ಬಹಿಷ್ಕಾರವೆಂಬ ಆಯುಧ !

ಜನವರಿ ೧೩ ರಿಂದ ಪ್ರಯಾಗರಾಜದಲ್ಲಿ ಮಹಾ ಕುಂಭಮೇಳವು ನಡೆಯುತ್ತಿದೆ. ಇಲ್ಲಿಯವರೆಗೆ ತ್ರಿವೇಣಿ ಸಂಗಮದಲ್ಲಿ ೪೫ ಕೋಟಿ ಭಕ್ತರು ಪವಿತ್ರ ಸ್ನಾನ ಮಾಡಿದ್ದಾರೆ. ಮಹಾಕುಂಭವು ಮುಗಿಯುತ್ತಾ ಬಂದಿದೆ. ಈ ಅವಧಿಯಲ್ಲಿ ಕನಿಷ್ಠ ೧೦ ಕೋಟಿ ಭಕ್ತರು ಸ್ನಾನ ಮಾಡುವ ನಿರೀಕ್ಷೆ ಇದೆ ಎಂಬ ಸುದ್ದಿ ಇದೆ. ಹಿಂದೂಗಳ ಧಾರ್ಮಿಕಶಕ್ತಿಯನ್ನು ಇಡೀ ಜಗತ್ತು ನೋಡುತ್ತಿದೆ. ಯೋಗಿ ಆದಿತ್ಯನಾಥ ಸರಕಾರವು ಬಹಳ ವ್ಯವಸ್ಥಿತವಾಗಿ ಆಯೋಜನೆಯನ್ನು ಮಾಡುವ ಮೂಲಕ ಈ ಮಹಾಕುಂಭಮೇಳದ ಆಯೋಜನೆಯನ್ನು ಓರ್ವ ಸನ್ಯಾಸಿಹೇಗೆ ಆಡಳಿತವನ್ನು ನಡೆಸಬಹುದು ?, ಎಂಬ ಉದಾಹರಣೆಯನ್ನು ಕೇವಲ ರಾಷ್ಟ್ರದೆದುರು ಮಾತ್ರವಲ್ಲದೇ ಜಗತ್ತಿನೆದುರು ಇಟ್ಟಿದ್ದಾರೆ. ಸಂತರು, ಸಾಧುಗಳು, ಮಹಂತರು, ಸಂನ್ಯಾಸಿಗಳನ್ನು ತುಚ್ಛವೆಂದು ಪರಿಗಣಿಸುವ, ಅವರ ಅವಹೇಳನ ಮಾಡುವವರು ಇವರೆಲ್ಲರೂ ಮೂಕರಾಗಿದ್ದಾರೆ. ಅದರಲ್ಲಿಯೂ ಕೆಲವು ವಿಘ್ನ ಗಳನ್ನು ತಂದು ಸಂತೋಷ ಪಡುವ ಜನರು ನೂಕುನುಗ್ಗಾಟವನ್ನು ಸೃಷ್ಟಿಸಿದುದರಿಂದ ೩೦ ಜನರು ಸಾವನ್ನಪ್ಪಿದರು. ಈ ನೂಕುನುಗ್ಗಾಟ ಒಂದು ಸಂಚಾಗಿದೆ ಎಂದು ಇಲ್ಲಿಯವರಿಗೆ ಸ್ಪಷ್ಟವಾಗದಿದ್ದರೂ ಅನುಮಾನ ಮಾತ್ರ ಮೂಡುತ್ತಿದೆ. ಇದು ಆದಷ್ಟು ಬೇಗನೆ ಬಹಿರಂಗಗೊಳ್ಳಲಿದೆ. ಮಹಾಕುಂಭವು ಹಿಂದೂ ಗಳ ಎಲ್ಲಕ್ಕಿಂತ ದೊಡ್ಡ ಸಾರ್ವಜನಿಕ ಉತ್ಸವವಾಗಿದೆ. ಇದಕ್ಕಾಗಿ ಯಾರಿಂದಲೂ ಚಂದಾ ಸ್ವೀಕರಿಸಲಾಗಿಲ್ಲ ಮತ್ತು ಯಾರನ್ನೂ ಆಹ್ವಾನಿಸಲಾಗಿಲ್ಲ. ನೂರಾರು ವರ್ಷಗಳಿಂದ ಹಿಂದೂಗಳು ನಿಗದಿತ ಸಮಯಕ್ಕೆ ಇಲ್ಲಿಗೆ ಬಂದು ಸ್ನಾನ ಮಾಡಿ ಹೊರಡುತ್ತಾರೆ. ಅದೇ ಸಮಯದಲ್ಲಿ ಹಿಂದೂ ಸಂತರು, ಧರ್ಮಾಚಾರ್ಯರು, ಶಂಕರಾಚಾರ್ಯರು ಮುಂತಾದವರು ಹಿಂದೂಗಳು ಎದುರಿಸುತ್ತಿ ರುವ ಸಮಸ್ಯೆಗಳು, ಅವುಗಳಿಗೆ ಪರಿಹಾರ, ಹಿಂದೂಗಳಿಗೆ ಮಾರ್ಗದರ್ಶನ ಈ ಬಗ್ಗೆ ಚರ್ಚಿಸುತ್ತಾರೆ. ಕಳೆದ ಕೆಲವು ಕುಂಭಮೇಳಗಳಿಂದ ಇದು ಹೆಚ್ಚು ಸ್ಪಷ್ಟವಾಗಿದೆ. ಸದ್ಯದ ಮಹಾಕುಂಭದಲ್ಲಿ ಅನೇಕ ಸಂತರು, ಮಹಂತರು ಮತ್ತು ಅವರ ಸಂಸ್ಥೆಗಳು ಧಾರ್ಮಿಕ ಸಭೆಗಳು, ಹಿಂದೂ ಅಧಿವೇಶನ ಇತ್ಯಾದಿಗಳ ಆಯೋಜನೆ ಮಾಡಿ ಹಿಂದೂಗಳ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಿದ್ದಾರೆ. ಕೆಲವು ಪರಿಹಾರ ಮತ್ತು ಕಾರ್ಯನೀತಿಗಳನ್ನು ಘೋಷಿಸಿದ್ದಾರೆ. ಇದೇ ನಿಟ್ಟಿನಲ್ಲಿ ‘ಜ್ಯೋತಿಷ್ಯಪೀಠ’ದ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಇವರು ಆಯೋಜಿಸಿದ ಧಾರ್ಮಿಕ ಪರಿಷತ್ತಿನಲ್ಲಿ ಕಾಂಗ್ರೆಸ್‌ನ ನಾಯಕ, ಹಾಗೆಯೇ ಲೋಕಸಭೆಯ ವಿಪಕ್ಷದ ನಾಯಕ ರಾಹುಲ ಗಾಂಧಿ ಇವರನ್ನು ಹಿಂದೂ ಧರ್ಮದಿಂದ ಬಹಿಷ್ಕರಿಸುವ ನಿರ್ಣಯವನ್ನು ಅಂಗೀಕರಿಸಿತು, ಹಾಗೆಯೇ ‘ರಾಹುಲ ಗಾಂಧಿ ಇವರು ತಮ್ಮ ಟೀಕೆಗೆ ಒಂದು ತಿಂಗಳಲ್ಲಿ ಸ್ಪಷ್ಟೀಕರಣ ನೀಡಬೇಕು’, ಎಂದೂ ಧಾರ್ಮಿಕ ಪರಿಷತ್ತಿನಲ್ಲಿ ಹೇಳಲಾಗಿದೆ. ಮನುಸ್ಮೃತಿಯ ವಿರುದ್ಧ ರಾಹುಲ ಗಾಂಧಿಯವರ ಹೇಳಿಕೆಯನ್ನು ಆಧರಿಸಿ ಈ ಪ್ರಸ್ತಾಪವನ್ನು ಮಾಡಲಾಗಿದೆ. ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ, ಹಾಗೆಯೇ ಅವರ ಹಿಂದಿನ ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿ ಇವರು ಭಾಜಪ ವಿರೋಧಿ ನಿಲುವನ್ನು ತಳೆದಿರುವುದು ಗಮನಕ್ಕೆ ಬಂದಿದೆ. ಇದರ ಲಾಭ ಪರೋಕ್ಷವಾಗಿ ಕಾಂಗ್ರೆಸ್‌ಗೆ ಆಗಲಿದೆ ಎಂದು ಕಂಡು ಬಂದಿದೆ. ಈಗ ಅದೇ ಕಾಂಗ್ರೆಸ್‌ ನಾಯಕನ ವಿರುದ್ಧ ಶಂಕರಾಚಾರ್ಯ ಅವಿಮುಕ್ತೇಶ್ವರಾನಂದ ಇವರು ಈ ರೀತಿಯ ಪ್ರಸ್ತಾಪನೆ ಅಂಗೀಕರಿಸಿದ್ದು ಆಶ್ಚರ್ಯಪಡುವಂತಿದೆ. ಅದರಲ್ಲಿಯೂ ಶಂಕರಾಚಾರ್ಯರಿಂದ ಈ ರೀತಿಯ ಪ್ರಯತ್ನ ಮೊದಲ ಬಾರಿಗೆ ಗಮನಕ್ಕೆ ಬಂದಿದೆ.

