
ಬೆಂಗಳೂರು – ಕರ್ನಾಟಕ ಕಾಂಗ್ರೆಸ್ ರಾಜ್ಯ ಸಮಿತಿಯ ಅಧ್ಯಕ್ಷ ಮತ್ತು ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಇವರು ಇತ್ತೀಚಿಗೆ ಸದ್ಗುರು ಜಗ್ಗಿ ವಾಸುದೇವ್ ಇವರ ‘ಈಶಾ ಫೌಂಡೇಶನ್’ ಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಅವರು ತಮ್ಮ ‘ಎಕ್ಸ್’ ನಲ್ಲಿ ಈ ಕಾರ್ಯಕ್ರಮದ ಕೆಲವು ಚಿತ್ರಗಳು ಪೋಸ್ಟ್ ಮಾಡಿದ್ದರು. ಅದರಿಂದ ಅಖಿಲ ಭಾರತೀಯ ಕಾಂಗ್ರೆಸ್ ಸಮಿತಿಯ ಸಚಿವ ಪಿ.ವಿ. ಮೋಹನ್ ಇವರು ಟೀಕೆಸಿದ್ದಾರೆ. ಪಿ.ವಿ. ಮೋಹನ ಇವರು ಅವರ ಪೋಸ್ಟ್‌ಅನ್ನು ಡಿ.ಕೆ .ಶಿವಕುಮಾರ ಇವರನ್ನು ಟ್ಯಾಗ್ ಮಾಡಿ ಅದರಲ್ಲಿ, ಶಿವಕುಮಾರ ಇವರು ಜಾತ್ಯತೀತ ಪಕ್ಷದ ನಾಯಕರಾಗಿರುವಾಗ ಅವರು ರಾಹುಲ ಗಾಂಧಿಯವರನ್ನು ಟೀಕಿಸುವ ವ್ಯಕ್ತಿಗೆ(ಸದ್ಗುರು ಜಗ್ಗಿ ವಾಸುದೇವ ಇವರಿಗೆ) ಹೇಗೆ ಆಭಾರ ಮನ್ನಿಸುತ್ತಾರೆ ?’, ಎಂದು ಬರೆದಿದ್ದಾರೆ.
೧. ಡಿ.ಕೆ. ಶಿವಕುಮಾರ ಇವರು ‘ಎಕ್ಸ್’ ನಲ್ಲಿ ಮಾಡಿರುವ ಪೋಸ್ಟನಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಕೊಯಿಮತ್ತೂರ್ ಇಲ್ಲಿಯ ಈಶಾ ಯೋಗ ಕೇಂದ್ರಕ್ಕೆ ಆಮಂತ್ರಣ ಬಂದಿರುವ ಬಗ್ಗೆ ಸದ್ಗುರುಗಳ ಆಭಾರ ಮನ್ನಿಸಿದ್ದರು. ಇದರಲ್ಲಿ ಅವರು ಅಲ್ಲಿಯ ಅನುಭವವನ್ನು ಬರೆದಿದ್ದರೂ ಮತ್ತು ಆಮಂತ್ರಣ ಪತ್ರದ ಛಾಯಾಚಿತ್ರ ಪ್ರಸಾರ ಮಾಡಿದ್ದರು. ಈ ಕಾರ್ಯಕ್ರಮದಲ್ಲಿ ಡಿ.ಕೆ. ಶಿವಕುಮಾರ ಇವರು ದೇಶದ ಗೃಹ ಸಚಿವ ಅಮಿತ ಶಹಾ ಇವರ ಜೊತೆಗೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
೨. ಪಿ.ವಿ. ಮೋಹನ್ ಇವರು, ಜಗ್ಗಿ ವಾಸುದೇವ ಮತ್ತು ಈಶಾ ಫೌಂಡೇಶನ್ ಇವರ ವಿಚಾರಧಾರೆ ಭಾಜಪ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಾಗೆಯೇ ಇದೆ. (ಕಾಂಗ್ರೆಸ್ಸಿನ ವಿಚಿತ್ರ ಕಲ್ಪನೆ ! – ಸಂಪಾದಕರು)
ನಾವು ಈ ವಿಚಾರಧಾರೆಗೆ ಸಂಪೂರ್ಣವಾಗಿ ವಿರುದ್ಧವಾಗಿದ್ದೇವೆ. ರಾಹುಲ ಗಾಂಧಿ ಇವರು ಕೂಡ ಸಂಘದ ವಿಚಾರಧಾರೆಯ ಪಾಲನೆ ಮಾಡುವ ಯಾರಾದರೂ ಪಕ್ಷವನ್ನು ತೊರೆಯಬಹುದು, ಎಂದು ಅನೇಕ ಬಾರಿ ಹೇಳಿದ್ದಾರೆ, ಅವರು ಡಿ.ಕೆ. ಶಿವಕುಮಾರ ಅಲ್ಲಿ ಹೋಗಿರುವುದರಿಂದ ಅವರಿಗೆ ಯಾವುದೇ ಅಡಚಣೆ ಇಲ್ಲ; ಆದರೆ ಅವರ ಕೃತಿಯಿಂದ ಪಕ್ಷದ ಮೌಲ್ಯದ ಪ್ರತಿಬಿಂಬ ಕಾಣಬೇಕಿತ್ತು, ಎಂದು ಹೇಳಿದರು.
ಸಂಪಾದಕೀಯ ನಿಲುವುಡಿ.ಕೆ. ಶಿವಕುಮಾರ ಮಸೀದಿಗೆ ಹೋಗಿದ್ದರೆ ಅಥವಾ ಮುಸಲ್ಮಾನರ ಯಾವುದಾದರು ಕಟ್ಟರವಾದಿ ಸಂಘಟನೆಯ ಕಾರ್ಯಕ್ರಮಕ್ಕೆ ಉಪಸ್ಥಿತರಾಗಿದ್ದರೆ, ಅವರ ಪಕ್ಷದಲ್ಲಿನ ನಾಯಕರು ಅವರನ್ನು ಗುರಿ ಮಾಡುತ್ತಿದ್ದರೇ ? ಜಾತ್ಯತೀತತೆ ಎಂದರೆ ಹಿಂದೂ ದ್ವೇಷದ ವಿಷ ಕಾಂಗ್ರೆಸ್ಸಿನಲ್ಲಿ ಎಷ್ಟು ಆಳವಾಗಿ ಬೇರೂರಿದೆ, ಇದೇ ಇದರಿಂದ ಗಮನಕ್ಕೆ ಬರುತ್ತದೆ ! |