ನವದೆಹಲಿ – ಪ್ರಯಾಗರಾಜ್ ಮಹಾಕುಂಭದಲ್ಲಿ ಕಾಲ್ತುಳಿತದಲ್ಲಿ ಅನೇಕ ಜನರು ಸಾವನ್ನಪ್ಪಿದ್ದಾರೆ ಮತ್ತು ಅನೇಕರು ಗಾಯಗೊಂಡಿದ್ದಾರೆ ಎಂಬ ಸುದ್ದಿ ಅತ್ಯಂತ ದುಃಖಕರವಾಗಿದೆ. ಮೃತರ ಕುಟುಂಬಗಳಿಗೆ ನನ್ನ ಮನಃಪೂರ್ವಕ ಸಂತಾಪವನ್ನು ವ್ಯಕ್ತಪಡಿಸುತ್ತೇನೆ ಮತ್ತು ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಆಶಿಸುತ್ತೇನೆ. ಈ ದುರಂತ ಘಟನೆಗೆ ದುರಾಡಳಿತ ಮತ್ತು ಆಡಳಿತವು ಸಾಮಾನ್ಯ ಭಕ್ತರಿಗಿಂತ ಗಣ್ಯರ (ವಿಐಪಿ) ಚಲನವಲನಗಳ ಮೇಲೆ ವಿಶೇಷ ಗಮನ ಹರಿಸಿದ್ದರಿಂದ ಉಂಟಾಗಿದೆ. ಮಹಾಕುಂಭವು ಇನ್ನೂ ಹಲವು ದಿನಗಳವರೆಗೆ ಮುಂದುವರಿಯುತ್ತದೆ ಮತ್ತು ಇನ್ನೂ ಅನೇಕ ಮಹಾ ಸ್ನಾನಗಳು ನಡೆಯುತ್ತವೆ. ಇಂದಿನಂತಹ ದುರದೃಷ್ಟಕರ ಘಟನೆ ಮತ್ತೆ ಸಂಭವಿಸಬಾರದು; ಆದ್ದರಿಂದ, ಸರಕಾರವು ವ್ಯವಸ್ಥೆಯನ್ನು ಸುಧಾರಿಸಬೇಕು. ‘ವಿಐಪಿ ಸಂಸ್ಕೃತಿ’ಯನ್ನು ತಡೆಯಲು ಮತ್ತು ಸರಕಾರ ಸಾಮಾನ್ಯ ಭಕ್ತರ ಅಗತ್ಯಗಳನ್ನು ಪೂರೈಸಲು ಉತ್ತಮ ವ್ಯವಸ್ಥೆಗಳನ್ನು ಮಾಡಬೇಕು ಎಂದು ಕಾಂಗ್ರೆಸ್ ಸಂಸದ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ತಮ್ಮ ಪೋಸ್ಟ್‌ನಲ್ಲಿ ಆರೋಪಿಸಿದ್ದಾರೆ.
ಸಂಪಾದಕೀಯ ನಿಲುವುಅಮೃತಸ್ನಾನದ ಸಮಯದಲ್ಲಿ ಯಾವ ಗಣ್ಯರು ಬಂದರು ಮತ್ತು ಆಡಳಿತವು ಅವರಿಗೆ ಯಾವ ಸೌಲಭ್ಯಗಳನ್ನು ಒದಗಿಸಿತ್ತು ? ಅಮೃತಸ್ನಾನದ ಸಮಯದಲ್ಲಿ ಸಂಭವಿಸಿದ ಅಪಘಾತವು ದುರದೃಷ್ಟಕರವೇ ಆಗಿದೆ; ಆದರೆ, ಜನಪ್ರಿಯತೆ ಗಳಿಸುವ ಉದ್ದೇಶದಿಂದ ರಾಹುಲ ಗಾಂಧಿ ಇಂತಹ ಆಧಾರರಹಿತ ಆರೋಪಗಳನ್ನು ಮಾಡಬಾರದು ಎಂದು ಹಿಂದೂಗಳಿಗೆ ಅನಿಸುತ್ತದೆ ! |