ಹಿಂದೂ ಧರ್ಮದ ಸಂಪ್ರದಾಯವಿಲ್ಲ !

ಹಿಂದೂ ಧರ್ಮದಲ್ಲಿ ಯಾವಾಗಲೂ ಯಾರಿಗೂ ಧರ್ಮದಿಂದ ಬಹಿಷ್ಕರಿಸುವ ಸಂಪ್ರದಾಯವಿಲ್ಲ. ಧರ್ಮಶಾಸ್ತ್ರದಲ್ಲಿಯೂ ಈ ರೀತಿ ಹೇಳಲಾಗಿಲ್ಲ. ಹಿಂದಿನ ಕಾಲದಲ್ಲಿ ಯಾರೋ ಒಬ್ಬ ವ್ಯಕ್ತಿಯು ಸಾಂಪ್ರದಾಯಿಕ ಸಾಮಾಜಿಕ ಕಾನೂನುಗಳನ್ನು ಉಲ್ಲಂಘಿಸಿದರೆ ಅಥವಾ ಅನುಚಿತವಾಗಿ ವರ್ತಿಸಿದರೆ, ಅವನನ್ನು ಸಮಾಜದ ಇತರ ಸದಸ್ಯರಿಂದ ಪ್ರತ್ಯೇಕಿಸಲಾಗುತ್ತಿತ್ತು, ಹಾಗೆಯೇ ಗ್ರಾಮದ ನಿಯಮಗಳನ್ನು ಪಾಲಿಸದಿದ್ದರೆ, ಅವನನ್ನು ಗ್ರಾಮದಿಂದ ಬಹಿಷ್ಕರಿಸುವ ಸಂಪ್ರದಾಯವಿತ್ತು. ಇದರಿಂದ ‘ಆ ವ್ಯಕ್ತಿಗೆ ತಾನು ಮಾಡಿದ ತಪ್ಪುಗಳ ಅರಿವು ಆಗಬೇಕೆಂಬ’ ಉದ್ದೇಶವಿತ್ತು; ಆದರೆ ರಾಹುಲ ಗಾಂಧಿಯವರ ವಿಷಯದಲ್ಲಿ ನಿರ್ಣಯ ತೆಗೆದುಕೊಳ್ಳುವಾಗ ನಿರ್ದಿಷ್ಟವಾಗಿ ಯಾವ ಅಧ್ಯಯನ ಮಾಡಲಾಗಿದೆ ಎಂದು ಸ್ಪಷ್ಟವಾಗಿಲ್ಲ. ವಾಸ್ತವದಲ್ಲಿ ಅನೇಕ ಜನರು ‘ರಾಹುಲ ಗಾಂಧಿ ಹಿಂದೂ ಅಲ್ಲ’, ಎಂದೂ ಹೇಳುತ್ತಿದ್ದಾರೆ. ಆದುದರಿಂದ ಅವರನ್ನು ಧರ್ಮದಿಂದ ಹೇಗೆ ಹೊರಹಾಕಬಲ್ಲರು ? ಈ ಬಗ್ಗೆ ಚರ್ಚಿಸುವುದು ಆವಶ್ಯಕವಾಗಿದೆ. ಇದಕ್ಕಾಗಿ ದಾಖಲೆ ಕಾಗದಪತ್ರಗಳನ್ನು ಪರಿಶೀಲಿಸಬೇಕಾಗುತ್ತದೆ. ಇಲ್ಲಿ ವಿಷಯ ಬಹಿಷ್ಕಾರದ್ದಾಗಿದೆ. ಒಂದು ವೇಳೆ ಶಂಕರಾಚಾರ್ಯರು ಹೊಸ ಸಂಪ್ರದಾಯವನ್ನು ಸೃಷ್ಟಿಸುತ್ತಿದ್ದರೆ, ಆ ಬಗ್ಗೆ ವಿಚಾರ ಮಾಡುವುದು ಆವಶ್ಯಕವಾಗಿದೆ. ಇತರ ೩ ಪೀಠಗಳ ಶಂಕರಾಚಾರ್ಯರು, ಧರ್ಮಾಚಾರ್ಯರು, ಸಂತರ ಅಭಿಪ್ರಾಯಗಳನ್ನು ತೆಗೆದುಕೊಳ್ಳ ಬೇಕೆಂದು ಒತ್ತಾಯಿಸಬಹುದಾಗಿದೆ. ಸದ್ಯದ ಪ್ರಕರಣದಲ್ಲಿ ಹಿಂದೂ ಧರ್ಮದ ಮೇಲಾಗುವ ಆಘಾತಗಳ ಸಂದರ್ಭದಲ್ಲಿ ಕಾಲಾನುಸಾರ ಶಿಕ್ಷೆಯನ್ನು ವಿಧಿಸುವ ಸಂದರ್ಭದಲ್ಲಿ ಬಹಿಷ್ಕರಿಸುವ ಪ್ರಯತ್ನ ನಡೆಯುತ್ತಿದ್ದರೆ, ಅದನ್ನು ಯಾರೂ ವಿರೋಧಿಸುವ ಸಾಧ್ಯತೆ ಇಲ್ಲ. ಕಾಂಗ್ರೆಸ್‌ನಲ್ಲಿ ಮೋಹನದಾಸ ಗಾಂಧಿ ಇವರು ಬಂದಾಗಿನಿಂದ ಕಾಂಗ್ರೆಸ್‌ನ ಮಾಧ್ಯಮದಿಂದ ಹಿಂದೂ ಧರ್ಮಕ್ಕೆ ಕೆಟ್ಟ ದಿನಗಳು ಆರಂಭವಾದವು ಮತ್ತು ಅವು ಇಂದಿಗೂ ಮುಂದುವರೆದಿವೆ. ಅದಕ್ಕಾಗಿಯೇ ರಾಹುಲ ಗಾಂಧಿಯವರು ಮನುಸ್ಮೃತಿಯನ್ನು ಅವಮಾನಿಸುತ್ತಿದ್ದಾರೆ. ಯಾವ ಪುಸ್ತಕದಿಂದ ಜಗತ್ತಿನಲ್ಲಿ ಜಿಹಾದಿ ಭಯೋತ್ಪಾದನೆ ಸೃಷ್ಟಿಯಾಗಿದೆಯೋ, ಆ ಬಗ್ಗೆ ದೇಶದ ಒಬ್ಬನೇ ಒಬ್ಬ ಜಾತ್ಯತೀತ ಅಥವಾ ಪ್ರಗತಿಪರ ವ್ಯಕ್ತಿ ಬಹಿರಂಗವಾಗಿ ಮಾತನಾಡುವುದಿಲ್ಲ; ಆದರೆ ಅದೇ ಜನರು ಕಳೆದ ಅನೇಕ ದಶಕಗಳಿಂದ ಭಾರತದಲ್ಲಿ ಮನುಸ್ಮೃತಿಯನ್ನು ದ್ವೇಷಿಸುತ್ತಿದ್ದಾರೆ. ಅನೇಕ ಬಾರಿ ಅದನ್ನು ಸುಡಲು ಪ್ರಯತ್ನಿಸ ಲಾಯಿತು. ಪುಸ್ತಕವನ್ನು ಸುಡುವುದರಿಂದ ಅದರಲ್ಲಿನ ವಿಚಾರ ಗಳು ನಾಶವಾಗುವುದಿಲ್ಲ, ಎಂದು ಅವರಿಗೆ ತಿಳಿದಿಲ್ಲ. ಇದು ಅವರ ಬುದ್ಧಿಯ ಸಾಮರ್ಥ್ಯವನ್ನು ತೋರಿಸುತ್ತದೆ. ಅದರಲ್ಲಿಯೂ ರಾಹುಲ ಗಾಂಧಿಯವರ ವ್ಯಕ್ತಿತ್ವದ ಬಗ್ಗೆ ದೇಶದ ಪ್ರತಿಯೊಬ್ಬ ವ್ಯಕ್ತಿಗೂ ಗೊತ್ತಿರುವುದರಿಂದ ಆ ಬಗ್ಗೆ ಮಾತನಾಡುವದೂ ಅನಾವಶ್ಯಕವಾಗಿದೆ, ಎಂದು ಅನಿಸುತ್ತದೆ. ‘ಹಿಂದೂ ಧರ್ಮದ ಅವಮಾನ ಇತರ ಧರ್ಮದವರಿಗಿಂತ ಹಿಂದೂ ಧರ್ಮದವರೇ ಹೆಚ್ಚು ಮಾಡುತ್ತಿರುವುದರಿಂದ ಮತ್ತು ಕಾನೂನಿಗನುಸಾರ ಇಂಥವರ ಮೇಲೆ ಯಾವುದೇ ಕಠಿಣ ಕ್ರಮ ಕೈಗೊಳ್ಳಲಾಗದ ಕಾರಣ, ಒಂದು ವೇಳೆ ಯಾರಾದರೂ ಬಹಿಷ್ಕಾರದ ಆಯುಧವನ್ನು ಎತ್ತುತ್ತಿದ್ದರೆ ಅದರಲ್ಲಿ ತಪ್ಪೇನಿದೆ ?’, ಎಂಬ ಪ್ರಶ್ನೆಯನ್ನು ಯಾರಾದರೂ ಕೇಳಬಹುದು. ಈಗ ಈ ಬಹಿಷ್ಕಾರದ ವ್ಯಾಪ್ತಿಯು ಎಷ್ಟಿರುತ್ತದೆ ? ಎಂಬುದನ್ನು ಶಂಕರಾಚಾರ್ಯರು ಸ್ಪಷ್ಟಪಡಿಸಿಲ್ಲ. ಆದುದರಿಂದ ರಾಹುಲ ಗಾಂಧಿ ಇವರನ್ನು ಬಹಿಷ್ಕರಿಸಿದ ನಂತರ ಅವರ ಮೇಲೆ ಯಾವ ನಿರ್ಬಂಧಗಳನ್ನು ವಿಧಿಸಲಾಗುತ್ತದೆ, ಎಂಬುದು ಸ್ಪಷ್ಟವಾಗಿಲ್ಲ. ಅವರು ಇನ್ನು ಮುಂದೆ ದೇವಸ್ಥಾನಗಳಿಗೆ, ತೀರ್ಥಕ್ಷೇತ್ರಗಳಿಗೆ ಹೋಗಲು ಅವಕಾಶವಿಲ್ಲ ಎಂದಾದರೆ, ಅವರು ಕೇವಲ ಚುನಾವಣೆಯ ಸಮಯದಲ್ಲಷ್ಟೇ ಹಿಂದೂಗಳ ಮತಕ್ಕಾಗಿ ದೇವಸ್ಥಾನಗಳಿಗೆ ಭೇಟಿ ನೀಡುವುದು, ಇಲ್ಲಿಯವರೆಗೆ ಗಮನಿಸಲಾಗಿದೆ. ವಾಸ್ತವದಲ್ಲಿ ರಾಜಕೀಯ ದ್ವೇಷದಿಂದಾಗಿ ಅವರು ಅಯೋಧ್ಯೆಯ ಶ್ರೀರಾಮಮಂದಿರಕ್ಕೆ ಅಥವಾ ಕಾಶಿ ವಿಶ್ವನಾಥರ ದರ್ಶನಕ್ಕೆ ಎಂದಿಗೂ ಹೋಗಿಲ್ಲ. ಇಂತಹ ವ್ಯಕ್ತಿಗೆ  ಹಿಂದೂ ಧರ್ಮದ ಮಹತ್ವವನ್ನು ಅರಿತುಕೊಳ್ಳಲು ಯಾವ ನಿರ್ಬಂಧಗಳನ್ನು ವಿಧಿಸಬೇಕು ? ಎಂಬ ಪ್ರಶ್ನೆ ಮೂಡುತ್ತದೆ.

