ಪ್ರತ್ಯುತ್ತರದಲ್ಲಿ ಕಾಂಗ್ರೆಸ್ ನಿಂದ ಮಾಕಪ್ ಕುರಿತು ಈ ರೀತಿಯ ಆರೋಪ
ತಿರುವನಂತಪುರಂ (ಕೇರಳ) – ರಾಜ್ಯದಲ್ಲಿ ವಾಯನಾಡ ಲೋಕಸಭಾ ಮತದಾನ ಕ್ಷೇತ್ರದಲ್ಲಿ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ರಾಹುಲ್ ಗಾಂಧಿ ಮತ್ತು ನಂತರ ಉಪಚುನಾವಣೆಯಲ್ಲಿ ಅವರ ಅಕ್ಕ ಪ್ರಿಯಾಂಕ ವಾಡ್ರ ಇವರು ಗೆಲವು ಸಾಧಿಸಿದರು. ಅವರ ವಿಜಯದ ಕುರಿತು ಮಾರ್ಕ್ಸ್ ವಾದಿ ಕಮಿನಿಸ್ಟ್ ಪಕ್ಷವು, ‘ರಾಹುಲ್ ಗಾಂಧಿ ಮತ್ತು ಪ್ರಿಯಾಂಕ ಗಾಂಧಿ ಇವರ ವಾಯನಾಡಿನ ಗೆಲುವಿನ ಹಿಂದೆ ಕಟ್ಟರವಾದಿ ಮುಸಲ್ಮಾನ ಒಕ್ಕೂಟದ ಕೈವಾಡ ಇತ್ತು’, ಎಂದು ಆರೋಪಿಸಿದ್ದಾರೆ.
೧. ಸುಲತಾನ ಬಾಥರಿ ಇಲ್ಲಿ ವಾಯನಾಡ್‌ನ ಮಾರ್ಕ್ಸ ವಾದಿ ಕಮ್ಯುನಿಸ್ಟ್ ಪಕ್ಷದ ಕಾರ್ಯಕರ್ತರು ಮತ್ತು ಪದಾಧಿಕಾರಿಗಳ ಸಭೆ ಆಯೋಜಿಸಲಾಗಿತ್ತು. ಆ ಸಮಯದಲ್ಲಿ ಮಾರ್ಕ್ಸ್ ವಾದಿ ಕಮ್ಯುನಿಸ್ಟ್ ಪಕ್ಷದ ನಾಯಕ ವಿಜಯ ರಾಘವನ್ ಇವರು, ‘ವಾಯನಾಡ್‌ನಿಂದ ಲೋಕಸಭೆಗೆ ಇಬ್ಬರು ಆಯ್ಕೆಯಾದರು. ಮೊದಲು ರಾಹುಲ ಗಾಂಧಿ ಮತ್ತು ಈಗ ಪ್ರಿಯಾಂಕ ವಾಡ್ರಾ. ಅವರು ಯಾರಿಂದಾಗಿ ಆಯ್ಕೆಯಾದರು ? ಕಟ್ಟರವಾದಿ ಮುಸಲ್ಮಾನರ ಒಕ್ಕೂಟದ ಬೆಂಬಲದಿಂದಲೇ ಅವರು ವಾಯನಾಡ್‌ನಲ್ಲಿ ಗೆಲವು ಸಾಧಿಸಿದರು. ಈ ಒಕ್ಕೂಟದ ಬೆಂಬಲ ಇಲ್ಲದೆ ರಾಹುಲ ಗಾಂಧಿ ಸಂಸತ್ತಿಗೆ ತಲುಪಲು ಸಾಧ್ಯವಿರಲಿಲ್ಲ. ಅವರು ಈಗ ವಿರೋಧ ಪಕ್ಷದ ನಾಯಕರಾಗಿದ್ದಾರೆ. ಪ್ರಿಯಾಂಕಾ ವಾಡ್ರ ಇವರಿಂದ ವಾಯನಾಡ್‌ನಲ್ಲಿ ಅನೇಕ ಪ್ರಚಾರ ಸಭೆಗಳು ನಡೆದವು. ಅವರ ಈ ಪ್ರಚಾರ ಸಭೆಯಲ್ಲಿ ಎಲ್ಲಕ್ಕಿಂತ ಮುಂದೆ ಮತ್ತು ಎಲ್ಲಕ್ಕಿಂತ ಹಿಂದಿನ ಸಾಲಿನಲ್ಲಿ ಯಾರು ಇದ್ದರು, ಇದು ನಿಮಗೆ ತಿಳಿದಿದೆಯೇ ? ಅಲ್ಪಸಂಖ್ಯಾತರಲಿನ ಎಲ್ಲಕ್ಕಿಂತ ಕೆಟ್ಟ ಉಗ್ರಗಾಮಿ ವಿಚಾರದ ಜನರು ಈ ಸಭೆಯಲ್ಲಿ ಇದ್ದರು. ಈ ಉಗ್ರಗಾಮಿ ವಿಚಾರದ ಜನರು ಕಾಂಗ್ರೆಸ್ ನೇತೃತ್ವದ ಜೊತೆಗೆ ಇದ್ದಾರೆ.
