‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಯು ಜನರ ಆಕಾಂಕ್ಷೆ ಮತ್ತು ಅಪೇಕ್ಷೆಗಳ ಪ್ರತಿಬಿಂಬವಾಗಿರುತ್ತದೆ. ಅದಕ್ಕಾಗಿ ಈ ಚುನಾವಣೆಗಳು ನಿಷ್ಪಕ್ಷ ಹಾಗೂ ಭಯಮುಕ್ತ ವಾತಾವರಣದಲ್ಲಾಗಬೇಕು. ಪ್ರತ್ಯಕ್ಷದಲ್ಲಿ ಮಾತ್ರ ಕಳೆದ ಅನೇಕ ವರ್ಷಗಳಿಂದ ವಿವಿಧ ಪ್ರಭಾವೀ ಗುಂಪುಗಳು ಚುನಾವಣೆಗಳಲ್ಲಿ ತಮ್ಮ ವಿಚಾರಗಳನ್ನು ಮುಂದಿಟ್ಟು ಜನರು ಮತದಾನ ಮಾಡುವಾಗ ತಮ್ಮ ವಿಶಿಷ್ಟ ಅಂಶಗಳಿಗೆ ಆದ್ಯತೆ ನೀಡಬೇಕೆಂದು ಪ್ರಯತ್ನಿಸುತ್ತವೆ. ದೇಶದಲ್ಲಿನ ಉದ್ಯಮಿಗಳು ಚುನಾವಣೆಯ ಸಮಯದಲ್ಲಿ ರಾಜಕೀಯ ಪಕ್ಷಗಳಿಗೆ ದೊಡ್ಡ ಪ್ರಮಾಣದಲ್ಲಿ ಹಣವನ್ನು ಪೂರೈಸುತ್ತಾರೆ. ಅದರ ಬದಲಿಗೆ ಆ ಪಕ್ಷ ಸರಕಾರ ನಿರ್ಮಿಸಿದರೆ ಅವರು ಅವರಿಗೆ ಅನುಕೂಲಕರ ನಿರ್ಣಯಗಳನ್ನು ತೆಗೆದುಕೊಳ್ಳಬೇಕು, ಎಂದು ಅವರ ಅಪೇಕ್ಷೆ ಇರುತ್ತದೆ. ಪ್ರಜಾಪ್ರಭುತ್ವವುಳ್ಳ ದೇಶಗಳಲ್ಲಿನ ಚುನಾವಣೆಗಳಲ್ಲಿ ಧನಬಲದ ಪ್ರಭಾವ ಹೆಚ್ಚುತ್ತಿರುವುದು ಚಿಂತೆಗೆ ಕಾರಣವಾದರೂ, ಎಷ್ಟರವರೆಗೆ ಇಂತಹ ಪ್ರಯತ್ನವು ವ್ಯವಸ್ಥೆಯ ಅಧೀನದಲ್ಲಿದ್ದು ಆಗುತ್ತದೆಯೋ, ಅಷ್ಟರ ವರೆಗೆ ಅವರನ್ನು ವಿರೋಧಿಸಲು ಆಗುವುದಿಲ್ಲ; ಆದರೆ ಕಳೆದ ಕೆಲವು ವರ್ಷಗಳಿಂದ ಅಂತಾರಾಷ್ಟ್ರೀಯ ಉದ್ಯಮಿ ಜಾರ್ಜ್ ಸೊರೋಸ್‌ರಂತಹ ಧನಿಕರು ಜಗತ್ತಿನಾದ್ಯಂತ ಪ್ರಜಾಪ್ರಭುತ್ವವುಳ್ಳ ದೇಶಗಳಲ್ಲಿ ತಮ್ಮ ವಿಚಾರಧಾರೆಯಿರುವ ಪಕ್ಷಗಳ ಸರಕಾರ ಬರಬೇಕೆಂದು ಪ್ರಯತ್ನಿಸುತ್ತಿದ್ದು ಅದರಿಂದ ಜಗತ್ತಿನಾದ್ಯಂತದ ಅನೇಕ ವಿಕಸನಶೀಲ ದೇಶಗಳಲ್ಲಿ ದೊಡ್ಡ ರಾಜಕೀಯ ಬದಲಾವಣೆಯಾಗಿದೆ. ಅನೇಕ ಸ್ಥಳಗಳಲ್ಲಿ ಸುಳ್ಳು ವಾರ್ತೆಗಳನ್ನು ಹಬ್ಬಿಸಿ ಜನಪ್ರಿಯ ಸರಕಾರಗಳನ್ನು ಕೆಳಗಿಳಿಸುವುದರಲ್ಲಿ ಯಶಸ್ವಿಯಾಗಿದ್ದಾರೆ. ಈಗ ಅಂತಹ ಪ್ರಯತ್ನ ದೊಡ್ಡ ಪ್ರಜಾಪ್ರಭುತ್ವವಿರುವ ದೇಶಗಳಲ್ಲಿಯೂ ನಡೆಯುತ್ತಿರುವುದು ಕಾಣಿಸುತ್ತಿದೆ.

