ತೃಣಮೂಲ ಕಾಂಗ್ರೆಸ್ ಸಂಸದ ಬಾಪಿ ಹಲದರ ಅವರಿಂದ ಬೆದರಿಕೆ
ಕೋಲಕಾತಾ/ನವದೆಹಲಿ – ವಕ್ಫ್ ಮಂಡಳಿಯ ಆಸ್ತಿಯ ಮೇಲೆ ಮುಸಲ್ಮಾನರಿಗೆ ಹಕ್ಕಿದೆ. ಯಾರಾದರೂ ಈ ಆಸ್ತಿಗಳ ಮೇಲೆ ಕಣ್ಣಿಟ್ಟರೆ, ಅವರ ಕಣ್ಣುಗಳನ್ನು ಕಿತ್ತುಹಾಕಲಾಗುವುದು. ಅವರ ಕೈಕಾಲುಗಳನ್ನು ಕೂಡ ಮುರಿಯಲಾಗುತ್ತದೆ ಎಂದು ಬಂಗಾಳದ ಮಥುರಾಪುರ ಕ್ಷೇತ್ರದ ತೃಣಮೂಲ ಕಾಂಗ್ರೆಸ್ ಸಂಸದ ಬಾಪಿ ಹಲದರ ಸಭೆಯಲ್ಲಿ ಬೆದರಿಕೆ ಒಡ್ಡಿದ್ದಾರೆ. ‘ರಾಜ್ಯದ ವಕ್ಫ್ ಮಂಡಳಿಯ ಆಸ್ತಿಗಳನ್ನು ರಕ್ಷಿಸುವುದು ನನ್ನ ಮತ್ತು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಜವಾಬ್ದಾರಿಯಾಗಿದೆ’ ಎಂದೂ ಅವರು ಹೇಳಿದ್ದಾರೆ.
ಹೇಳಿಕೆಯನ್ನು ತಪ್ಪು ಎಂದು ಹೇಳಿದ ‘ಜಮಿಯತ್ ಉಲೇಮಾ-ಎ-ಹಿಂದ್’ !

ಜಮಿಯತ್ ಉಲೇಮಾ-ಎ-ಹಿಂದ್‌ನ ಕಾರ್ಯದರ್ಶಿ ಮೌಲಾನಾ ನಿಯಾಜ್ ಫಾರೂಕಿ ಸಂಸದ ಹಲದರ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅವರು ಮಾತನಾಡಿ, ಅವರು ಸರಿಯಾದ ಭಾಷೆಯನ್ನು ಬಳಸಬೇಕು. ಕಣ್ಣುಗಳನ್ನು ಕಿತ್ತುಹಾಕುವುದರ ಅರ್ಥವೇನು? ಹಾಗೆ ಮಾಡಲು ಯಾರಿಗೂ ಹಕ್ಕಿಲ್ಲ. ಅವರು ಹಾಗೆ ಹೇಳಿದ್ದರೆ, ಅದು ಸಂಪೂರ್ಣವಾಗಿ ತಪ್ಪು. ಬಂಗಾಳದ ಮುರ್ಷಿದಾಬಾದ್‌ನಲ್ಲಿ ವಕ್ಫ್ ಕಾನೂನಿನ ವಿರುದ್ಧ ನಡೆದ ಹಿಂಸಾಚಾರಕ್ಕೆ ಅಲ್ಲಿನ ಸರಕಾರವೇ ಹೊಣೆಯಾಗಿದೆ. ಎಲ್ಲಿಯಾದರೂ ಪ್ರತಿಭಟನೆ ನಡೆದರೆ, ಅದು ಶಾಂತಿಯುತವಾಗಿ ನಡೆಯುವಂತೆ ನೋಡಿಕೊಳ್ಳುವುದು ಸರಕಾರದ ಜವಾಬ್ದಾರಿಯಾಗಿದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇವರು ಜವಾಬ್ದಾರರಾಗಿದ್ದಾರೆ. ಈ ಕಾರಣದಿಂದಲೇ ಅಲ್ಲಿ ಕೇಂದ್ರ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ, ಎಂದು ಹೇಳಿದೆ.
ಸಂಪಾದಕೀಯ ನಿಲುವು
|