(‘ಎನ್ ಸಿ ಇ ಆರ್ ಟಿ’ ಎಂದರೆ ನ್ಯಾಷನಲ್ ಕೌನ್ಸಿಲ್ ಆಫ್ ಎಜುಕೇಷನಲ್ ರಿಸರ್ಚ್ ಅಂಡ್ ಟ್ರೈನಿಂಗ್ – ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಪರಿಷತ್ತು)

ತಿರುವನಂತಪುರಂ (ಕೇರಳ) – ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಪರಿಷತ್ತು ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಹಿನ್ನೆಲೆಯಲ್ಲಿ ಅನೇಕ ಪುಸ್ತಕಗಳ ಆಂಗ್ಲ ಹೆಸರುಗಳನ್ನು ಬದಲಾಯಿಸಿ ಹಿಂದಿ ಮಾಡಿದೆ. ಇದನ್ನು ಕೇರಳದ ಸಾಮಾನ್ಯ ಶಿಕ್ಷಣ ಸಚಿವ ವಿ. ಶಿವನಕುಟ್ಟಿ ವಿರೋಧಿಸಿ ಹಿಂಪಡೆಯುವಂತೆ ಒತ್ತಾಯಿಸಿದ್ದಾರೆ.
ಅವರು ಮಾತನಾಡಿ, ‘ಇದು ಗಂಭೀರವಾದ ಅತಾರ್ಕಿಕತೆ ಮತ್ತು ಭಾರತದ ಭಾಷಾ ವೈವಿಧ್ಯತೆಯನ್ನು ದುರ್ಬಲಗೊಳಿಸುವ ಕ್ರಮವಾಗಿದೆ. ಕೇರಳ, ಇತರ ಹಿಂದಿಯೇತರ ಭಾಷೆಯ ರಾಜ್ಯಗಳಂತೆ, ಭಾಷಾ ವೈವಿಧ್ಯತೆಯನ್ನು ರಕ್ಷಿಸಲು ಮತ್ತು ಪ್ರಾದೇಶಿಕ ಸಾಂಸ್ಕೃತಿಕ ಸ್ವಾತಂತ್ರ್ಯಕ್ಕೆ ಆದ್ಯತೆ ನೀಡಲು ಬದ್ಧವಾಗಿದೆ. ಎನ್.ಸಿ.ಇ.ಆರ್.ಟಿ ನಿರ್ಧಾರವು ಸಂವಿಧಾನದ ಮೌಲ್ಯಗಳಿಗೆ ವಿರುದ್ಧವಾಗಿದೆ. ಪಠ್ಯಪುಸ್ತಕಗಳ ಶೀರ್ಷಿಕೆಗಳು ಕೇವಲ ಹೆಸರುಗಳಲ್ಲ, ಬದಲಾಗಿ ಅವು ಮಕ್ಕಳ ಗ್ರಹಿಕೆ ಮತ್ತು ಕಲ್ಪನಾ ಶಕ್ತಿಯನ್ನು ರೂಪಿಸುತ್ತವೆ.’’ಎಂದು ಹೇಳಿದರು.
ಎನ್.ಸಿ.ಇ.ಆರ್.ಟಿ.ಯು ಬದಲಾಯಿಸಲಾದ ಪುಸ್ತಕಗಳ ಹೆಸರುಗಳು
1. ಒಂದನೇ ಮತ್ತು ಎರಡನೇ ತರಗತಿಯ ಆಂಗ್ಲ ಪುಸ್ತಕಗಳ ಹೆಸರನ್ನು ‘ಮೇರಿಗೋಲ್ಡ್’ನಿಂದ ‘ಮೃದಂಗ’ ಎಂದು ಬದಲಾಯಿಸಲಾಗಿದೆ. ಮೂರನೇ ತರಗತಿಯ ಪುಸ್ತಕದ ಹೆಸರನ್ನು ‘ಸಂತೂರ್’ ಎಂದು ಮಾಡಲಾಗಿದೆ.
2. ಆರನೇ ತರಗತಿಯ ಆಂಗ್ಲ ಪುಸ್ತಕದ ಹೆಸರನ್ನು ‘ಹನಿ ಸಕಲ್ (HONEYSUCKLE)’ನಿಂದ ‘ಪೂರ್ವಿ’ ಎಂದು ಬದಲಾಯಿಸಲಾಗಿದೆ.
ಸಂಪಾದಕೀಯ ನಿಲುವುಭಾರತೀಯ ‘ಹಿಂದಿ’ಯ ಬದಲು ವಿದೇಶಿ ‘ಆಂಗ್ಲಭಾಷೆ’ಯ ಗುಲಾಮಗಿರಿಯನ್ನು ಮಾಡುವ ಕೇರಳದ ಕಮ್ಯುನಿಸ್ಟ್ ಶಿಕ್ಷಣ ಸಚಿವರು ವಿದ್ಯಾರ್ಥಿಗಳ ಮುಂದೆ ಯಾವ ಆದರ್ಶವನ್ನು ಇಡುತ್ತಿದ್ದಾರೆ ಎಂಬುದನ್ನು ಗಮನಿಸಬೇಕು! |