೧. ಭಾರತ ಸರಕಾರವನ್ನು ಉರುಳಿಸಲು ಮಾಡಿದ ಪ್ರಯತ್ನ
ಭಾರತದಲ್ಲಿ ಇಂತಹ ಪ್ರಯತ್ನಗಳು ಹೊಸತೇನಲ್ಲ. ಮೋದಿ ಸರಕಾರ ಸಂಸತ್ತಿನಲ್ಲಿ ಮನ್ನಣೆ ನೀಡಿದ ಕಾನೂನಿನ ವಿರುದ್ಧ ಮುಖ್ಯವಾಗಿ ಪಂಜಾಬ್ ಮತ್ತು ಹರಿಯಾಣಾದ ರೈತರು ಆಂದೋಲನ ಮಾಡಿದ್ದರು. ಆಗಸ್ಟ್ ೨೦೨೦ ರಲ್ಲಿ ಆರಂಭವಾದ ಆಂದೋಲನ ಸುಮಾರು ೧೬ ತಿಂಗಳು ನಡೆದಿತ್ತು. ಸರಕಾರ ಕೃಷಿ ಕಾನೂನನ್ನು ಹಿಂಪಡೆದಾಗ ಆಂದೋಲನವನ್ನು ನಿಲ್ಲಿಸಲಾಯಿತು. ಈ ಅವಧಿಯಲ್ಲಿ ಸಾವಿರಾರು ರೈತರು ದೆಹಲಿಯ ರಸ್ತೆಗಳನ್ನು ತಡೆಹಿಡಿದು ಕುಳಿತಿದ್ದರು. ಕೊರೆಯುವ ಚಳಿಯಲ್ಲಿ ಅವರಿಗೆ ಬೆಚ್ಚಗಿನ ಗುಡಿಸಲುಗಳನ್ನು ನಿರ್ಮಿಸಲಾಗಿತ್ತು. ಅಲ್ಲಿ ವ್ಯಾಯಾಮ ಶಾಲೆ, ಮಸಾಜ್ ಸೆಂಟರ್ ಮತ್ತು ವಿವಿಧ ರೀತಿಯ ವ್ಯಂಜನಗಳನ್ನು ಪೂರೈಸಲಾಗಿತ್ತು. ಗಣರಾಜ್ಯೋತ್ಸವದ ದಿನ ದೆಹಲಿಯ ಗಡಿಯ ಹೊರಗೆ ಆಂದೋಲನ ಮಾಡುತ್ತಿದ್ದ ರೈತರಿಂದ ‘ಟ್ರಾಕ್ಟರ್ ಮೆರವಣಿಗೆ’ ಆಯೋಜಿಸಿ ಅದರಲ್ಲಿ ಹಿಂಸಾತ್ಮಕ ತಿರುವು ನಿರ್ಮಾಣವಾಗಬೇಕು ಹಾಗೂ ಈ ಹಿಂಸಾಚಾರದಲ್ಲಿ ದೊಡ್ಡ ಪ್ರಮಾಣದಲ್ಲಿ ಆಂದೋಲನಕಾರರ ಹತ್ಯೆಯಾಗಿ ಅಥವಾ ಗಾಯಗೊಂಡು ಅದರಿಂದ ಜಗತ್ತಿನಾದ್ಯಂತ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅವಮಾನವಾಗಬೇಕೆಂಬ ಉದ್ದೇಶದಿಂದ ಖಲಿಸ್ತಾನಿಗಳ ಸಹಾಯದಿಂದ ಒಂದು ‘ಟೂಲ್‌ಕಿಟ್’ (ಸರಕಾರದ ವಿರುದ್ಧ ಕಾರ್ಯಪದ್ಧತಿ) ತಯಾರಿಸಲಾಗಿತ್ತು. ಈ ಆಂದೋಲನದಲ್ಲಿ ಅಂತಾರಾಷ್ಟ್ರೀಯ ಪಾಪ್ ಗಾಯಕಿ ರಿಹಾನಾ, ಅಶ್ಲೀಲ ಚಲನಚಿತ್ರಗಳಲ್ಲಿ ನಟಿಸುವ ಮಿಯಾ ಖಲೀಫಾ ಇವರ ಜೊತೆಗೆ ಅನೇಕ ಕಲಾವಿದರು ಪಾಲ್ಗೊಂಡಿದ್ದರು. ಅದಕ್ಕೂ ಮೊದಲು ‘ಸಿಈ’ (ಪೌರತ್ವ ತಿದ್ದುಪಡಿ ಕಾನೂನು) ವಿರೋಧಿ ಆಂದೋಲನದಲ್ಲಿಯೂ ಇದೇ ದೃಶ್ಯ ಕಂಡುಬಂದಿತ್ತು. ಸಾವಿರಾರು ಜನರು ಚಳಿಯ ತೀವ್ರತೆಯನ್ನೂ ಲೆಕ್ಕಿಸದೆ ದೆಹಲಿ ಹಾಗೂ ಇನ್ನಿತರ ಮಹತ್ವದ ನಗರಗಳನ್ನು ತಡೆಗಟ್ಟಿ ಕುಳಿತಿದ್ದರು. ಜಮ್ಮು-ಕಾಶ್ಮೀರದಲ್ಲಿಯೂ ಕಲಮ್ ೩೭೦ ಅನ್ನು (ಜಮ್ಮು-ಕಾಶ್ಮೀರಕ್ಕೆ ವಿಶೇಷ ಅಧಿಕಾರವನ್ನು ನೀಡುವ ಕಲಮ್) ರದ್ದು ಪಡಿಸುವ ಮೊದಲು ಪ್ರತಿವರ್ಷ ಅನೇಕ ತಿಂಗಳು ಶಾಲೆಯ ಮಕ್ಕಳನ್ನು ಮುಂದಿಟ್ಟುಕೊಂಡು ಭದ್ರತಾ ದಳದ ಸೈನಿಕರ ಮೇಲೆ ಕಲ್ಲು ತೂರಲಾಗುತ್ತಿತ್ತು. ಇಷ್ಟು ದೊಡ್ಡ ಸಂಖ್ಯೆಯಲ್ಲಿ ಜನರು ಕೆಲಸ ಕಾರ್ಯವಿಲ್ಲದೆ ಇಷ್ಟು ಕಾಲ ಹೇಗೆ ಆಂದೋಲನದಲ್ಲಿ ಭಾಗವಹಿಸಬಹುದು ?, ಎನ್ನುವ ಪ್ರಶ್ನೆ ಬರುವುದು ಸ್ವಾಭಾವಿಕವಾಗಿದೆ. ಇದೇ ರೀತಿ ಜಗತ್ತಿನ ಇತರ ಪ್ರಜಾಪ್ರಭುತ್ವವುಳ್ಳ ದೇಶಗಳಲ್ಲಿನ ರಾಷ್ಟ್ರವಾದಿ ಹಾಗೂ ಬಲಪಂಥೀಯ ವಿಚಾರಶೈಲಿಯ ಸರಕಾರಗಳನ್ನು ಉರುಳಿಸಲು ಮಾಡಲಾಗುತ್ತದೆ.
