|
ನವದೆಹಲಿ – ಭಾರತೀಯ ಸೇನಾ ಮುಖ್ಯಸ್ಥರು, ಚೀನಾ ಭಾರತದ ಗಡಿಯೊಳಗೆ ನುಗ್ಗಿದೆ. ಎಂದು ಹೇಳಿದ್ದಾರೆ ಎಂದು ಕಾಂಗ್ರೆಸ್ ನಾಯಕ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ ಗಾಂಧಿ ದಾವೆ ಮಾಡಿದ್ದರು. ಈ ಕುರಿತಾದ ಪ್ರಶ್ನೆಗೆ ಉತ್ತರಿಸಿದ ಸೇನಾ ಮುಖ್ಯಸ್ಥ ಉಪೇಂದ್ರ ದ್ವಿವೇದಿ, “ಸೇನೆಯನ್ನು ರಾಜಕೀಯಕ್ಕೆ ಎಳೆಯಬಾರದು.” ಎಂದು ಹೇಳಿದರು. ರಾಹುಲ ಗಾಂಧಿಯವರ ಹೇಳಿಕೆಯನ್ನು ಈ ಮೊದಲೇ ರಕ್ಷಣಾ ಸಚಿವ ರಾಜನಾಥ ಸಿಂಗ ತಿರಸ್ಕರಿಸಿದ್ದರು.
ಸೇನಾ ಮುಖ್ಯಸ್ಥ ದ್ವಿವೇದಿ ಮಾತನಾಡುತ್ತಾ,
1. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ರಾಜಕೀಯ ಉತ್ತರವನ್ನು ನೀಡಿದ್ದಾರೆ ಮತ್ತು ರಕ್ಷಣಾ ಸಚಿವಾಲಯವು ಅದರ ಬಗ್ಗೆ ಮಾಹಿತಿಯನ್ನು ನೀಡಿದೆ; ಆದರೆ ಸೈನ್ಯವು ರಾಜಕೀಯದಲ್ಲಿ ಭಾಗಿಯಾಗಬಾರದು, ಇದಕ್ಕಾಗಿ ನಾನು ಪ್ರಯತ್ನಿಸುವುದು ಮತ್ತು ಅದನ್ನು ಕಾಯ್ದುಕೊಳ್ಳುವುದು ಮಹತ್ವದ್ದಾಗಿದೆ’, ಎಂದು ನನಗೆ ಅನಿಸುತ್ತದೆ.
2. ಕಾಲಾನುಸಾರ ನಾವು ಅಭಿವೃದ್ಧಿ ಹೊಂದಿದ್ದೇವೆ ಮತ್ತು ಚೀನಾ ಕೂಡ ಅಭಿವೃದ್ಧಿ ಸಾಧಿಸಿದೆ. ನಿಮ್ಮಲ್ಲಿ ಹೆಚ್ಚಿನ ಸೈನಿಕರು ಇದ್ದಾಗ, ನೀವು ಅವರಿಗೆ ವಸತಿ ಒದಗಿಸಬೇಕು. ಅವರಿಗಾಗಿ ಸಾರಿಗೆ ಸೌಲಭ್ಯದ ಆವಶ್ಯಕತೆಯಿದೆ.
3. ನಾವು ಯಾವುದೇ ವಿವಾದಾತ್ಮಕ ಪ್ರದೇಶವನ್ನು ಪ್ರವೇಶಿಸಿದ್ದೇವೆ ಎಂದಲ್ಲ, ನಾವು ಎಲ್ಲಿದ್ದೇವೆಯೋ, ಅಲ್ಲಿ ನಮ್ಮನ್ನು ನಾವು ದೃಢವಾಗಿ ಮತ್ತು ಆರಾಮದಾಯಕವನ್ನಾಗಿಸಿಕೊಂಡಿದ್ದೇವೆ.
4. ನಾವು ಚೀನಾ ಜೊತೆಗಿನ ಮಾತುಕತೆಯ ಹಾದಿಯಲ್ಲಿ ಮುಂದುವರೆದಿದ್ದೇವೆ. ಭಾರತ ಮತ್ತು ಚೀನಾ ನಡುವಿನ ಮಾತುಕತೆಯ ಮೂಲಕ ಎಲ್ಲಾ ಸಂದೇಹಗಳು ನಿವಾರಣೆಯಾಗುವುದು.
5. ಭಾರತದ ‘ಚಿಕನ್ ನೆಕ್’ (ಈಶಾನ್ಯ ಭಾರತವನ್ನು ಸಂಪರ್ಕಿಸುವ ಮಾರ್ಗ) ಪ್ರದೇಶದ ಬಳಿಯ ಬಾಂಗ್ಲಾದೇಶದ ಪ್ರದೇಶದಲ್ಲಿ ಪಾಕಿಸ್ತಾನಿ ಸೇನೆ ಮತ್ತು ಐ.ಎಸ್.ಐ. ಅಧಿಕಾರಿಯ ಉಪಸ್ಥಿತಿಯ ಬಗ್ಗೆ ಕಳವಳವಿದೆ. ಭಾರತ ವಿರೋಧಿ ಶಕ್ತಿಗಳು ಆ ಭೂಮಿಯನ್ನು ಬಳಸಿಕೊಂಡು ಭಾರತಕ್ಕೆ ಭಯೋತ್ಪಾದಕರನ್ನು ಕಳುಹಿಸದಂತೆ ನೋಡಿಕೊಳ್ಳಬೇಕು.
6. ಈಗ ನಾವು ವಿದೇಶದಿಂದ ಶಸ್ತ್ರಾಸ್ತ್ರಗಳನ್ನು ಖರೀದಿಸುತ್ತಿದ್ದೇವೆ; ಏಕೆಂದರೆ ಈಗ ಶಸ್ತ್ರಾಸ್ತ್ರ ತಯಾರಿಕಾ ಸಂಸ್ಥೆಗಳಿಗೆ ಸುಲಭವಾಗಿ ಪರವಾನಗಿ ಸಿಗುತ್ತಿದೆ ಮತ್ತು ರಿಯಾಯಿತಿಗಳು ಸಿಗುತ್ತಿವೆ. ಭಾರತ ಯಾವಾಗಲೂ ಮೊದಲು ಮಾತುಕತೆಯ ಮಾರ್ಗವನ್ನು ಹುಡುಕುತ್ತದೆ; ಆದರೆ ಅಗತ್ಯ ಬಿದ್ದಾಗ, ನಾವು ಯುದ್ಧದಿಂದ ಹಿಂದಕ್ಕೆ ಸರಿಯುವುದಿಲ್ಲ.
ಸಂಪಾದಕೀಯ ನಿಲುವುಸುಳ್ಳು ಹೇಳಿಕೆಗಳನ್ನು ನೀಡಿ, ಭಾರತೀಯ ಸೇನೆಯ ಅವಮಾನ ಮಾಡಿದ್ದಕ್ಕಾಗಿ ರಾಹುಲ ಗಾಂಧಿ ವಿರುದ್ಧ ಪ್ರಕರಣ ದಾಖಲಿಸಿ ಅವರಿಗೆ ಶಿಕ್ಷೆಯಾಗುವಂತೆ ಪ್ರಯತ್ನಿಸುವುದು ಆವಶ್ಯಕವಾಗಿದೆ ! |