳನ್ನು ನಿಲ್ಲಿಸಬೇಕು ಮತ್ತು ಪ್ರವೇಶಕ್ಕಾಗಿ ಸಂಪೂರ್ಣವಾಗಿ ಅರ್ಹತೆ ಆಧಾರಿತ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಬೇಕು ಎಂದು ಟ್ರಂಪ್ ಆಡಳಿತವು ಕರೆ ನೀಡಿದೆ.
ಸಂಪಾದಕೀಯ ನಿಲುವು
|