ಕಾನೂನಿಗನುಸಾರ ಕಾರ್ಯಾಚರಣೆ ಬೇಕು !

ಯಾರಾದರೂ ಹಿಂದೂ ಧರ್ಮವನ್ನು ಮಾತ್ರವಲ್ಲದೇ ಯಾವುದೇ ಧರ್ಮ, ಧರ್ಮಗ್ರಂಥಗಳ, ದೇವತೆಗಳನ್ನು ಅವಮಾನಿಸುತ್ತಿದ್ದರೆ, ಅವರ ವಿರುದ್ಧ ಕೂಡಲೇ ಕ್ರಮಕೈಗೊಳ್ಳುವುದು ಆವಶ್ಯಕವಾಗಿದೆ. ಸರಕಾರವು ಈ ಬಗ್ಗೆ ಗಮನ ಹರಿಸಬೇಕು. ಹಿಂದೂದ್ವೇಷಿ ಚಿತ್ರಕಾರ ಮ.ಫಿ. ಹುಸೇನ್‌ ಇವನು ಹಿಂದೂ ದೇವತೆಗಳ ಅನೇಕ ಅಶ್ಲೀಲ ಚಿತ್ರಗಳನ್ನು ಬಿಡಿಸಿದಾಗ ೧೨೫೦ ದೂರುಗಳು ದಾಖ ಲಾಗಿದ್ದರೂ ಅವನ ವಿರುದ್ಧ ಯಾವುದೇ ಕ್ರಮಕೈಗೊಳ್ಳಲಿಲ್ಲ ಮತ್ತು ಅವನು ದೇಶ ಬಿಟ್ಟು ಕತಾರ ದೇಶಕ್ಕೆ ಓಡಿ ಹೋದನು ಮತ್ತು ಅಲ್ಲಿಯೇ ಮೃತಪಟ್ಟನು. ಇದು ಭಾರತೀಯ ಪ್ರಜಾಪ್ರಭುತ್ವಕ್ಕೆ ಒಳ್ಳೆಯದಲ್ಲ. ಇತರ ಧರ್ಮಗಳು ಇಂತಹ ಅವಮಾನಗಳ ವಿರುದ್ಧ ಕ್ರಮಗೊಳ್ಳುವ ರೀತಿಯಲ್ಲಿ ಹಿಂದೂಗಳು ಕಾನೂನನ್ನು ಕೈಗೆತ್ತಿಕೊಳ್ಳುವುದಿಲ್ಲ. ಇಂತಹ ಹಿಂದೂಗಳ ಕಾನೂನಿನ ಮೇಲೆ ವಿಶ್ವಾಸ ಉಳಿಯಬೇಕೆಂದರೆ ಸರಕಾರ ಕ್ರಮಕೈಗೊಳ್ಳಬೇಕು. ಇಲ್ಲವಾದರೆ ಬಹಿಷ್ಕಾರದ ಘಟನೆಗಳು ಹೆಚ್ಚಾದರೆ ಸಮಾಜದಲ್ಲಿ ಬೇರೆಯೇ ಆದ ಅಸಂತುಷ್ಟಿ ಸೃಷ್ಟಿಯಾಗಬಲ್ಲದು.