Sanatan Prabhat Exclusive : ಹಿಂದೂ ರಾಷ್ಟ್ರ ಸ್ಥಾಪನೆಯಾಗಿ ನೋಟುಗಳ ಮೇಲೆ ಶ್ರೀರಾಮನ ಚಿತ್ರ ಮುದ್ರಿಸಲಾಗುವುದು !

ಮಹಂತ ಚೇತನ ಗಿರಿ ಮಹಾರಾಜ್ ತಮ್ಮ ತಲೆಯ ಮೇಲೆ ಅನೇಕ ರುದ್ರಾಕ್ಷಿಗಳನ್ನು ಧರಿಸಿದ್ದಾರೆ. ಇದರ ಬಗ್ಗೆ ಅವರನ್ನು ಕೇಳಿದಾಗ ಅವರು, ‘ರುದ್ರಾಕ್ಷಿಗಳು ಭಗವಾನ್ ಶಿವನ ಕಣ್ಣೀರಿನಿಂದ ನಿರ್ಮಾಣವಾಗಿವೆ.

ಕುಂಭ ಕ್ಷೇತ್ರದಲ್ಲಿ ಶೇಕಡ ೭೦ ಕ್ಕಿಂತಲು ಹೆಚ್ಚಿನ ಶಿಬಿರಗಳ ಪ್ರಯಾಣ !

ಕುಂಭಕ್ಷೇತ್ರದಿಂದ ನಾಗಾ ಸಾಧುಗಳು, ಅಖಾಡಾಗಳು, ಆಧ್ಯಾತ್ಮಿಕ ಸಂಸ್ಥೆ ಇವುಗಳ ಶೇಕಡ ೭೦ ಕ್ಕಿಂತಲೂ ಹೆಚ್ಚಿನ ಶಿಬಿರಗಳು ಪ್ರಯಾಣ ಬೆಳೆಸಿದ್ದಾರೆ. ಆದ್ದರಿಂದ ಕುಂಭಕ್ಷೇತ್ರದಲ್ಲಿ ಭಕ್ತರ ಗದ್ದಲ ಕಡಿಮೆ ಆಗಿದೆ.

ಮಹಾಕುಂಭದ ಸಮಯದಲ್ಲಿ ೫೧ ಕೋಟಿ ಭಕ್ತರಿಂದ ಸಂಗಮದಲ್ಲಿ ಸ್ನಾನ !

ಫೆಬ್ರುವರಿ ೧೫ ರಂದು ಮಹಾಕುಂಭದ ೩೪ ನೆ ದಿನವಾಗಿದೆ. ಶನಿವಾರ ಮತ್ತು ಫೆಬ್ರುವರಿ ೧೬ ಭಾನುವಾರ ಇರುವುದರಿಂದ ತ್ರಿವೇಣಿ ಸಂಗಮದಲ್ಲಿ ಭಕ್ತರ ದಟ್ಟಣೆ ಹೆಚ್ಚಾಗಿದೆ. ನಗರದಲ್ಲಿ ಮತ್ತೆ ಸಾರಿಗೆ ದಟ್ಟಣೆ ನಿರ್ಮಾಣವಾಗಿದೆ.

ಅಕ್ಷಯವಟ ಮತ್ತು ಲೇಟ್ ಹನುಮಾನ ಮಂದಿರ ಈ ಪ್ರಯಾಗರಾಜದಲ್ಲಿನ ಧಾರ್ಮಿಕ ಸ್ಥಳಗಳಿಗೆ ಭಕ್ತರ ಮಿತಿಮೀರಿದ ದಂಡು !

ಭಕ್ತರು ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿ ಅಕ್ಷಯವಟ ಮತ್ತು ಲೇಟೆ ಹನುಮಾನ ಈ ಪ್ರಸಿದ್ಧ ಮತ್ತು ಜಾಗೃತ ಧಾರ್ಮಿಕ ಸ್ಥಳದ ದರ್ಶನಕ್ಕಾಗಿ ಹೋಗುತ್ತಿದ್ದಾರೆ.

ಪ್ರಧಾನಮಂತ್ರಿ ನರೇಂದ್ರ ಮೋದಿಯ ನಂತರ ಅನೇಕ ಗಣ್ಯರಿಂದ ಸಂಗಮ ಸ್ನಾನ !

ತ್ರಿವೇಣಿ ಸಂಗಮದಲ್ಲಿ ಗಣ್ಯ ವ್ಯಕ್ತಿಗಳ ಸ್ನಾನಕ್ಕಾಗಿ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಗಣ್ಯ ವ್ಯಕ್ತಿಗಳು ಸಂಗಮಕ್ಕೆ ಬರುವಾಗ ಉತ್ತರ ಪ್ರದೇಶ ಸರಕಾರದಿಂದ ಸುರಕ್ಷೆ ನೀಡಲಾಗಿದೆ. ಸಂಗಮದಲ್ಲಿ ಸ್ನಾನ ಆದ ನಂತರ ಅಲ್ಲಿಂದ ದೋಣಿಯ ಮೂಲಕ ಅಕ್ಷಯವಟ ಮತ್ತು ಲೇಟೆ ಹನುಮಾನ ಮಂದಿರ ಇಲ್ಲಿಗೆ ಹೋದರು

HJS Maha Kumbh Display : ಮಹಾಕುಂಭ ಪರ್ವದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಪ್ರದರ್ಶನಿ ಮೆಚ್ಚಿದ ಯುವಕರು; ಕಾರ್ಯದಲ್ಲಿ ಪಾಲ್ಗೊಳ್ಳುವ ಸಿದ್ಧತೆ !

ಹಿಂದೂ ಧರ್ಮದ ಮೇಲಾಗುತ್ತಿರುವ ಅನೇಕ ಆಘಾತ, ಹಿಂದೂ ರಾಷ್ಟ್ರದ ಪರಿಕಲ್ಪನೆ, ಧರ್ಮ ಶಿಕ್ಷಣ ಮತ್ತು ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಹಿಂದೂ ಜನಜಾಗೃತಿ ಸಮಿತಿಯು ಆರಂಭಿಸಿರುವ ಕಾರ್ಯದ ಬಗ್ಗೆ ಮಹಾಕುಂಭ ಪರ್ವದಲ್ಲಿ ಸಮಿತಿಯು ಏರ್ಪಡಿಸಿದ ಗ್ರಂಥ ಮತ್ತು ಫಲಕ ಪ್ರದರ್ಶನ ಯುವಕರಿಗೆ ಮೆಚ್ಚುಗೆಯಾಗಿದೆ.

SP MP Statement : ‘ಮಹಾಕುಂಭದಲ್ಲಿನ ಜನ ದಟ್ಟಣೆ ನೋಡಿ ನರಕವು ಖಾಲಿಯಾಗುತ್ತಿದ್ದು, ಸ್ವರ್ಗ ಹೌಸಫುಲ್ ಆಗಬಹುದು’ – ಸಮಾಜವಾದಿ ಪಕ್ಷದ ಸಂಸದ ಅಫಝಲ ಅನ್ಸಾರಿ

ಹಿಂದೂಗಳ ಧಾರ್ಮಿಕ ಆಚರಣೆಗಳ ಬಗ್ಗೆ ಇಂತಹ ಹೇಳಿಕೆಗಳನ್ನು ನೀಡಿದ್ದಕ್ಕಾಗಿ ಅನ್ಸಾರಿ ವಿರುದ್ಧ ಉತ್ತರ ಪ್ರದೇಶ ಸರಕಾರ ಪ್ರಕರಣ ದಾಖಲಿಸಿ ಬಂಧಿಸಬೇಕು!

Mahakumbh Mela Creates History! : ಇತಿಹಾಸ ಸೃಷ್ಟಿಸಿದ ಮಹಾಕುಂಭ ಮೇಳ!

ಇಲ್ಲಿ ಜನವರಿ 13 ರಿಂದ ಪ್ರಾರಂಭವಾಗಿ ವಿಶ್ವದ ಅತಿದೊಡ್ಡ ಉತ್ಸವವಾದ ಮಹಾಕುಂಭ ಮೇಳದಲ್ಲಿ ಫೆಬ್ರವರಿ 14 ರವರೆಗೆ ದೇಶ-ವಿದೇಶಗಳಿಂದ 50 ಕೋಟಿ ಭಕ್ತರು ಪವಿತ್ರ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿದ್ದಾರೆ.

ಮಹಾಕುಂಭಕ್ಷೇತ್ರದಿಂದ ಹೊರಹೋಗುವ ಕಲ್ಪವಾಸಿಗಳಿಗೆ ತಡೆಯಬಾರದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇವರ ಆದೇಶ !

ಮುಖ್ಯಮಂತ್ರಿ ಯೋಗೀ ಆದಿತ್ಯನಾಥ್ ಇವರ ಆದೇಶದ ನಂತರ ಪ್ರಯಾಗರಾಜ ಮೇಳ ಪ್ರಾಧೀಕರಣ ಕಾರ್ಯಾಲಯದ ಮೂಲಕ ಮಹಾಕುಂಭ ಕ್ಷೇತ್ರದಲ್ಲಿ ಹಾಕಲಾಗಿರುವ ಡಿಜಿಟಲ್ ಫಲಕದ ಮೇಲೆ ಕಲ್ಪವಾಸಿ ಮತ್ತು ಅಖಾಡಾದ ಸಾಧುಗಳಿಗೆ ಹೊರಗೆ ಹೋಗಲು ಸಹಾಯ ಮಾಡುವ ಸೂಚನೆ ನೀಡಿದ್ದಾರೆ.

ಗುರುಗಳು ಮತ್ತು ಸಂತರ ಮಾರ್ಗದರ್ಶನದಲ್ಲಿ ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಲು ಸಂಕಲ್ಪ!

ದೇವರನ್ನು ಮೆಚ್ಚಿಸಿ ವರವನ್ನು ಪಡೆಯುವುದು ಮತ್ತು ವರವನ್ನು ಸನಾತನಿಗಳಿಗಾಗಿ, ರಾಷ್ಟ್ರ ಮತ್ತು ಧರ್ಮದ ಒಳಿತಿಗಾಗಿ ಬಳಸುವುದು ಸಾಧುಗಳ ಕರ್ತವ್ಯವಾಗಿದೆ. ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಲು ಎಲ್ಲಾ ಸಂತರು ಒಗ್ಗೂಡಬೇಕು.