೨. ಜಾರ್ಜ್ ಸೊರೋಸ್ ಇವರ ಪರಿಚಯ ಹಾಗೂ ಅವರ ಸಂಸ್ಥೆಯ ಧ್ಯೇಯ
ಹಂಗೇರಿ ಮೂಲದ ಜಾರ್ಜ್ ಸೊರೋಸ್ ಇವರು ಬುದಾಪೆಸ್ಟ್ ನಗರದಲ್ಲಿ ಒಂದು ಜ್ಯೂ ಕುಟುಂಬದಲ್ಲಿ ಜನಿಸಿದರು. ಆಗ ನಾಝೀ ಅತ್ಯಾಚಾರಗಳಿಂದ ಪ್ರಾಣ ಉಳಿಸಿಕೊಳ್ಳಲು ಸೊರೋಸ್ ಇವರ ತಂದೆ ತನ್ನ ಜ್ಯೂ ಪರಿಚಯವನ್ನು ಅಡಗಿಸಿ ಕ್ರೈಸ್ತನಾಗಿದ್ದೇನೆಂದು ಸೋಗು ಹಾಕಿದರು. ನಾಝೀ ಅತ್ಯಾಚಾರದ ಅನುಭವವಿರುವುದರಿಂದ ‘ರಾಷ್ಟ್ರವಾದ, ಅಂದರೆ ನಾಝೀವಾದ, ‘ಫ್ಯಾಸಿಝಮ್’ನತ್ತ (ಸರ್ವಾಧಿಕಾರದ ಕಡೆಗೆ) ವಾಲುವ ವಿಚಾರಶೈಲಿ’, ಎಂದು ಸೊರೋಸ್ ಇವರಿಗೆ ದೃಢವಾಗಿರಬೇಕು; ಆದ್ದರಿಂದಲೆ ‘ರಾಷ್ಟ್ರ-ರಾಜ್ಯ ಈ ಸಂಕಲ್ಪನೆಯನ್ನು ತಿರಸ್ಕರಿಸಿ ವೈಶ್ವಿಕ ಮಾನವೀ ಸಮಾಜ, ಮುಕ್ತ ಸಮಾಜವನ್ನು ರಚಿಸುವ ಧ್ಯೇಯ’ವನ್ನು ಅವರ ‘ಓಪನ್ ಸೊಸೈಟಿ ಫೌಂಡೇಶನ್’ ಇಟ್ಟುಕೊಂಡಿದೆ. ರಾಷ್ಟ್ರವಾದವನ್ನು ನಿರಾಕರಿಸುವುದು, ಕಾಲಕ್ಕೆ ಅನುಕೂಲವಾಗಿಲ್ಲ ಹಾಗೂ ಅವ್ಯಾವಹಾರಿಕವಾಗಿದೆ. ಯಾವುದೇ ವ್ಯಕ್ತಿ ಮೊದಲಿಗೆ ಒಂದು ರಾಷ್ಟ್ರದ ಘಟಕವಾಗಿದ್ದು ನಂತರ ಜಗತ್ತಿನ ನಾಗರಿಕ ಆಗಬಹುದು. ವ್ಯಕ್ತಿಯಿಂದ ಜಗತ್ತು ಇದರಲ್ಲಿನ ಈ ಮಹತ್ವದ ಕೊಂಡಿಯನ್ನು ನಿರಾಕರಿಸಿ ವೈಶ್ವಿಕ ಸಮಾಜವನ್ನು ರಚಿಸುವ ಈ ಪ್ರಯತ್ನ ಪ್ರತ್ಯಕ್ಷದಲ್ಲಿ ಅಸಾಧ್ಯವಾಗಿದೆ. ಯುರೋಪ್-ಅಮೇರಿಕಾದಲ್ಲಿನ ಹೆಚ್ಚುತ್ತಿರುವ ರಾಷ್ಟ್ರವಾದವನ್ನು ವಿರೋಧಿಸುವುದು ಹಾಗೂ ಭಾರತೀಯ ರಾಷ್ಟ್ರವಾದವನ್ನು ಆಕ್ಷೇಪಿಸುವುದೆಂದರೆ, ಮೂಲತಃ ಇವೆರಡರಲ್ಲಿನ ವ್ಯತ್ಯಾಸವನ್ನು ತಿಳಿದುಕೊಳ್ಳದಿರುವುದು ಎಂದಾಗಿದೆ. ಯುರೋಪ್-ಅಮೇರಿಕಾದಲ್ಲಿ ಹೆಚ್ಚುತ್ತಿರುವ ಮುಸಲ್ಮಾನ ಕಟ್ಟರವಾದಕ್ಕೆ ವಿರೋಧವೆಂದು ಅಲ್ಲಿ ರಾಷ್ಟ್ರವಾದಿ ವಿಚಾರಶೈಲಿ ಹೆಚ್ಚುತ್ತಿರುವುದು ಕಾಣಿಸುತ್ತಿದೆ; ಆದರೆ ಇದು ಪ್ರತಿಕ್ರಿಯಾತ್ಮಕ ರಾಷ್ಟ್ರವಾದವಾಗಿದೆ. ಭಾರತದ್ದು ಹಾಗಿಲ್ಲ. ‘ರಾಷ್ಟ್ರವಾದ’ ಈ ಸಂಕಲ್ಪನೆ ಇಲ್ಲಿನ ಸ್ವಾಭಾವಿಕ ಮೂಲಾಧಾರವಾಗಿದೆ. ಅದು ಹೊರಗಿನಿಂದ ಆಮದು ಮಾಡಿದ ಅಥವಾ ಪ್ರತಿಕ್ರಿಯೆಯೆಂದು ಮುಂದೆ ಬಂದಿರುವ ವಿಚಾರವಲ್ಲ, ಭಾರತದಲ್ಲಿ ವೇದಕಾಲದಿಂದಲೂ ಈ ಸಂಕಲ್ಪನೆಯ ವಿಚಾರ ಮಾಡಿರುವುದು ಕಾಣಿಸುತ್ತದೆ. ಅದರ ಗ್ರಂಥಗಳಲ್ಲಿರುವ ದಾಖಲೆ ಗಳು ಕಾಲದ ವಿವಿಧ ಹಂತಗಳಲ್ಲಿ ಕಂಡುಬರುತ್ತದೆ. ಇದು ಕಾಲದ ಜೊತೆಗೆ ವಿಕಸಿತವಾಗಿರುವ ವಿಶೇಷ ಭಾರತೀಯ ಸಂಕಲ್ಪನೆಯಾಗಿದೆ ಹಾಗೂ ಅದರ ಸ್ಪಷ್ಟ ಉಚ್ಚಾರ ಮತ್ತು ಆಗ್ರಹಪೂರ್ವಕ ಆಚರಿಸುವ ಸರಕಾರ ಇಂದು ಅಸ್ತಿತ್ವದಲ್ಲಿದೆ; ಆದರೆ ಇದನ್ನು ವೈಚಾರಿಕ ಪರಂಪರೆಯನ್ನು ತಿಳಿದುಕೊಳ್ಳಲು ಸೊರೋಸ್ ಇವರಿಗೆ ಅಥವಾ ಅವರ ಸಂಸ್ಥೆಗೆ ಆಸಕ್ತಿಯಿಲ್ಲ; ಆದ್ದರಿಂದಲೇ ಭಾರತದ ಪ್ರಧಾನಮಂತ್ರಿ ಮೋದಿ ಮತ್ತು ಅಮೇರಿಕಾದ ರಾಷ್ಟ್ರಾಧ್ಯಕ್ಷ ಡೋನಾಲ್ಡ್ ಟ್ರಂಪ್ ಇವರನ್ನು ತುಲನೆ ಮಾಡಲು ಅವರಿಗೆ ಅಯೋಗ್ಯವೆನಿಸುವುದಿಲ್ಲ. ಆದ್ದರಿಂದ ಟ್ರಂಪ್ ಇವರ ವಿರುದ್ಧ ಸೊರೋಸ್ ಇವರು ಮಾಡಿದಂತಹ ಕುತಂತ್ರಗಳನ್ನೇ ಮೋದಿಯವರ ವಿಷಯದಲ್ಲಿ ವಿವಿಧ ಅಂಶಗಳನ್ನು ಮುಂದಿಟ್ಟು ಅದನ್ನು ನಿಗದಿತ ಅವಧಿಯ ನಂತರ ಮಾಡುತ್ತಿರುವುದು ಕಾಣಿಸುತ್ತಿದೆ.
