Stop Attacks On Hindus In Bengal : ಬಂಗಾಳದಲ್ಲಿ ವಕ್ಫ್ ಕಾನೂನಿನ ಹೆಸರಿನಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ಜಿಹಾದಿ ದಾಳಿಗಳನ್ನು ನಿಲ್ಲಿಸಿ! – ವಿಶ್ವ ಹಿಂದೂ ಪರಿಷತ್ತು

ಶ್ರೀ ಮಿಲಿಂದ್ ಪರಾಂಡೆ

ಸಿಲಿಗುರಿ (ಬಂಗಾಳ) – ವಿಶ್ವ ಹಿಂದೂ ಪರಿಷತ್ತಿನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶ್ರೀ. ಮಿಲಿಂದ ಪರಾಂಡೆ ಅವರು ಬಂಗಾಳದಲ್ಲಿ ಶಾಂತಿ, ಸುವ್ಯವಸ್ಥೆ ಮತ್ತು ಕಾನೂನಿನ ಆಳ್ವಿಕೆಯನ್ನು ಸ್ಥಾಪಿಸುವಂತೆ ಹಾಗೂ ವಕ್ಫ್ ಕಾನೂನಿನ ವಿರೋಧದ ಹೆಸರಿನಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ಜಿಹಾದಿ ದಾಳಿಗಳನ್ನು ತಕ್ಷಣವೇ ನಿಲ್ಲಿಸುವಂತೆ ಕರೆ ನೀಡಿದರು. ಪೊಯಲಾ ಬೈಶಾಖ ಮತ್ತು ಶುಭೋ ನವವರ್ಷ ೧೪೩೨ ಬಂಗಾಬದ ನಿಮಿತ್ತ ಸಿಲಿಗುಡಿ ಮಹಾನಗರದ ನಾಗರಿಕರು ಮತ್ತು ಬಂಗಾಳದ ಎಲ್ಲಾ ಜನರಿಗೆ ಶುಭ ಹಾರೈಸಿದ ನಂತರ ಅವರು ಈ ಕರೆ ನೀಡಿದರು.

1. ವಿಶ್ವ ಹಿಂದೂ ಪರಿಷತ್ತಿನ ಸಿಲಿಗುಡಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶ್ರೀ. ಪರಾಂಡೆ ಅವರು, ಬಂಗಾಳದ ಸಚಿವ ಸಿದ್ದಿಕುಲ್ಲಾಹ ಚೌಧರಿ ಅವರ ಪ್ರಚೋದನಕಾರಿ ಹೇಳಿಕೆ ಖಂಡನೀಯವಾಗಿದೆ. ಮುರ್ಶಿದಾಬಾದನಲ್ಲಿ ಹಿಂದೂಗಳ ಮೇಲೆ ನಡೆದ ಜಿಹಾದಿ ದಾಳಿಯಲ್ಲಿ ಮೃತಪಟ್ಟ ಹರಗೋವಿಂದ ದಾಸ ಮತ್ತು ಚಂದನ ದಾಸ ಅವರ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಬೇಕು ಹಾಗೂ ಅಪರಾಧಿಗಳಿಗೆ ಮರಣದಂಡನೆ ವಿಧಿಸಬೇಕು. ತಮ್ಮದೇ ರಾಜ್ಯದಲ್ಲಿ ನಿರಾಶ್ರಿತರಾಗಲು ಅನಿವಾರ್ಯಗೊಳಿಸುವ ಮತ್ತು ಮುರ್ಶಿದಾಬಾದನಿಂದ ಮಾಲದಾದಲ್ಲಿ ಆಶ್ರಯ ಪಡೆದ ಬಂಗಾಳಿ ಹಿಂದೂಗಳನ್ನು ತಕ್ಷಣ ಪುನರ್ವಸತಿಗೊಳಿಸಬೇಕು. ಬಂಗಾಳದಲ್ಲಿ ನಡೆದ ಈ ಘಟನೆ ಕಾಶ್ಮೀರದಲ್ಲಿ ನಡೆದ ಘಟನೆಗಳ ನಿಖರ ಪುನರಾವರ್ತನೆಯಾಗಿದೆ ಎಂದು ಅವರು ಹೇಳಿದರು. (ಮುರ್ಶಿದಾಬಾದನಲ್ಲಿ ಹಿಂದೂಗಳು ನಿರಾಶ್ರಿತರಾಗುವ ಪರಿಸ್ಥಿತಿ ಉಂಟಾಗಿರುವುದು ಪೊಲೀಸರು ಮತ್ತು ಆಡಳಿತಕ್ಕೆ ನಾಚಿಕೆಗೇಡು! – ಸಂಪಾದಕರು)

2. ಶ್ರೀ. ಮಿಲಿಂದ ಪರಾಂಡೆ ಅವರು ಮಾತು ಮುಂದುವರೆಸಿ, ಬಂಗಾಳದ ರಾಜ್ಯ ಸಚಿವ ಫಿರಹಾದ ಹಕೀಮ ಅವರು ಹಿಂದೂಗಳು ತಮ್ಮದೇ ರಾಜ್ಯದಲ್ಲಿ ನಿರಾಶ್ರಿತರಾಗುವ ಬಗ್ಗೆ ನೀಡಿದ ಹೇಳಿಕೆ ಅತ್ಯಂತ ನಾಚಿಕೆಗೇಡು ಮತ್ತು ಖಂಡನೀಯವಾಗಿದೆ. ರಾಜ್ಯ ಸರಕಾರವು ಸಿಲಿಗುಡಿಯಲ್ಲಿ ಮತ್ತು ಬಂಗಾಳದ ಇತರ ಸ್ಥಳಗಳಲ್ಲಿ ವಕ್ಫ್ ಕಾನೂನಿನ ವಿರೋಧದ ಹೆಸರಿನಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಡದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.

3. ಬಂಗಾಳದಲ್ಲಿ ಕೇಂದ್ರ ಸರಕಾರವು ಮಧ್ಯಪ್ರವೇಶಿಸಿ ಹಿಂದೂಗಳ ರಕ್ಷಣೆಗಾಗಿ ಕೇಂದ್ರ ಭದ್ರತಾ ಪಡೆಗಳನ್ನು ತಕ್ಷಣವೇ ನಿಯೋಜಿಸಬೇಕು ಎಂದು ಪರಾಂಡೆ ಅವರು ಒತ್ತಾಯಿಸಿದರು.

ಸಂಪಾದಕೀಯ ನಿಲುವು

ಹಿಂದೂ ಬಹುಸಂಖ್ಯಾತ ರಾಷ್ಟ್ರದಲ್ಲಿ ಹಿಂದೂಗಳು ಇಂತಹ ಬೇಡಿಕೆ ಇಡುವ ಪರಿಸ್ಥಿತಿ ಬರಬಾರದು, ಅಂತಹ ಪರಿಸ್ಥಿತಿಯನ್ನು ಸರಕಾರ ತಾನೇ ನಿರ್ಮಿಸುವುದು ಅಪೇಕ್ಷಿತವಾಗಿದೆ!