೨. ವಿಜಯ ರಾಘವನ್ ಇವರು ಈ ಹಿಂದೆ ಕೂಡ ಕಾಂಗ್ರೆಸ್ಸಿನ ಕುರಿತು ಇದೇ ರೀತಿಯ ಆರೋಪ ಮಾಡಿದ್ದರು. ಹಾಗೂ ಮಾರ್ಕ್ಸ್ ವಾದಿ ಕಮ್ಯುನಿಸ್ಟ್ ಪಕ್ಷದಿಂದ ೨೦೧೪ ರಲ್ಲಿ ಹೀಗೆಯೇ ನಿಲುವು ತಾಳಿದ್ದರು. ಆ ಸಮಯದಲ್ಲಿ ಲೋಕಸಭಾ ಚುನಾವಣೆಯ ನಂತರ ಅವರು ಕಾಂಗ್ರೆಸ್ ಮತ್ತು ಕಟ್ಟರವಾದಿ ಮುಸಲ್ಮಾನ ಸಂಘಟನೆಗಳ ಸಂಬಂಧವನ್ನು ಜೋಡಿಸಿದ್ದರು. ಈ ವರ್ಷ ಏಪ್ರಿಲ್ ತಿಂಗಳಲ್ಲಿ ಕೂಡ ಮಾರ್ಕ್ಸ್ ವಾದಿ ಕಮ್ಯುನಿಸ್ಟ್ ಪಕ್ಷದಿಂದ ಹೀಗೆಯೇ ಆರೋಪಿಸಲಾಗಿತ್ತು.
ಮಾರ್ಕ್ಸ್ ವಾದಿ ಕಮ್ಯುನಿಸ್ಟ್ ಪಕ್ಷದಿಂದ ಲೋಕಸಭೆಗೆ ಮುಸಲ್ಮಾನರಿಗಾಗಿ ಪ್ಯಾಲೆಸ್ಟೈನಿನ ಅಂಶ ಪ್ರಸ್ತಾಪಿಸಿದರು ! – ಕಾಂಗ್ರೆಸ್ಸಿನ ಆರೋಪ
ಕಾಂಗ್ರೆಸ್ ಈಗ ಮಾರ್ಕ್ಸ್ ವಾದಿ ಕಮ್ಯುನಿಸ್ಟ್ ಪಕ್ಷದ ಆರೋಪಕ್ಕೆ ಪ್ರತ್ಯುತ್ತರ ನೀಡಿದೆ. ಕಾಂಗ್ರೆಸ್ ಪಕ್ಷ, ಇತ್ತೀಚೆಗೆ ನಡೆದಿರುವ ಲೋಕಸಭಾ ಚುನಾವಣೆಯಲ್ಲಿ ಮಾರ್ಕ್ಸ್ವಾದಿ ಪಕ್ಷ ಕೇವಲ ಮುಸಲ್ಮಾನ ಮತದಾರರನ್ನು ಆಕರ್ಷಿಸುವುದಕ್ಕಾಗಿ ಪ್ಯಾಲೆಸ್ಟೈನ್ ಅಂಶ ಪ್ರಸ್ತಾಪಿಸಿತ್ತು. ಅದರಿಂದ ಹಿಂದೂ ಮತದಾರರು ಅವರ ಕುರಿತು ಅಸಮಾಧಾನಗೊಂಡಿದ್ದರು. ಆದ್ದರಿಂದ ಮಾರ್ಕ್ಸ್ ವಾದಿ ಕಮ್ಯುನಿಸ್ ಪಕ್ಷ ಈಗ ಹಿಂದೂ ಮತದಾರರನ್ನು ತನ್ನ ಪರವಾಗಿ ಹೊರಳಿಸುವ ಪ್ರಯತ್ನ ಮಾಡುತ್ತಿದೆ’, ಎಂದು ಹೇಳಿದೆ.
ಸಂಪಾದಕೀಯ ನಿಲುವುಎರಡು ಪಕ್ಷ ಒಂದೇ ಮಾಲೆಯ ಮಣಿಗಳಾಗಿವೆ ಮತ್ತು ಅವರಿಗೆ ಮುಸಲ್ಮಾನರನ್ನು ಓಲೈಸಿ ಮತಗಳನ್ನು ಪಡೆಯುವದಾಗಿರುತ್ತದೆ. ಎರಡು ಪಕ್ಷ ಕಟ್ಟರ ಮುಸಲ್ಮಾನರ ಪರವಾಗಿದ್ದಾರೆ. ಇದನ್ನು ಹಿಂದುಗಳು ತಿಳಿದು ಅವರನ್ನು ದೂರ ಇರಿಸಬೇಕು ! |