೩. ಕಳೆದ ೧೦ ವರ್ಷಗಳಲ್ಲಿ ಕ್ರೈಸ್ತ ಮಿಶನರಿ, ಮಾನವಾಧಿಕಾರದವರು ಹಾಗೂ ಪರಿಸರಪ್ರೇಮಿ ಸಂಸ್ಥೆಗಳಲ್ಲಿ ಮತ್ತು ಅವರ ನಿಧಿಯಲ್ಲಿ ಆಗಿರುವ ಗಣನೀಯ ಹೆಚ್ಚಳ
ನರೇಂದ್ರ ಮೋದಿ ಇವರು ೨೦೧೪ ರಲ್ಲಿ ಪ್ರಧಾನಮಂತ್ರಿ ಹುದ್ದೆಯ ಪ್ರಮಾಣವಚನ ಸ್ವೀಕರಿಸಿದಾಗ ದೇಶದಲ್ಲಿ ೩೦ ಲಕ್ಷಕ್ಕಿಂತ ಹೆಚ್ಚು ಸಾಮಾಜಿಕ ಸಂಘಟನೆಗಳಿದ್ದವು. ಜನಸಂಖ್ಯೆಯ ದೃಷ್ಟಿಯಲ್ಲಿ ನೋಡಿದರೆ, ಪ್ರತಿ ೫೦೦ ವ್ಯಕ್ತಿಗಳ ಹಿಂದೆ ಒಂದು ಸಮಾಜ ಸೇವಾ ಸಂಘಟನೆ ಈ ರೀತಿ ಇತ್ತು. ದೇಶದಲ್ಲಿನ ಸಮಾಜಸೇವಾ ಸಂಸ್ಥೆಗಳ ಪ್ರಮಾಣ ಅನೇಕ ಪ್ರದೇಶಗಳಲ್ಲಿ ಜನಸಂಖ್ಯೆಗನುಸಾರ ಇರುವ ಶಾಲೆ ಹಾಗೂ ಆಸ್ಪತ್ರೆಗಳ ಪ್ರಮಾಣಕ್ಕಿಂತ ಹೆಚ್ಚು ಪ್ರಮಾಣದಲ್ಲಿದೆ. ಜುಲೈ ೨೦೧೬ ರ ಅಂಕಿಅಂಶಗಳಿಗನುಸಾರ ೩೩ ಸಾವಿರಕ್ಕಿಂತ ಹೆಚ್ಚು ಸಂಸ್ಥೆಗಳಿಗೆ ವಿದೇಶದಿಂದ ದಾನ ಪಡೆಯುವ ಅನುಮತಿಯಿತ್ತು. ವಿದೇಶದಿಂದ ದಾನ ಪಡೆಯುವ ಪ್ರಮಾಣ ಕಳೆದ ದಶಕದಲ್ಲಿ ಬಹಳಷ್ಟು ಹೆಚ್ಚಳವಾಯಿತು. ವಿದೇಶಗಳಿಂದ ಬರುವ ದಾನದ ಅಂಕಿಅಂಶದ ಪ್ರಮಾಣವು ೨೦೦೪-೦೫ ರಲ್ಲಿ ೬ ಸಾವಿರ ೨೫೭ ಕೋಟಿ ರೂಪಾಯಿಗಳಷ್ಟಿತ್ತು. ಅದು ೨೦೧೧-೧೨ ರಲ್ಲಿ ಶೇ. ೮೫ ರಷ್ಟು ಹೆಚ್ಚಾಗಿ ೧೧ ಸಾವಿರದ ೫೪೮ ಕೋಟಿ ರೂಪಾಯಿಗಳಷ್ಟಾಯಿತು. ಸಂಸ್ಥೆಗಳ ಸಂಖ್ಯೆಯಲ್ಲಿಯೂ ಬಹಳಷ್ಟು ಹೆಚ್ಚಳ ಅಂದರೆ ೩೦ ಸಾವಿರದ ೩೨೧ ರಿಂದ ೪೧ ಸಾವಿರದ ೮೪೪ ರಷ್ಟಾಯಿತು. ೨೦೧೪-೧೫ ರಲ್ಲಿ ದಾನದ ಸಂಖ್ಯೆ ೨೨ ಸಾವಿರ ಕೋಟಿ ರೂಪಾಯಿಗಳಿಗಿಂತಲೂ ಹೆಚ್ಚಾಯಿತು. ವಿದೇಶಗಳಿಂದ ಬರುವ ಶೇ. ೮೦ ಕ್ಕಿಂತಲೂ ಹೆಚ್ಚು ದಾನ ದೆಹಲಿ, ಆಂಧ್ರಪ್ರದೇಶ, ಮಹಾರಾಷ್ಟ್ರ, ಕೇರಳ, ತಮಿಳುನಾಡು, ಕರ್ನಾಟಕ ಮತ್ತು ಬಂಗಾಲ ಈ ೬ ರಾಜ್ಯಗಳಲ್ಲಿನ ಸಂಸ್ಥೆಗಳಿಗೆ ಸಿಗುತ್ತದೆ.
ಅದರಲ್ಲಿ ದೊಡ್ಡ ಪಾಲು ಕ್ರೈಸ್ತ ಮಿಶನರಿ ಹಾಗೂ ಪರಿಸರಪ್ರೇಮಿ ಸಂಸ್ಥೆಗಳದ್ದಾಗಿದೆ. ಪ್ರಜಾಪ್ರಭುತ್ವ ಹಾಗೂ ಮಾನವಾಧಿಕಾರವಾದಿ ಸಂಘಟನೆಗಳಿಗೂ ದೊಡ್ಡ ಪ್ರಮಾಣದಲ್ಲಿ ವಿದೇಶಿ ದಾನ ಸಿಗುತ್ತಿತ್ತು. ಇದರ ಹಿಂದೆ ಜಾರ್ಜ್ ಸೊರೋಸ್ ಇವರ ‘ಓಪನ್ ಸೊಸೈಟಿ ಫೌಂಡೇಶನ್’ ಹಾಗೂ ತತ್ಸಮಾನ ಸಂಸ್ಥೆಗಳ ಜಾಲ ಕಾಣಿಸುತ್ತದೆ.
