Saffron flag burnt in Kalyan : ಮಹಾರಾಷ್ಟ್ರದ ಕಲ್ಯಾಣದಲ್ಲಿ ಹನುಮಾನ ದೇವಸ್ಥಾನದಲ್ಲಿ ಕೇಸರಿ ಧ್ವಜ ಸುಟ್ಟರು !

ಅಪರಿಚಿತರ ವಿರುದ್ಧ ಪ್ರಕರಣ ದಾಖಲು!

ಕಲ್ಯಾಣ(ಮಹಾರಾಷ್ಟ್ರ) – ಇಲ್ಲಿನ ಚಿಂಚವಲಿ ಗ್ರಾಮದ ಹನುಮಾನ ದೇವಸ್ಥಾನದಲ್ಲಿ ಹನುಮಾನ ಜಯಂತಿಯ ಪ್ರಯುಕ್ತ ಗ್ರಾಮಸ್ಥರು ಕೇಸರಿ ಧ್ವಜಗಳನ್ನು ತಯಾರಿಸಿದ್ದರು. ಗ್ರಾಮಸ್ಥ ಆಕಾಶ ಕಶಿವಲೆ ಅವರು ಬೆಳಿಗ್ಗೆ 7.30 ಗಂಟೆಗೆ ದೇವಸ್ಥಾನಕ್ಕೆ ಪೂಜೆಗೆ ಹೋದರು. ದೇವಸ್ಥಾನದ ಬಾಗಿಲು ತೆರೆದಿದ್ದು ಕಂಡುಬಂತು. ಕೇಸರಿ ಧ್ವಜಗಳಲ್ಲಿ ಕೆಲವು ಧ್ವಜಗಳನ್ನು ದೇವಸ್ಥಾನದ ಒಳಗೆ ಮತ್ತು ಹೊರಗೆ ಸುಟ್ಟು ಎಸೆದಿರುವುದು ಅವರಿಗೆ ಕಂಡು ಬಂದಿತು. ಅವರಿಗೆ ದೇವಸ್ಥಾನದಲ್ಲಿ ಕಾಲುಗಳ ಗುರುತುಗಳು ಮೂಡಿರುವುದು ಕಂಡುಬಂದವು. ಧಾರ್ಮಿಕ ವೈಷಮ್ಯವನ್ನು ಸೃಷ್ಟಿಸುವ ಉದ್ದೇಶದಿಂದ ಅಪರಿಚಿತ ವ್ಯಕ್ತಿಯಿಂದ ಈ ಕೃತ್ಯ ನಡೆದಿದೆ ಎಂದು ಶಂಕಿಸಲಾಗಿದೆ. ಈ ಬಗ್ಗೆ ಪೊಲೀಸ ಠಾಣೆಗೆ ದೂರು ದಾಖಲಿಸಲಾಗಿದೆ. ಪೊಲೀಸರು ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಸಂಪಾದಕೀಯ ನಿಲುವು

  • ಹಿಂದೂ ಬಹುಸಂಖ್ಯಾತ ಮಹಾರಾಷ್ಟ್ರದಲ್ಲಿ ಕೇಸರಿ ಧ್ವಜಗಳನ್ನು ಸುಡುವುದು ಖಂಡನೀಯ!
  • ಕೇಸರಿ ಧ್ವಜಗಳನ್ನು ಸುಟ್ಟವರನ್ನು ಪತ್ತೆಹಚ್ಚಿ ಅಂತಹ ಹಿಂದೂದ್ವೇಷಿಗಳನ್ನು ಜೈಲಿಗಟ್ಟಬೇಕು!