|
ಮುಂಬಯಿ – ಫೆಬ್ರುವರಿ ೧೯ ರಂದು ಮಹಾರಾಷ್ಟ್ರದ ಆರಾಧ್ಯ ದೈವ ಛತ್ರಪತಿ ಶಿವಾಜಿ ಮಹಾರಾಜ್ ಇವರ ೩೯೫ ನೇ ಜಯಂತಿಯ ಪ್ರಯುಕ್ತ ಲೋಕಸಭೆಯ ವಿರೋಧ ಪಕ್ಷದ ನಾಯಕ ಮತ್ತು ಕಾಂಗ್ರೆಸ್ಸಿನ ಸಂಸದ ರಾಹುಲ್ ಗಾಂಧಿ ಇವರು ‘ಎಕ್ಸ್’ ನಲ್ಲಿ ಛತ್ರಪತಿ ಶಿವಾಜಿ ಮಹಾರಾಜರಿಗೆ ‘ಶ್ರದ್ಧಾಂಜಲಿ’ ನೀಡಿದರು. ಈ ಪ್ರಕರಣದಲ್ಲಿ ಭಾಜಪ ವಾಗ್ದಾಳಿ ನಡೆಸುತ್ತಾ, ‘ಛತ್ರಪತಿ ಶಿವಾಜಿ ಮಹಾರಾಜ ಜನ್ಮೋತ್ಸವದ ದಿನದಂದು ರಾಹುಲ್ ಗಾಂಧಿ ಇವರು ತಿಳಿದು ತಿಳಿದು ಛತ್ರಪತಿ ಶಿವಾಜಿ ಮಹಾರಾಜರಿಗೆ ಶ್ರದ್ಧಾಂಜಲಿ ನೀಡುವ ವಿಕೃತಿಯನ್ನು ತೋರಿಸಿದ್ದಾರೆ. ಮಹಾಪುರುಷರನ್ನು ಕೇವಲ ರಾಜಕೀಯ ಲಾಭಕ್ಕಾಗಿ ಉಪಯೋಗಿಸುವುದು ಇದು ಕಾಂಗ್ರೆಸ್ಸಿನ ಕೊಳಕು ಮನಸ್ಥಿತಿ ಯಾವಾಗಲೂ ಜನರ ಎದುರಿಗೆ ಬಹಿರಂಗವಾಗುತ್ತದೆ. ಈ ಶಿವಾಜಿ ದ್ರೋಹಿ ಕಾಂಗ್ರೆಸ್ಸಿಗೆ ಎಲ್ಲಾ ಹಿಂದೂ ಬಾಂಧವರು ಎಂದಿಗೂ ಕ್ಷಮಿಸುವುದಿಲ್ಲ” ಎಂದು ಹೇಳಿದೆ.
ಜಯಂತಿಯ ಪ್ರಯುಕ್ತ ಮಾಡಲಾದ ಪೋಸ್ಟ್ ನಲ್ಲಿ ‘ಆದರಂಜಲಿ’ ಎಂದು ಹೇಳಲಾಗುತ್ತದೆ; ಆದರೆ ರಾಹುಲ್ ಗಾಂಧಿ ಇವರು ‘ಶ್ರದ್ಧಾಂಜಲಿ’ ಎಂದು ಹೇಳಿದ್ದಾರೆ. ಅವರ ಪೋಸ್ಟ್ ನಲ್ಲಿನ ಛಾಯಾಚಿತ್ರದಲ್ಲಿ ರಾಹುಲ ಗಾಂಧಿ ಶಿವಾಜಿ ಮಹಾರಾಜರ ಪೂರ್ಣಾಕೃತಿ ಮೂರ್ತಿಯನ್ನು ಕೈಯಲ್ಲಿ ಹಿಡಿದು ತೋರಿಸುತ್ತಿರುವುದು ಕಾಣುತ್ತಿದೆ. ಅವರು, ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯ ಪ್ರಯುಕ್ತ ನಾನು ಅವರಿಗೆ ನಮಿಸುತ್ತೇನೆ ಮತ್ತು ವಿನಮ್ರವಾಗಿ ಶ್ರದ್ಧಾಂಜಲಿ ಅರ್ಪಿಸುತ್ತೇನೆ’, ಎಂದು ಬರೆದಿದ್ದಾರೆ. ತಮ್ಮ ಶೌರ್ಯ ಮತ್ತು ಸಾಹಸದಿಂದ ಅವರು ತಮ್ಮ ಧೈರ್ಯ ಮತ್ತು ಸಮರ್ಪಣೆಯಿಂದ ಧ್ವನಿ ಎತ್ತಲು ಪ್ರೇರಣೆ ನೀಡಿದ್ದಾರೆ. ಅವರ ಜೀವನ ನಮ್ಮೆಲ್ಲರಿಗಾಗಿ ಶಾಶ್ವತ ಪ್ರೇರಣಾ ಸ್ರೋತವಾಗಿರಲಿ’, ಎಂದು ಬರೆದಿದ್ದಾರೆ. ಈ ಪೋಸ್ಟ್ ನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಟೀಕೆಗಳು ಆಗುತ್ತಿವೆ.
ಸಂಪಾದಕೀಯ ನಿಲುವು
|