ಸೊರೋಸ್ ಒಮ್ಮೆಲೆ ಹಿಂದುತ್ವದ ವಿಚಾರಶೈಲಿಯನ್ನು ಕಿತ್ತೆಸೆಯಲು ಬಹಿರಂಗವಾಗಿ ಪ್ರಯತ್ನಿಸುತ್ತಿದ್ದಾರೆ, ಇನ್ನೊಂದೆಡೆ ‘ಹಿಂದೂಸ್ ಫಾರ್ ಹ್ಯೂಮನ್ ರೈಟ್ಸ್’ ಈ ಸಂಸ್ಥೆಯ ಮೂಲಕ ಜನಸಾಮಾನ್ಯರ ಮನಸ್ಸಿನಲ್ಲಿ ಸಂಶಯವನ್ನು ಹುಟ್ಟುಹಾಕುತ್ತಿದ್ದಾರೆ. ಪಾಶ್ಚಾತ್ಯ ದೇಶಗಳಲ್ಲಿ ಜಾತಿಭೇದವನ್ನು ವಂಶಭೇದಕ್ಕೆ ಸಮಾನವಾಗಿದೆಯೆಂಬ ಚಳುವಳಿ ನಡೆಸಿ ಅಲ್ಲಿ ಹಿಂದೂ ಸಮಾಜದಲ್ಲಿ ಭೇದಭಾವವನ್ನುಂಟು ಮಾಡಲು ಪ್ರಯತ್ನಿಸುತ್ತಾರೆ. ಈ ಸಂಘಟನೆಗಳು ಭಾರತದ ಸಿಕ್ಖರು ಮತ್ತು ದಕ್ಷಿಣ ಭಾರತೀಯರ ಪ್ರತ್ಯೇಕತಾವಾದವನ್ನು ಪೋಷಿಸುವ ಕಾರ್ಯ ಮಾಡುತ್ತವೆ. ಈ ಸಂಸ್ಥೆಗಳು, ಮಾಧ್ಯಮಗಳಿಗೆ ಹಾಗೂ ಸಮಾಜ ಮಾಧ್ಯಮಗಳಿಗೆ ದೊಡ್ಡ ಪ್ರಮಾಣದಲ್ಲಿ ಹಣ ಸುರಿದು ಜನರ ಮೇಲೆ ಪ್ರಭಾವ ಬೀರುತ್ತವೆ.
೪. ಜಾರ್ಜ್ ಸೊರೋಸ್ ಭಾರತದಲ್ಲಿ ಸರಕಾರವನ್ನು ಉರುಳಿಸಲು ಕಾಂಗ್ರೆಸ್ಸಿನ ಜೊತೆಗೆ ಮಾಡುತ್ತಿರುವ ಕಾರಸ್ಥಾನಗಳು
ಅವರ ವಿರುದ್ಧ ಯಾರಾದರೂ ಏನಾದರೂ ಹೇಳಿದರೆ, ‘ಮೋದಿ ಸರಕಾರಕ್ಕೆ ಪ್ರಜಾಪ್ರಭುತ್ವ ಬೇಕಾಗಿಲ್ಲ’, ಎಂದು ಪ್ರಗತಿಪರರು ಆರೋಪಿಸುತ್ತಾರೆ. ‘ಪ್ರಜಾಪ್ರಭುತ್ವದ ವಿರುದ್ಧ ಯಾರಾದರೂ ಧ್ವನಿಯೆತ್ತಿದರೆ, ಅವರನ್ನು ದೇಶದ್ರೋಹಿಗಳು, ‘ತುಕಡೆ ತುಕಡೆ ಗ್ಯಾಂಗ್’ನ ಮನುಷ್ಯ, ಎಂದು ಹೇಳುತ್ತಾ ಅವರನ್ನು ಮುಗಿಸಲು ಮೋದಿ ಸರಕಾರ ಪ್ರಯತ್ನಿಸುತ್ತದೆ’, ಎಂದು ಇವರು ಬೊಬ್ಬೆ ಹೊಡೆಯುತ್ತಾರೆ; ಆದರೆ ಜಾರ್ಜ್ ಸೊರೋಸ್ ಇವರೇ ಇದನ್ನು ಹೇಳಿದ್ದರಿಂದ ಜಗತ್ತಿನಾದ್ಯಂತ ರಾಷ್ಟ್ರವಾದಿ ವಿಚಾರಗಳ ಸರಕಾರಗಳನ್ನು ಉರುಳಿಸುವುದರ ಹಿಂದೆ ಅವರದ್ದೇ ಕೈವಾಡವಿರುವುದು ಸ್ಪಷ್ಟವಾಗಿದೆ; ಆದರೆ ಒಂದು ವಿಷಯವನ್ನು ಗಮನಿಸುವ ಆವಶ್ಯಕತೆಯಿದೆ, ‘ಜಾರ್ಜ್ ಸೊರೋಸ್ ಅಥವಾ ಅವರ ‘ಓಪನ್ ಸೊಸೈಟಿ ಫೌಂಡೇಶನ್’ಗೆ ಏನೆಲ್ಲ ಪ್ರಯತ್ನ ಮಾಡಲಿಕ್ಕಿದೆಯೋ, ಅವರು ಮಾಡುತ್ತಾ ಇರುವರೋ, ಅದರಲ್ಲಿ ಭಾರತದಲ್ಲಿನ ರಾಜಕೀಯ ಪಕ್ಷಗಳು ಯಾವ ಪಾತ್ರವನ್ನು ವಹಿಸುವವು’, ಎಂಬುದು ಮಹತ್ವದ್ದಾಗಿದೆ. ಕಾಂಗ್ರೆಸ್ ಒತ್ತಡದಲ್ಲಿರುವುದರಿಂದ ಜಾರ್ಜ್ ಸೊರೋಸ್ ಇವರ ‘ಓಪನ್ ಸೊಸೈಟಿ ಫೌಂಡೇಶನ್’ನ ಅದೃಶ್ಯ ಕೈವಾಡ ಹೊರಗೆ ಬರಲು ಆರಂಭವಾಗಿದೆ. ಕೊನೆಗೆ ಕಾಂಗ್ರೆಸ್ಸಿನ ಜಯರಾಮ ರಮೇಶ ಇವರಿಗೆ ಪತ್ರಕರ್ತರ ಪರಿಷತ್ತು ಕರೆದು ಈ ಮುಂದಿನ ವಿವರಣೆಯನ್ನು ನೀಡಬೇಕಾಯಿತು, ‘ನಾವು ಜಾರ್ಜ್ ಸೊರೋಸ್ ಇವರ ಅನುಯಾಯಿಗಳಲ್ಲ’ ಹಾಗೂ ‘ಜಾರ್ಜ್ ಸೊರೋಸ್ ಇವರು ಭಾರತದಲ್ಲಿನ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹಸ್ತಕ್ಷೇಪ ಮಾಡಬಾರದು’, ಎಂದು ಹೇಳಬೇಕಾಯಿತು.
