Mahakumbh Dharm Samsad : ರಾಹುಲ ಗಾಂಧಿಯನ್ನು ಹಿಂದೂ ಧರ್ಮದಿಂದ ಬಹಿಷ್ಕರಿಸುವ ಪ್ರಸ್ತಾಪವನ್ನು ಧರ್ಮ ಸಂಸತ್ತು ಅಂಗೀಕರಿಸಿತು !

  • ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿಯವರು ಧರ್ಮ ಸಂಸತ್ತಿನಲ್ಲಿ ಮಂಡಿಸಿದ್ದ ಪ್ರಸ್ತಾವನೆ

  • ಮನುಸ್ಮೃತಿಯ ಕುರಿತು ಟೀಕಿಸಿದ ಬಗ್ಗೆ ಸ್ಪಷ್ಟೀಕರಣ ಕೇಳಿದರು

  • ಹಿಂದೂಗಳನ್ನು ಅವಮಾನಿಸಿದ ಅಮೇರಿಕಾ ಅಧ್ಯಕ್ಷ ಟ್ರಂಪ್ ಗೆ ಕ್ಷಮೆಯಾಚಿಸುವಂತೆ ಕೋರಿಕೆ

ಪ್ರಯಾಗರಾಜ – ಮನುಸ್ಮೃತಿಯನ್ನು ಟೀಕಿಸಿದ ನಂತರ ರಾಹುಲ ಗಾಂಧಿಯನ್ನು ಹಿಂದೂ ಧರ್ಮದಿಂದ ಬಹಿಷ್ಕರಿಸುವ ಪ್ರಸ್ತಾಪವನ್ನು ಧರ್ಮ ಸಂಸತ್ತಿನಲ್ಲಿ ಅಂಗೀಕರಿಸಲಾಗಿದೆ. ಈ ಪ್ರಸ್ತಾವನೆಯನ್ನು ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಅವರು ಧರ್ಮ ಸಂಸತ್ತಿನಲ್ಲಿ ಮಂಡಿಸಿದರು. ‘ರಾಹುಲ ಗಾಂಧಿಯವರು ಮಾಡಿರುವ ಟೀಕೆಗೆ ಒಂದು ತಿಂಗಳೊಳಗೆ ಸ್ಪಷ್ಟನೆ ನೀಡಬೇಕು’, ಎಂದು ಧರ್ಮ ಸಂಸತ್ತಿನಲ್ಲಿ ಹೇಳಲಾಗಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧವೂ ಪ್ರಸ್ತಾವನೆ ಮಂಡಿಸಲಾಯಿತು. ಅಮೆರಿಕದಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದ ಹಿಂದೂಗಳನ್ನು ದೇಶದಿಂದ ಗಡೀಪಾರು ಮಾಡಲಾಯಿತು; ಆದರೆ ಅವರಿಗೆ ಹಿಂದೂ ಧರ್ಮದಲ್ಲಿ ನಿಷಿದ್ಧವಾಗಿರುವ ಆಹಾರವನ್ನು ನೀಡಲಾಗಿತ್ತು ಎಂಬ ಆರೋಪಕ್ಕಾಗಿ ಟ್ರಂಪ್ ಸರಕಾರ ಕ್ಷಮೆಯಾಚಿಸಬೇಕೆಂಬ ಬೇಡಿಕೆಯನ್ನೂ ಮಾಡಲಾಯಿತು.

ರಾಹುಲ್ ಗಾಂಧಿ ಯಾವ ಹೇಳಿಕೆ ನೀಡಿದ್ದರು?

ರಾಹುಲ್ ಗಾಂಧಿಯವರು, ಲೋಕಸಭೆಯಲ್ಲಿ ಒಂದು ಭಾಷಣದಲ್ಲಿ ಹಾಥರಸ ಸಾಮೂಹಿಕ ಅತ್ಯಾಚಾರ ಘಟನೆಯನ್ನು ಉಲ್ಲೇಖಿಸುತ್ತಾ, “ಅತ್ಯಾಚಾರ ಎಸಗಿದವರು ಹೊರಗೆ ಓಡಾಡುತ್ತಿದ್ದಾರೆ ಮತ್ತು ಹುಡುಗಿಯ ಕುಟುಂಬ ತಮ್ಮ ಮನೆಯಲ್ಲಿ ಬಂಧನದಲ್ಲಿದ್ದಾರೆ. ಹುಡುಗಿಯ ಕುಟುಂಬದವರಿಗೆ ಹೊರ ಹೋಗಲು ಸಾಧ್ಯವಾಗುತ್ತಿಲ್ಲ; ಕಾರಣ ಅಪರಾಧಿಗಳು ಅವರನ್ನು ಹೆದರಿಸುತ್ತಾರೆ. ಹುಡುಗಿಯ ಅಂತ್ಯಸಂಸ್ಕಾರಕ್ಕೂ ಅನುಮತಿ ನಿರಾಕರಿಸಲಾಯಿತು ಮತ್ತು ಮುಖ್ಯಮಂತ್ರಿಗಳು ಈ ವಿಷಯದಲ್ಲಿ ಬಹಿರಂಗವಾಗಿ ಪ್ರಸಾರಮಾಧ್ಯಮಗಳ ಎದುರು ಅಸತ್ಯ ನುಡಿದರು. ಅತ್ಯಾಚಾರಿಗಳು ಹೊರಗೆ ತಿರುಗಾಡಬಹುದು ಮತ್ತು ಅತ್ಯಾಚಾರಕ್ಕೊಳಗಾದ ಹುಡುಗಿ ಮತ್ತು ಆಕೆಯ ಕುಟುಂಬ ಮನೆಯಲ್ಲಿಯೇ ಇರಬೇಕು ಎಂದು ಸಂವಿಧಾನದಲ್ಲಿ ಅಲ್ಲ ? ಇದು ನಿಮ್ಮ ಮನುಸ್ಮೃತಿಯಲ್ಲಿ ಬರೆದಿದೆ.’ ಎಂದು ಹೇಳಿದ್ದರು.