ಸಮಾಜವಾದಿ ಪಕ್ಷದ ಸಂಸದ ರಾಮಜಿ ಲಾಲ ಸುಮನ ಅವರ ಖೇದಕರ ಹೇಳಿಕೆ!

ಆಗ್ರಾ (ಉತ್ತರಪ್ರದೇಶ) – ನೀವು ‘ಪ್ರತಿ ಮಸೀದಿಯ ಕೆಳಗೆ ದೇವಾಲಯವಿದೆ’ ಎಂದು ಹೇಳುವುದಾದರೆ, ‘ಪ್ರತಿ ದೇವಾಲಯದ ಕೆಳಗೆ ಬೌದ್ಧ ಮಠವಿದೆ’ ಎಂದು ಹೇಳಬೇಕಾಗುತ್ತದೆ. ಹಳೆ ಕಬ್ರಗಳನ್ನು ಅಗೆಯಬೇಡಿ, ಇಲ್ಲದಿದ್ದರೆ ಅದು ದುಬಾರಿಯಾಗಬಹುದು. (ರಾಮಜಿ ಸುಮನ ಇವರ ವೈಚಾರಿಕ ಸುನ್ನತಿಯಾಗಿದ್ದರಿಂದಲೇ ಅವರು ಇಂತಹ ಹೇಳಿಕೆ ನೀಡುತ್ತಿದ್ದಾರೆ, ಇದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ! – ಸಂಪಾದಕರು) ಒಂದು ವೇಳೆ ಈ ಜನರು ‘ಮುಸಲ್ಮಾನರಲ್ಲಿ ಬಾಬರನ ಡಿಎನ್‌ಎ (ಡಿಆಕ್ಸಿರೈಬೋ ನ್ಯೂಕ್ಲಿಯಿಕ್ ಆಸಿಡ್ ಎಂದರೆ ವ್ಯಕ್ತಿಯ ಮೂಲ ಗುರುತು ಪತ್ತೆಹಚ್ಚುವ ದೇಹದ ಘಟಕ. ಜೀನ್‌ಗಳ ವಸ್ತು (ಜೆನೆಟಿಕ್ ಮೆಟೀರಿಯಲ್) ಯಾವುದರಿಂದ ರಚಿತವಾಗಿದೆಯೋ ಆ ಅಣು ಎಂದರೆ ಡಿಎನ್‌ಎ) ಇದೆ’ ಎಂದು ಹೇಳಿದರೆ, ಆಗ ನಾವು ನಿಮಗೆ ಕೇಳುತ್ತೇವೆ, ‘ನಿಮ್ಮಲ್ಲಿ ಯಾರ ಡಿಎನ್‌ಎ ಇದೆ?’, ಅದನ್ನು ಹೇಳಿ ಎಂದು ಇಲ್ಲಿನ ಸುಮನ್ ಅವರು ಪ್ರಶ್ನಿಸಿದರು. (ಹಿಂದೂಗಳಲ್ಲಿ ಭಗವಾನ್ ಶ್ರೀರಾಮ, ಶ್ರೀಕೃಷ್ಣ, ಛತ್ರಪತಿ ಶಿವಾಜಿ ಮಹಾರಾಜರಂತಹವರ ಡಿಎನ್‌ಎ ಇದೆ ಎಂಬುದನ್ನು ಸುಮನ್ ಶಾಶ್ವತವಾಗಿ ನೆನಪಿಟ್ಟುಕೊಳ್ಳಬೇಕು! – ಸಂಪಾದಕರು) ಅವರು ಇಲ್ಲಿ ಸಮಾಜವಾದಿ ಪಕ್ಷದ ಕಚೇರಿಯಲ್ಲಿ ಡಾ. ಭೀಮರಾವ ಅಂಬೇಡ್ಕರ್ ಜಯಂತಿಯ ಅಂಗವಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಈ ಹಿಂದೆ ರಾಜ್ಯಸಭೆಯಲ್ಲಿ ಮಾತನಾಡುತ್ತಿದ್ದ ಸುಮನ್, ‘ಸಾಮ್ರಾಟ್ ರಾಣಾ ಸಂಗಾ ಬಾಬರ್‌ನನ್ನು ಭಾರತಕ್ಕೆ ಕರೆತಂದಿದ್ದ’ ಎಂದು ಹೇಳಿ ಹಿಂದೂಗಳನ್ನು ‘ದ್ರೋಹಿಗಳು’ ಎಂದು ಕರೆದಿದ್ದರು. ಅದರಿಂದ ಆಕ್ರೋಶಿತಗೊಂಡ ಕರಣಿ ಸೇನೆ ಅವರ ನಿವಾಸದ ಮೇಲೆ ದಾಳಿ ಮಾಡಿ ಹಾನಿ ಮಾಡಿತ್ತು.
ರಾಮಜಿ ಲಾಲ ಸುಮನ ಮಾತು ಮುಂದುವರೆಸಿ, ಇದುವರೆಗೆ ನಾವು ಭೂಸೇನೆ, ನೌಕಾಪಡೆ ಮತ್ತು ವಾಯುಸೇನೆಗಳ ಬಗ್ಗೆ ಕೇಳಿದ್ದೇವೆ; ಆದರೆ ಈ ನಕಲಿ ಕರಣಿ ಸೇನೆ ಎಲ್ಲಿಂದ ಬಂತು? ಎಂದು ಅವರು ಟೀಕಿಸಿದರು.
ಸಂಪಾದಕೀಯ ನಿಲುವುನಾಲಿಗೆಗೆ ಎಲುಬು ಇಲ್ಲ ಅಂತ ಏನೇನೋ ಮಾತನಾಡುತ್ತಿರುವ ಸಮಾಜವಾದಿ ಪಕ್ಷದ ಸಂಸದರು! ಇಂತಹವರ ವಿರುದ್ಧ ಪ್ರಕರಣ ದಾಖಲಿಸಿ ಜೈಲಿಗೆ ಹಾಕಿದರೆ, ಏನು ಮಾತನಾಡಬೇಕು, ಏನು ಮಾತನಾಡಬಾರದು ಎಂಬ ಅರಿವಾದರೂ ಮೂಡಬಹುದು ! |