ಈಗ ಹೇಗಾಗಿದೆಯೆಂದರೆ, ‘ಜಾರ್ಜ್ ಸೊರೋಸ್ ಇವರ ಶಕ್ತಿ ಎಷ್ಟಿದೆ ?, ಅವರು ಏನು ಮಾಡಬಲ್ಲರು’, ಎಂಬ ಬಗ್ಗೆ ನನಗೆ ಅನಿಸುತ್ತದೆ. ಕೆಲವೊಮ್ಮೆ ಜಾರ್ಜ್ ಸೊರೋಸ್ ಇವರನ್ನು ‘ಓವರ್‌ರೇಟೆಡ್’ (ಹೆಚ್ಚು ಮಹತ್ವ ನೀಡುವುದು) ಮಾಡಲಾಗುತ್ತದೆ, ಅದರಿಂದ ಅಪಾಯ ಖಚಿತವಾಗಿದೆ; ಆದರೆ ನರೇಂದ್ರ ಮೋದಿಯವರ ಸರಕಾರಕ್ಕೆ ಈ ಎಲ್ಲ ಅಪಾಯಗಳ ಅರಿವು ಇತ್ತು. ೨೦೨೪ ರ ಲೋಕಸಭಾ ಚುನಾವಣೆಯ ವರೆಗೆ ಜಾರ್ಜ್ ಸೊರೋಸ್ ಇವರು ಅನೇಕ ಪ್ರಕರಣಗಳನ್ನು ಮಾಡಲು ಪ್ರಯತ್ನಿಸಿದರು. ಎದೆ ಬಡಿದುಕೊಂಡು ‘ಭಾರತ ದಲ್ಲಿನ ಪ್ರಜಾಪ್ರಭುತ್ವವು ಈಗ ಅಪಾಯದಲ್ಲಿದೆ, ಮಾನವಾಧಿಕಾರಗಳು ಅಪಾಯದಲ್ಲಿದೆ’, ಎಂದು ಬೊಬ್ಬೆ ಹೊಡೆಯಲು ಆರಂಭಿಸಿದ್ದರು; ಆದರೆ ಪ್ರಧಾನಿ ಶ್ರೀ. ನರೇಂದ್ರ ಮೋದಿಯವರ ಸರಕಾರ ಇದೆಲ್ಲಕ್ಕೂ ಸಿದ್ಧವಾಗಿತ್ತು.
೫. ಭಾರತದಲ್ಲಿನ ವ್ಯವಸ್ಥೆಯನ್ನು ಬದಲಾಯಿಸಲು ಅದಾನಿ ಉದ್ಯಮ ಸಮೂಹದ ಮೇಲೆ ಮಾಡಿರುವ ಆರೋಪಗಳು
ಹಂಗೇರಿ, ಕಝಾಕಿಸ್ತಾನ ಮತ್ತು ಅರಬ ದೇಶಗಳಲ್ಲಿ ವ್ಯವಸ್ಥೆಯನ್ನು ಬದಲಾಯಿಸಲು ಪ್ರಯತ್ನಿಸುವುದನ್ನು ಅರ್ಥ ಮಾಡಿಕೊಳ್ಳಬಹುದು; ಆದರೆ ಭಾರತದಂತಹ ದೇಶದಲ್ಲಿ ವ್ಯವಸ್ಥೆಯನ್ನು ಬದಲಾಯಿಸಲು ಪ್ರಯತ್ನಿಸುವುದು, ವಿಶೇಷವಾಗಿ ನರೇಂದ್ರ ಮೋದಿಯವರ ಸರಕಾರ ಕಳೆದ ೧೦ ವರ್ಷಗಳಿಂದ ಅಧಿಕಾರದಲ್ಲಿರುವಾಗ ಇಂತಹ ಪ್ರಯತ್ನ ಮಾಡುವುದೆಂದರೆ ಸುಲಭ ವಿಷಯವಲ್ಲ; ಏಕೆಂದರೆ, ಇಂತಹ ಜನರನ್ನು ಹೇಗೆ ನಿಯಂತ್ರಿಸಬೇಕು ಎಂಬುಂದು ನರೇಂದ್ರ ಮೋದಿಯವರು ಗುಜರಾತದ ಮುಖ್ಯಮಂತ್ರಿಯಾಗಿರುವಾಗಲೇ ಪಾಠ ಕಲಿತ್ತಿದ್ದಾರೆ. ಆ ಅವಧಿಯಲ್ಲಿ ಕೂಡ ಅವರ ವಿರುದ್ಧ ಅಂತಾರಾಷ್ಟ್ರೀಯ ಸ್ತರದಲ್ಲಿ ಷಡ್ಯಂತ್ರ ರಚಿಸಲಾಗಿತ್ತು. ಅವರಿಗೆ ‘ವೀಸಾ’ ನಿರಾಕರಿಸ ಲಾಗಿತ್ತು. ಅವರನ್ನು ಜಗತ್ತಿನ ಅತ್ಯಂತ ಕ್ರೂರಿ ಸರ್ವಾಧಿಕಾರಿ ಹಿಟ್ಲರನೊಂದಿಗೆ ಹೋಲಿಸಲಾಗಿತ್ತು; ಆದರೆ ನರೇಂದ್ರ ಮೋದಿ ಆ ಸಂದರ್ಭದಲ್ಲಿಯೂ ಶಾಂತರಾಗಿದ್ದರು ಹಾಗೂ ಈಗ ಅದಾನಿಯವರ ಪ್ರಕರಣದಲ್ಲಿಯೂ ಶಾಂತರಾಗಿದ್ದಾರೆ; ಏಕೆಂದರೆ ಒಂದು ದೊಡ್ಡ ಪ್ರಜಾಪ್ರಭುತ್ವವುಳ್ಳ ದೇಶದ ವ್ಯವಸ್ಥೆಯಲ್ಲಿ ಒಂದು ಉದ್ಯೋಗ ಸಮೂಹದ ವಿರುದ್ಧದ ಆರೋಪವಾಗಿದೆ, ಇವೆಲ್ಲ ಆರೋಪಗಳು ೨೦೨೪ ರಲ್ಲಿ ಮೋದಿಯವರನ್ನು ಕೆಳಗಿಳಿಸುವ ಉದ್ದೇಶದಿಂದಲೇ ಆಗಿವೆ. ಈ ಉದ್ಯೋಗ ಸಮೂಹವನ್ನು ಈಗಲೇ ಏಕೆ ಗುರಿಪಡಿಸಲಾಯಿತು ? ಈ ಹಿಂದೆ ಏಕೆ ಮಾಡಲಿಲ್ಲ ? ಏಕೆಂದರೆ ಇದರ ಉದ್ದೇಶ ೨೦೨೪ ರಲ್ಲಿ ಅಧಿಕಾರ ಬದಲಾವಣೆ ಮಾಡುವುದೇ ಆಗಿತ್ತು. ಅನೇಕ ವರ್ಷಗಳಲ್ಲಿ ಇನ್ನಿತರ ಕಂಪನಿಗಳ, ರಿಲೈಯನ್ಸ್ ಕಂಪನಿಯ ಹಾಗೂ ಬೇರೆ ಬೇರೆ ಕಂಪನಿಗಳ ಬೆಳವಣಿಗೆ ಇದೇ ರೀತಿ ಆಗಿದೆ. ನರೇಂದ್ರ ಮೋದಿಯವರು ಅದಾನಿಯವರ ಪ್ರಕರಣದಲ್ಲಿ ಮಾತನಾಡುವುದಿಲ್ಲ; ಏಕೆಂದರೆ ಅವರ ಉದ್ದೇಶ ಸ್ಪಷ್ಟವಾಗಿದೆ, ಅಂದರೆ ಈ ಆರೋಪಗಳ ಸತ್ಯತೆಯನ್ನು ಪರಿಶೀಲನೆ ಮಾಡಲು ಸವೋಚ್ಚ ನ್ಯಾಯಾಲಯ, ‘ಸೇಬಿ’ ಇದೆ. ಅವರಿಗೆ ಕೆಲಸ ಮಾಡಲು ಬಿಡಿ, ಈಗ ಸರ್ವೋಚ್ಚ ನ್ಯಾಯಾಲಯ ಸೇಬಿಯ ಸಮಿತಿಯನ್ನು ನೇಮಕ ಮಾಡಿತು. ಆ ಸಮಿತಿ ಈ ಆರೋಪದ ಬಗ್ಗೆ ತನಿಖೆ ಮಾಡುವುದು. ಇನ್ನೊಂದು ವಿಷಯ, ದೇಶದಲ್ಲಿ ಗೌತಮ ಅದಾನಿ ಏಕೈಕ ಉದ್ಯೋಗಪತಿ ಮಾತ್ರ ಇರುವುದಲ್ಲ. ಅನೇಕ ಉದ್ಯೋಗ ಸಮೂಹಗಳಿವೆ, ಆ ಅನೇಕ ಉದ್ಯೋಗ ಸಮೂಹಗಳೂ ಪ್ರಗತಿ ಮಾಡಿವೆ.
೬. ಇತರ ರಾಷ್ಟ್ರಗಳೊಂದಿಗೆ ಇರುವ ಭಾರತದ ಕೂಟನೀತಿಯ ಸಂಬಂಧ
ಈಗ ಭಾರತ ಜಗತ್ತಿನಲ್ಲಿ ಎಲ್ಲಕ್ಕಿಂತ ಮಹತ್ವದ ಪಾತ್ರ ವಹಿಸುತ್ತಿದೆ. ಜಗತ್ತಿನಲ್ಲಿ ರಷ್ಯಾ-ಯುಕ್ರೇನ್ ಯುದ್ಧದಿಂದ ಯುರೋಪ್ ಅತ್ಯಂತ ಬಿಕ್ಕಟ್ಟಿನ ಸ್ಥಿತಿಯಲ್ಲಿದೆ. ಇಂತಹ ಸಂದರ್ಭ ದಲ್ಲಿ ಭಾರತವು ಜಗತ್ತಿನ ಆಶಾಕಿರಣವಾಗಿದೆ. ಆದರೂ ಭಾರತ ಕೂಟನೀತಿಯಿಂದ ವರ್ತಿಸುತ್ತಿದೆ. ಒಂದು ಕಡೆಯಲ್ಲಿ ರಷ್ಯಾದಿಂದ ಶೇ. ೨೮ ರಷ್ಟು ತೈಲವನ್ನು ಖರೀದಿಸುತ್ತಿದೆ, ಇನ್ನೊಂದು ಕಡೆ ಯಲ್ಲಿ ಅಮೇರಿಕಾ, ಫ್ರಾನ್ಸ್, ಬ್ರಿಟನ್ ಇವುಗಳೊಂದಿಗೆ ಏರ್ ಇಂಡಿಯಾದಂತಹ ಒಪ್ಪಂದದೊಂದಿಗೆ ವ್ಯಾಪಾರ ಮಾಡುತ್ತಿದೆ. ಅವರಿಂದ ಹೂಡಿಕೆಯನ್ನು ತರುತ್ತಿದೆ. ಅಲ್ಲಿಯೂ ಉದ್ಯೋಗ ಸಿಗುವಂತೆ ಪ್ರಯತ್ನಿಸುತ್ತಿದೆ. ಇಂತಹ ಹೊಸ ಮಹತ್ವಾಕಾಂಕ್ಷೆಯ ಯೋಜನೆಗಳನ್ನು ರೈಲ್ವೆಯಲ್ಲಿ ತರುತ್ತಿದೆ. ದೊಡ್ಡ ಪ್ರಮಾಣದಲ್ಲಿ ‘ಲೋಕೋಮೋಟಿವ್ ಇಂಜಿನ್’ಗಳನ್ನು ತಯಾರಿಸಲಾಗುವುದು. ಈ ರೀತಿ ಈ ದೇಶಗಳನ್ನು ಹೇಗೆ ಆಟವಾಡಿಸಬೇಕು ? ಹಾಗೂ ತನ್ನ ರಾಷ್ಟ್ರಹಿತ ಹೇಗೆ ಸಾಧಿಸಬೇಕು ?, ಎಂಬುದು ನರೇಂದ್ರ ಮೋದಿ ಸರಕಾರಕ್ಕೆ ಚೆನ್ನಾಗಿ ತಿಳಿದಿದೆ.
೭. ಜಾರ್ಜ್ ಸೊರೋಸ್ ಇವರು ಮಾಡಿದ ಆರೋಪದಿಂದ ಕಾಂಗ್ರೆಸ್ ಮತ್ತು ರಾಹುಲ ಗಾಂಧಿ ಇವರ ಬಣ್ಣ ಬಯಲಾಗಿದೆ
ಜಾರ್ಜ್ ಸೊರೋಸ್ ಇವರು ಮಾಡಿರುವ ಆರೋಪದಿಂದ ಮೋದಿ ಸರಕಾರದ ಕಾರ್ಯ ಹೆಚ್ಚು ಸುಲಭವಾಗಿದೆ. ಇದರ ಕಾರಣವೆಂದರೆ, ಈಗ ನರೇಂದ್ರ ಮೋದಿಯವರು ಉತ್ತರ ಕೊಡಬೇಕಾಗಿಲ್ಲ, ಈಗ ರಾಹುಲ ಗಾಂಧಿ ಮತ್ತು ಕಾಂಗ್ರೆಸ್ ಉತ್ತರ ಕೊಡಬೇಕು. ರಾಹುಲ್ ಗಾಂಧಿ ‘ಭಾರತ ಜೋಡೋ’ ಯಾತ್ರೆಯ ನಂತರ ಲಂಡನ್‌ಗೆ ಹೋದರು. ಕ್ಯಾಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಏನು ಭಾಷಣ ಮಾಡುವರು ? ಯಾರ ಮುಂದೆ ಮಾಡುವರು ?, ಅವರ ಉದ್ದೇಶವೇನಿದೆ ?, ಎನ್ನುವ ಪ್ರಶ್ನೆ ಕೇಳಲು ಮೊದಲು ಕಠಿಣವಿತ್ತು, ಏಕೆಂದರೆ ರಾಹುಲ್ ಗಾಂಧಿ ಅತ್ಯಂತ ಬುದ್ಧಿವಂತರಾಗಿದ್ದಾರೆ, ಅವರ ಭಾಷಣ ಕೇಳಲು ಕೇಂಬ್ರಿಡ್ಜ್ ವಿಶ್ವವಿದ್ಯಾಲಯ ಕರೆದಿರಬಹುದೆಂದು ಜನರು ಹೇಳುತ್ತಿದ್ದರು; ಆದರೆ ಈಗ ಈ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿನ ಭಾಷಣಕ್ಕೆ ಹಣವನ್ನು ಯಾರು ಕೊಡುವರು ?, ಅವರ ಉದ್ದೇಶವೇನಿದೆ ? ಈ ಕೇಂಬ್ರಿಡ್ಜ್ ಪ್ರವಾಸದಲ್ಲಿ ಅವರು ಯಾರ್ಯಾರನ್ನು ಭೇಟಿ ಮಾಡುತ್ತಾರೆ ಇವೆಲ್ಲ ವಿಷಯಗಳ ಮಾಹಿತಿ ಪಡೆಯುವುದು ಹಾಗೂ ಅವರ ವಿರುದ್ಧ ನೇರವಾಗಿ ಆರೋಪ ಮಾಡಲು ಈಗ ಸುಲಭವಾಗಿದೆ. ಜಾರ್ಜ್ ಸೊರೋಸ್ ಇವರ ತುರಿಕೆಯಿಂದಾಗಿ ಪುರೋಗಾಮಿಗಳ ಕಜ್ಜಿ (ಚರ್ಮರೋಗ) ಬಹಿರಂಗವಾಗಿದೆ. ಆದ್ದರಿಂದ ಇದು ದೇಶದ ವ್ಯವಸ್ಥೆಯ ಮೇಲೆ ಆಕ್ರಮಣದ ಪ್ರಯತ್ನವಾಗಿದೆ. ಇಂತಹ ಆಕ್ರಮಣದ ಪ್ರಯತ್ನಗಳು ೧೯೯೯ ರಿಂದ ಸೊರೋಸ್ ಇವರ ಸಂಸ್ಥೆಯಿಂದ ನಡೆಯುತ್ತಿವೆ
೮. ಭಾರತ ದೇಶವು ಇದನ್ನು ಸಮರ್ಪಕವಾಗಿ ಎದುರಿಸುವುದರ ಆವಶ್ಯಕತೆ ಇದೆ !
ಸೊರೋಸ್ ಒಬ್ಬರೆ ಅಲ್ಲ, ಅಂತಾರಾಷ್ಟ್ರೀಯ ಸ್ತರದಲ್ಲಿ ಅನೇಕ ಸ್ವಯಂಸೇವಾ ಸಂಸ್ಥೆಗಳಿವೆ. ಚೀನಾ ಸಮರ್ಥಕರು, ವೆಟಿಕನ್ ಸಮರ್ಥಕರು ಮತ್ತು ಇಸ್ಲಾಮೀ ದೇಶಗಳಲ್ಲಿನ ಸಂಸ್ಥೆಗಳಿವೆ; ಆದರೆ ಇವರೆಲ್ಲರ ಮೇಲೆ ಗಮನವಿಡುವುದು, ಅವರ ಕಾರ್ಯದ ಮೇಲೆ ಗಮನವಿಡುವುದು, ಇದು ಭಾರತ ಸರಕಾರದ ಹೊಣೆಯಾಗಿದೆ ಹಾಗೂ ಅದನ್ನು ಕಳೆದ ೮-೯ ವರ್ಷಗಳಿಂದ ನಾವು ಚೆನ್ನಾಗಿ ಮಾಡುತ್ತಿದ್ದೇವೆ; ಏಕೆಂದರೆ ಮೇ ೨೦೨೪ ರ ವರೆಗೆ ಸತತವಾಗಿ ಇಂತಹ ಆಕ್ರಮಣಗಳನ್ನು ಮಾಡಲಾಗಿದೆ; ಆದರೆ ಒಂದು ನಾಯಿ ಬೊಗಳುತ್ತಾ ಮೈಮೇಲೆ ಬಂದರೆ ಭಯಪಟ್ಟು ಓಡಿ ಹೋಗದೆ ನಾವು ಸ್ಥಿರವಾಗಿರುವುದೂ ಆವಶ್ಯಕವಾಗಿದೆ; ಇಂತಹ ಅನೇಕ ನಾಯಿಗಳು ಬೊಗಳುತ್ತಾ ಮೈಮೇಲೆ ಬರುವವು, ಇದರಿಂದ ಭಾರತ ಜಗತ್ತಿನ ಎಲ್ಲಕ್ಕಿಂತ ದೊಡ್ಡ ಪ್ರಜಾಪ್ರಭುತ್ವ ದೇಶವಾಗಿದೆ, ಎಂಬುದು ಜನರಿಗೆ ತಿಳಿಯುವುದು. ಭಾರತವು ರಾಷ್ಟ್ರೀಯ ಒಟ್ಟು ಉತ್ಪಾದನೆಯಲ್ಲಿ ೫ ನೇ ಸ್ಥಾನದಲ್ಲಿದ್ದು ಎಲ್ಲಕ್ಕಿಂತ ದೊಡ್ಡ ದೇಶವಾಗಿದೆ. ಆದ್ದರಿಂದ ಭಾರತ ಇಂತಹ ಪರಿಸ್ಥಿತಿಯಲ್ಲಿ ಆತ್ಮವಿಶ್ವಾಸ ಕಳೆದುಕೊಳ್ಳದೆ ಶಾಂತಿಯಿಂದ ಈ ಎಲ್ಲವನ್ನೂ ಎದುರಿಸ ಬೇಕಾಗಿದೆ. ಅದನ್ನೇ ಮೋದಿ ಸರಕಾರವು ಮಾಡಲಿಕ್ಕಿದೆ; ಆದ್ದರಿಂದ ನಾವು ಈ ಕಾಳಜಿ ವಹಿಸಬೇಕು. ಈ ವಿಷಯದಲ್ಲಿ ನಾವು ಜಾಗರೂಕರಾಗಿದ್ದು ಇಂತಹ ವಿಷಯಗಳಿಗೆ ಅನಾವಶ್ಯಕ ಮಹತ್ವ ನೀಡಬಾರದು. ಸೊರೋಸ್‌ಗೆ ಬರಲಿಕ್ಕಿದ್ದರೆ ಬರಲಿ, ನಾವು ಅವರನ್ನು ನಿಯಂತ್ರಿಸಲು ಸಕ್ಷಮರಾಗಿದ್ದೇವೆ.’
– ಶ್ರೀ. ಅನಯ ಜೋಗಳೆಕರ, ಮುಂಬಯಿ.